Team Indiaದ ಬ್ರಹ್ಮಾಸ್ತ್ರ RCB ಕೈಯಲ್ಲಿ! ಬೆಂಗಳೂರಿಗೆ IPL ಕಪ್; ಭಾರತಕ್ಕೆ WTC ಟ್ರೋಫಿ ಗೆದ್ದುಕೊಡೋದು ಈತನೇ…
Royal Challengers Bengaluru: ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2023 ರಲ್ಲಿ ತನ್ನ ತಂಡಕ್ಕೆ ಬ್ರಹ್ಮಾಸ್ತ್ರಕ್ಕಿಂತ ಮಿಗಿಲಾದ ಓರ್ವ ಬೌಲರ್’ನನ್ನು ಸೇರಿಸಿಕೊಂಡಿದೆ. ಈತ ಬೇರಾರೂ ಅಲ್ಲ, ವೇಗದ ಬೌಲರ್ ಮೊಹಮ್ಮದ್ ಸಿರಾಜ್. ಈತನ ಮಾರಣಾಂತಿಕ ಬೌಲಿಂಗ್’ಗೆ ಇಂದು ಪಂಜಾಬ್ ತತ್ತರಿಸಿ ಹೋಗಿದೆ.
Royal Challengers Bengaluru: ಐಪಿಎಲ್ 2023ರಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಆಡಿದ 6 ಪಂದ್ಯಗಳಲ್ಲಿ 3ನ್ನು ಗೆದ್ದಿದೆ. ಈ ಮೂಲಕ ತಂಡ 6 ಅಂಕಗಳನ್ನು ಪಡೆದು ಪಾಯಿಂಟ್ಸ್ ಟೇಬಲ್’ನಲ್ಲಿ ಐದನೇ ಸ್ಥಾನದಲ್ಲಿದೆ. ಇನ್ನು ಈ ಸೀಸನ್’ನಲ್ಲಿ ಆರ್ ಸಿ ಬಿ ತಂಡ ಅತ್ಯುತ್ತಮ ಪ್ರದರ್ಶನ ನೀಡುತ್ತಿದೆ. ಇದಕ್ಕೆ ಕಾರಣ ತಂಡದಲ್ಲಿರುವ ಬ್ರಹ್ಮಾಸ್ತ್ರ. ಇದುವರೆಗೆ ನಡೆದ ಪಂದ್ಯಗಳಲ್ಲಿ ಈ ಬ್ರಹ್ಮಾಸ್ತ್ರ ಅಬ್ಬರಿಸಿದ್ದು ಅಷ್ಟಿಷ್ಟಲ್ಲ.
ಇದನ್ನೂ ಓದಿ: ಹರಿದ ಚಡ್ಡಿ ವರ್ಷಪೂರ್ತಿ ಹಾಕೋರ ಗಮನಕ್ಕೆ.. ಒಳಉಡುಪುಗಳಿಗೂ ಇದೆ Expire Date! ಹೀಗೆ ತಿಳಿಯಿರಿ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಐಪಿಎಲ್ 2023 ರಲ್ಲಿ ತನ್ನ ತಂಡಕ್ಕೆ ಬ್ರಹ್ಮಾಸ್ತ್ರಕ್ಕಿಂತ ಮಿಗಿಲಾದ ಓರ್ವ ಬೌಲರ್’ನನ್ನು ಸೇರಿಸಿಕೊಂಡಿದೆ. ಈತ ಬೇರಾರೂ ಅಲ್ಲ, ವೇಗದ ಬೌಲರ್ ಮೊಹಮ್ಮದ್ ಸಿರಾಜ್. ಈತನ ಮಾರಣಾಂತಿಕ ಬೌಲಿಂಗ್’ಗೆ ಇಂದು ಪಂಜಾಬ್ ತತ್ತರಿಸಿ ಹೋಗಿದೆ.
ಇದುವರೆಗೆ ಆಡಿರುವ 6 ಪಂದ್ಯಗಳಲ್ಲಿ ಸಿರಾಜ್ 12 ವಿಕೆಟ್’ಗಳನ್ನು ಕಬಳಿಸಿದ್ದಾರೆ. ಈ ಮೂಲಕ ಪ್ರಸ್ತುತ ಪರ್ಪಲ್ ಕ್ಯಾಪ್’ನ ರೇಸ್’ನಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಅವರ ಪ್ರದರ್ಶನ ಹೀಗೆಯೇ ಮುಂದುವರಿದರೆ ಆರ್‌ಸಿಬಿ ತಂಡ 15 ವರ್ಷಗಳ ಐಪಿಎಲ್ ಟ್ರೋಫಿ ಗೆಲ್ಲುವ ಕನಸು ನನಸಾಗುವುದು ಖಚಿತ.
ಐಪಿಎಲ್ 2023ರ 27 ನೇ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡವು ಪಂಜಾಬ್ ಕಿಂಗ್ಸ್ ಅನ್ನು 24 ರನ್‌ಗಳಿಂದ ಸೋಲಿಸಿತು. ಈ ಪಂದ್ಯದಲ್ಲಿ RCB ವೇಗಿ ಮೊಹಮ್ಮದ್ ಸಿರಾಜ್ ಅತ್ಯಂತ ಅಪಾಯಕಾರಿ ಬೌಲಿಂಗ್ ಮಾಡಿದ್ದಾರೆ. ಇದುವರೆಗಿನ ಐಪಿಎಲ್’ನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಸಿರಾಜ್ 4 ಓವರ್’ಗಳಲ್ಲಿ 21 ರನ್ ನೀಡಿ 4 ವಿಕೆಟ್ ಪಡೆದರು. ಈ ಪ್ರದರ್ಶನಕ್ಕಾಗಿ ಸಿರಾಜ್ ಪಂದ್ಯಶ್ರೇಷ್ಠ ಪ್ರಶಸ್ತಿಯನ್ನೂ ಪಡೆದರು.
ಇದನ್ನೂ ಓದಿ: ವಿರಾಟ್ ಅಲ್ಲ… IPLನ ಶ್ರೀಮಂತ ಕ್ಯಾಪ್ಟನ್ ಇವರೇ ನೋಡಿ! ಈ ಕ್ರಿಕೆಟಿಗರ ಆದಾಯ ನೋಡಿದ್ರೆ ಶಾಕ್ ಆಗ್ತೀರ
ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಇದುವರೆಗೆ 6 ಪಂದ್ಯಗಳನ್ನು ಆಡಿದ್ದು, ಅದರಲ್ಲಿ 3 ಪಂದ್ಯಗಳನ್ನು ಗೆದ್ದಿದೆ. ಇದೀಗ ತಂಡ 6 ಅಂಕಗಳೊಂದಿಗೆ ಪಾಯಿಂಟ್ಸ್ ಪಟ್ಟಿಯಲ್ಲಿ ಐದನೇ ಸ್ಥಾನದಲ್ಲಿದೆ. ಆರ್’ಸಿಬಿ ತಂಡ ಕೋಲ್ಕತ್ತಾ ನೈಟ್ ರೈಡರ್ಸ್, ಲಕ್ನೋ ಸೂಪರ್ ಜೈಂಟ್ಸ್ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧದ ಪಂದ್ಯಗಳಲ್ಲಿ ಸೋತಿದ್ದರೆ, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ವಿರುದ್ಧ ಗೆದ್ದಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ