Virat Kohli Fined: ಟಾಟಾ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) 2023ರ ಕಳೆದ ದಿನದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮುಖಾಮುಖಿಯಾಗಿತ್ತು. ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಐಪಿಎಲ್ ನೀತಿ ಸಂಹಿತೆ ಉಲ್ಲಂಘಿಸಿದ್ದಕ್ಕಾಗಿ ರಾಯಲ್ ಚಾಲೆಂಜರ್ಸ್ ಬೆಂಗಳೂರು (ಆರ್‌ಸಿಬಿ) ಬ್ಯಾಟರ್ ವಿರಾಟ್ ಕೊಹ್ಲಿಗೆ ಪಂದ್ಯ ಶುಲ್ಕದ ಶೇಕಡಾ 10 ರಷ್ಟು ದಂಡ ವಿಧಿಸಲಾಗಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Photos: ಬೆಸ್ಟ್ ಫ್ರೆಂಡ್ ಜೊತೆ ಸಲಿಂಗ ಮದುವೆಯಾದ 4 ವಿಶ್ವಕಪ್ ಗೆದ್ದ ಸ್ಟಾರ್ ಕ್ರಿಕೆಟ್ ಆಟಗಾರ್ತಿ!


34 ವರ್ಷ ವಯಸ್ಸಿನ ವಿರಾಟ್ ಕೊಹ್ಲಿ, ಕಳೆದ ಪಂದ್ಯದಲ್ಲಿ ಕೇವಲ 6 ರನ್ ಗಳಿಸಿ, ಬೌಲರ್ ಆಕಾಶ್ ಸಿಂಗ್ ಅವರ ಕೈಯಿಂದ ಔಟಾದರು.


ಮೊದಲು ಬ್ಯಾಟ್ ಮಾಡಿದ ಚೆನ್ನೈ ಡೆವೊನ್ ಕಾನ್ವೆ ಮತ್ತು ಶಿವಂ ದುಬೆ ಅವರ ನೆರವಿನಿಂದ 226 ರನ್ ಗಳಿಸಿತು. ರನ್-ಚೇಸ್‌ ಮಾಡಲು ಬಂದ ಆರ್ ಸಿ ಬಿ ಆರಂಭಿಕ ಆಘಾತ ಅನುಭವಿಸಿತು. ಆದರೆ ಆ ಬಳಿಕ ಬಂದ ಫಾಫ್ ಡು ಪ್ಲೆಸಿಸ್ ಮತ್ತು ಗ್ಲೆನ್ ಮ್ಯಾಕ್ಸ್‌ವೆಲ್ ಭೀಕರ ಜೊತೆಯಾಟವಾಡಿ, RCB ಪಂದ್ಯವನ್ನು ಗೆಲ್ಲುವ ಹಾದಿಗೆ ತಂದಿದ್ದರು. ಆದರೆ ಕೊನೆಯ ಐದು ಓವರ್‌ಗಳಲ್ಲಿ 58 ರನ್‌’ಗಳ ಅಗತ್ಯವಿದ್ದಾಗ ಅನುಭವಿ ದಿನೇಶ್ ಕಾರ್ತಿಕ್ ಕೆಲವು ಬೌಂಡರಿಗಳನ್ನು ಬಾರಿಸಿ ಪೆವಿಲಿಯನ್’ಗೆ ಮರಳಿದರು.


ಇನ್ನು ವಿರಾಟ್ ಈ ಸೀಸನ್’ನಲ್ಲಿ ಆಡಿದ 5 ಪಂದ್ಯಗಳಲ್ಲಿ 55 ಸರಾಸರಿಯೊಂದಿಗೆ 220 ರನ್ ಗಳಿಸಿದ್ದಾರೆ. ಇದರಲ್ಲಿ ಅಜೇಯ 82 ರನ್ ಕೂಡ ಸೇರಿದೆ.


ಇದನ್ನೂ ಓದಿ: Virat Kohli: ವಿರಾಟ್ ಕೊಹ್ಲಿಗೆ ‘ಐಟಂ’ ಡ್ಯಾನ್ಸ್ ಮಾಡೋ ಆಫರ್ ಕೊಟ್ಟ ‘ದೇಶದ್ರೋಹಿ’ ನಟ!


ಇನ್ನು ಈ ಪಂದ್ಯದ ಗೆಲುವಿನೊಂದಿಗೆ ಸಿ ಎಸ್‌ ಕೆ ಆರು ಅಂಕಗಳೊಂದಿಗೆ ಮೂರನೇ ಸ್ಥಾನಕ್ಕೆ ಏರಿದೆ. ರಾಜಸ್ಥಾನ್ ರಾಯಲ್ಸ್ ಎಂಟು ಅಂಕಗಳೊಂದಿಗೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.