IPL ಮಧ್ಯೆ ಕಾಮೆಂಟೇಟರ್ ಬಗ್ಗೆ ವ್ಯಂಗ್ಯ ಮಾತುಗಳನ್ನಾಡಿದ ಈ ವಿದೇಶಿ ಆಟಗಾರ! ಸೂಜಿಯಿಂದ ಚುಚ್ಚಿದಂತಿದೆ…

Jos Buttler's statement about the commentator: ಐಪಿಎಲ್ ರಾಜಸ್ಥಾನ್ ರಾಯಲ್ಸ್ ಮತ್ತು ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಮಾತನಾಡಿದ್ದು, “ಕಾಮೆಂಟೇಟರ್ ಒಬ್ಬ ಆಟಗಾರನನ್ನು ಟೀಕಿಸಿದರೆ, ಅದು ಅವನ ಕೆಲಸ ಎಂದು ಮುನ್ನಡೆಯಬೇಕು. ಪರಿಸ್ಥಿತಿಗಳನ್ನು ಒಪ್ಪಿಕೊಳ್ಳುವುದು ಪ್ರತೀ ಕ್ರಿಕೆಟಿಗನ ವೃತ್ತಿಜೀವನದ ಅವಿಭಾಜ್ಯ ಅಂಗವಾಗಿರಬೇಕು” ಎಂದು ಹೇಳಿದ್ದಾರೆ.

Written by - Bhavishya Shetty | Last Updated : Apr 20, 2023, 08:52 PM IST
    • ಭಾರತೀಯ ಆಟಗಾರರಿಗೆ ಜನರು ನೀಡುವ ಪ್ರೀತಿ ಮತ್ತು ಬೆಂಬಲ ನಂಬಲಾಸಾಧ್ಯವಾಗಿದೆ
    • ಭಾರತವು ಈ ಕ್ರಿಕೆಟ್ ಆಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ
    • 'ಹ್ಯೂಮನ್ಸ್ ಆಫ್ ಬಾಂಬೆ'ಗೆ ನೀಡಿದ ಸಂದರ್ಶನದಲ್ಲಿ ಬಹಳ ಅರ್ಥಪೂರ್ಣವಾಗಿ ಮಾತನಾಡಿದ್ದಾರೆ
IPL ಮಧ್ಯೆ ಕಾಮೆಂಟೇಟರ್ ಬಗ್ಗೆ ವ್ಯಂಗ್ಯ ಮಾತುಗಳನ್ನಾಡಿದ ಈ ವಿದೇಶಿ ಆಟಗಾರ! ಸೂಜಿಯಿಂದ ಚುಚ್ಚಿದಂತಿದೆ… title=
Jos Buttler

Jos Buttler's statement about the commentator: ಐಪಿಎಲ್ 2023ರ 26 ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಲಕ್ನೋ ಸೂಪರ್ ಜೈಂಟ್ಸ್ ನಡುವೆ ಬಹಳ ರೋಚಕ ಪಂದ್ಯ ನಡೆದಿದೆ. ರಾಜಸ್ಥಾನದ ಸವಾಯಿ ಮಾನ್ಸಿಂಗ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಲಖನೌ 10 ರನ್‌ಗಳ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಲಖನೌ ತಂಡ ಪಾಯಿಂಟ್ಸ್ ಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದೆ.

ಇದನ್ನೂ ಓದಿ: ಇನ್‌ಸ್ಟಾಗ್ರಾಮ್‌ನಲ್ಲಿ ಸೌರವ್ ಗಂಗೂಲಿಯನ್ನು ಅನ್‌ಫಾಲೋ ಮಾಡಿದ ಕೊಹ್ಲಿ 

ರಾಜಸ್ಥಾನ್ ರಾಯಲ್ಸ್ ಮತ್ತು ಇಂಗ್ಲೆಂಡ್ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಜೋಸ್ ಬಟ್ಲರ್ ಮಾತನಾಡಿದ್ದು, “ಕಾಮೆಂಟೇಟರ್ ಒಬ್ಬ ಆಟಗಾರನನ್ನು ಟೀಕಿಸಿದರೆ, ಅದು ಅವನ ಕೆಲಸ ಎಂದು ಮುನ್ನಡೆಯಬೇಕು. ಪರಿಸ್ಥಿತಿಗಳನ್ನು ಒಪ್ಪಿಕೊಳ್ಳುವುದು ಪ್ರತೀ ಕ್ರಿಕೆಟಿಗನ ವೃತ್ತಿಜೀವನದ ಅವಿಭಾಜ್ಯ ಅಂಗವಾಗಿರಬೇಕು” ಎಂದು ಹೇಳಿದ್ದಾರೆ.

'ಹ್ಯೂಮನ್ಸ್ ಆಫ್ ಬಾಂಬೆ'ಗೆ ನೀಡಿದ ಸಂದರ್ಶನದಲ್ಲಿ ಬಹಳ ಅರ್ಥಪೂರ್ಣವಾಗಿ ಮಾತನಾಡಿದ್ದಾರೆ. “ಪರಿಸ್ಥಿತಿ ಮತ್ತು ಇತರರ ಹೇಳಿಕೆಗಳನ್ನು ಒಪ್ಪಿಕೊಳ್ಳುವುದು ಒಬ್ಬ ಕ್ರಿಕೆಟಿಗನ ಕೆಲಸ. ಕಾಮೆಂಟೇಟರ್ ತಮ್ಮ ಅಭಿಪ್ರಾಯವನ್ನು ನೀಡಿದರೆ ಅದನ್ನು ಸ್ವೀಕರಿಸಿ ಅಲ್ಲಿಯೇ ಬಿಟ್ಟುಬಿಡಿ. ಅವರು ನನ್ನನ್ನು ಟೀಕಿಸಿದರೆ ಅದು ನನ್ನ ಮೇಲಿನ ವೈಯಕ್ತಿಕ ದಾಳಿಯಲ್ಲ ಎಂದು ತಿಳಿಯಿರಿ” ಎಂದು ಹೇಳಿದರು.

ಸೀಮಿತ ಓವರ್‌’ಗಳಲ್ಲಿ ಇಂಗ್ಲೆಂಡ್‌ನ ನಾಯಕತ್ವ ವಹಿಸಿದ್ದ ಬಟ್ಲರ್, “ತಾನು ಯಾವಾಗಲೂ ಆಲ್ ಫಾರ್ಮ್ಯಾಟ್ ಕ್ರಿಕೆಟಿಗನಾಗಲು ಬಯಸಿದ್ದೆ. ಆದರೆ ಟೆಸ್ಟ್ ಕ್ರಿಕೆಟ್‌’ನಲ್ಲಿ ಆಡಲು ಸಾಧ್ಯವಾಗದಿರುವುದು ಇನ್ನೂ ತನ್ನನ್ನು ಕಾಡುತ್ತಿದೆ” ಎಂದು ಹೇಳಿದ್ದಾರೆ.

ಇದನ್ನೂ ಓದಿ:ನೋಡಲು ಸಣಕಲು… ಆದ್ರೆ World Cupನಲ್ಲಿ ಟೀಂ ಇಂಡಿಯಾ ಆನೆಬಲ ತುಂಬಲಿದ್ದಾನೆ ಈ ಆಟಗಾರ! ಎಂಟ್ರಿ ಕನ್ಫರ್ಮ್?

ಭಾರತೀಯ ಕ್ರಿಕೆಟಿಗರ ಬಗ್ಗೆ ಹೇಳಿಕೆ:

ಭಾರತೀಯ ಆಟಗಾರರಿಗೆ ಜನರು ನೀಡುವ ಪ್ರೀತಿ ಮತ್ತು ಬೆಂಬಲ ನಂಬಲಾಸಾಧ್ಯವಾಗಿದೆ ಎಂದು ಬಟ್ಲರ್ ಭಾರತೀಯ ಆಟಗಾರರ ಬಗ್ಗೆ ಹೇಳಿದರು. ಇನ್ನು ಅಕ್ಟೋಬರ್-ನವೆಂಬರ್‌’ನಲ್ಲಿ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌  ಬಗ್ಗೆ ಮಾತನಾಡಿದ ಬಟ್ಲರ್, ಭಾರತವು ಈ ಕ್ರಿಕೆಟ್ ಆಡಲು ಅತ್ಯುತ್ತಮ ಸ್ಥಳಗಳಲ್ಲಿ ಒಂದಾಗಿದೆ ಎಂದು ಹೇಳಿದರು.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ

Trending News