Virat Kohli: ವಿರಾಟ್ ಕೊಹ್ಲಿಗೆ ‘ಐಟಂ’ ಡ್ಯಾನ್ಸ್ ಮಾಡೋ ಆಫರ್ ಕೊಟ್ಟ ‘ದೇಶದ್ರೋಹಿ’ ನಟ!

Virat Kohli Item Dance Offer: ವಿರಾಟ್ ಅವರ ವ್ಯಕ್ತಿತ್ವ ಮಕ್ಕಳಂತೆ. ಮೈದಾನದಲ್ಲಿಯೇ ತುಂಟಾಟ ಮಾಡೋದನ್ನು ಅನೇಕ ಬಾರಿ ನಾವೆಲ್ಲರೂ ನೋಡಿದ್ದೇವೆ. ಇದೀಗ ಅವರು ವ್ಯಾಯಾಮ ಮಾಡುತ್ತಾ ತಮಾಷೆಯಾಗಿ ಡ್ಯಾನ್ಸ್ ಮೂವ್‌’ಗಳನ್ನು ಮಾಡಿದ್ದಾರೆ. ಇದರ ವಿಡಿಯೋವನ್ನು ಎಡಿಟ್ ಮಾಡಲಾಗಿದ್ದು 21 ಸೆಕೆಂಡುಗಳ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ.

Written by - Bhavishya Shetty | Last Updated : Apr 16, 2023, 11:51 PM IST
    • ವಿರಾಟ್ ಮೈದಾನದಲ್ಲಿಯೇ ತುಂಟಾಟ ಮಾಡೋದನ್ನು ಅನೇಕ ಬಾರಿ ನಾವೆಲ್ಲರೂ ನೋಡಿದ್ದೇವೆ.
    • ವ್ಯಾಯಾಮ ಮಾಡುತ್ತಾ ತಮಾಷೆಯಾಗಿ ಡ್ಯಾನ್ಸ್ ಮೂವ್‌’ಗಳನ್ನು ಮಾಡಿದ್ದಾರೆ.
    • ಇದರ ವಿಡಿಯೋವನ್ನು ಎಡಿಟ್ ಮಾಡಲಾಗಿದ್ದು 21 ಸೆಕೆಂಡುಗಳ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ.
Virat Kohli: ವಿರಾಟ್ ಕೊಹ್ಲಿಗೆ ‘ಐಟಂ’ ಡ್ಯಾನ್ಸ್ ಮಾಡೋ ಆಫರ್ ಕೊಟ್ಟ ‘ದೇಶದ್ರೋಹಿ’ ನಟ! title=
Virat Kohli-KRK

Virat Kohli Item Dance Offer: ಕೆ ಆರ್‌ ಕೆ ಎಂದೇ ಖ್ಯಾತರಾಗಿರುವ ನಟ ಕಮಲ್ ಆರ್ ಖಾನ್ ಮತ್ತೆ ಸುದ್ದಿಯಾಗಿದ್ದಾರೆ. ಯಾವತ್ತೂ ಸಹ ತನ್ನ ತಪ್ಪು ವಿಚಾರಗಳಿಂದಲೇ ಸದ್ದು ಮಾಡುತ್ತಾ, ಸೆಲೆಬ್ರಿಟಿಗಳ ವಿರುದ್ಧ ಗೇಲಿ ಮಾಡುತ್ತಾ ಇರುವ ಕಮಲ್, ಇದೀಗ ಭಾರತೀಯ ಕ್ರಿಕೆಟ್’ನ ಸ್ಟಾರ್ ಆಟಗಾರ ವಿರಾಟ್ ಕೊಹ್ಲಿ ವಿಚಾರದಲ್ಲಿ ಸಿಕ್ಕಿಹಾಕಿಕೊಂಡಿದ್ದಾರೆ.

ವಿರಾಟ್ ಅವರ ವ್ಯಕ್ತಿತ್ವ ಮಕ್ಕಳಂತೆ. ಮೈದಾನದಲ್ಲಿಯೇ ತುಂಟಾಟ ಮಾಡೋದನ್ನು ಅನೇಕ ಬಾರಿ ನಾವೆಲ್ಲರೂ ನೋಡಿದ್ದೇವೆ. ಇದೀಗ ಅವರು ವ್ಯಾಯಾಮ ಮಾಡುತ್ತಾ ತಮಾಷೆಯಾಗಿ ಡ್ಯಾನ್ಸ್ ಮೂವ್‌’ಗಳನ್ನು ಮಾಡಿದ್ದಾರೆ. ಇದರ ವಿಡಿಯೋವನ್ನು ಎಡಿಟ್ ಮಾಡಲಾಗಿದ್ದು 21 ಸೆಕೆಂಡುಗಳ ಕ್ಲಿಪ್ ಅನ್ನು ಪೋಸ್ಟ್ ಮಾಡಿದ್ದಾರೆ.

ಇದನ್ನೂ ಓದಿ: MS Dhoni: ಕ್ಯಾಪ್ಟನ್ ಕೂಲ್ ಎಂಎಸ್ ಧೋನಿಗೆ ಕಿಸ್ ಕೊಟ್ಟ ಈ ಸ್ಟಾರ್ ನಟಿಯ ಅತ್ತೆ! ಫೋಟೋ ನೋಡಿ

ವೀಡಿಯೊ ನೋಡೋದಕ್ಕೆ ಸಖತ್ ಕಾಮಿಡಿ ಆಗಿದೆ. ಆದರೆ ಕೆ ಆರ್‌ ಕೆ ಮಾತ್ರ, “ದೇಶದ್ರೋಹಿ-2 ಚಿತ್ರದಲ್ಲಿ ಕೊಹ್ಲಿಗೆ ಐಟಂ ಡ್ಯಾನ್ಸ್’ಗೆ ಕುಣಿಯುವ ಆಫರ್ ನೀಡುತ್ತೇನೆ” ಎಂದು ಕ್ಯಾಪ್ಶನ್ ಹಾಕಿ, ಪೋಸ್ಟ್ ಮಾಡಿದ್ದಾರೆ. ಈ ಟ್ವೀಟ್‌’ಗೆ ಕೊಹ್ಲಿ ಯಾವುದೇ ಪ್ರತಿಕ್ರಿಯೆ ನೀಡಿಲ್ಲ. ಇದನ್ನು ಕಟುವಾಗಿ ತಿರಸ್ಕರಿಸಿದಂತೆ ಕಾಣುತ್ತಿದೆ.

 

ಈ ಎಲ್ಲದರ ಮಧ್ಯೆ ಕಾಮೆಂಟ್ ಸೆಕ್ಷನ್’ನಲ್ಲಿ ವಿರಾಟ್ ಫ್ಯಾನ್ಸ್, ನಟನಿಗೆ ಹಿಗ್ಗಾಮುಗ್ಗ ಕ್ಲಾಸ್ ತೆಗೆದುಕೊಂಡಿದ್ದಾರೆ. ಓರ್ವ ನೆಟ್ಟಿಗ, “ಈ ಒಂದು ಪೋಸ್ಟ್’ನಿಂದ ನೀನು ಜೀವಮಾನದಲ್ಲಿ ಸಂಪಾದಿಸಿದ ಹೆಸರು, ಪ್ರಸಿದ್ಧಿ ಮಣ್ಣುಪಾಲಾಯಿತು” ಎಂದು ಹೇಳಿದ್ದಾರೆ.

ಇದನ್ನೂ ಓದಿ: IPL 2023: ಹ್ಯಾರಿ ಬ್ರೂಕ್ ಅಬ್ಬರದ ಶತಕ, ಹೈದರಾಬಾದ್ ಗೆ 23 ರನ್ ಗಳ ಭರ್ಜರಿ ಗೆಲುವು 

ಇನ್ನು ವಿರಾಟ್ ಅವರ ಮುಂದಿನ ಪಂದ್ಯ ಸಿ ಎಸ್ ಕೆ ವಿರುದ್ಧ ನಡೆಯಲಿದ್ದು, ಈ ಪಂದ್ಯ ಅನೇಕ ವಿಶೇಷತೆಗಳಿಂದ ಕೂಡಿರಲಿದೆ. ಒಂದೆಡೆ ತವರಿನಲ್ಲಿ ಆರ್ ಸಿಬಿ ಆಡುತ್ತಿದೆ, ಧೋನಿಗೆ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಸಖತ್ ಕ್ರೇಜ್ ಇದೆ. ಈ ಪಂದ್ಯದ ಕ್ರೇಜ್ ಯಾವ ಮಟ್ಟಕ್ಕೆ ಇದೆ, ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಚೆನ್ನೈ ಸೂಪರ್ ಕಿಂಗ್ಸ್ ನಡುವಿನ ಪಂದ್ಯದ ಟಿಕೆಟ್‌ಗಳು ಒಂದೇ ದಿನದಲ್ಲಿ ಮಾರಾಟವಾಗುತ್ತವೆ. ಭಾರತೀಯ ಕ್ರಿಕೆಟ್‌ನ ಇಬ್ಬರು ದಿಗ್ಗಜರಾದ ವಿರಾಟ್ ಕೊಹ್ಲಿ ಮತ್ತು ಎಂಎಸ್ ಧೋನಿ ನಡುವಿನ ಪಂದ್ಯವನ್ನು ವೀಕ್ಷಿಸಲು ಅಭಿಮಾನಿಗಳು ಕಾಯುತ್ತಿದ್ದಾರೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News