MI vs DC: ಸೂರ್ಯಕುಮಾರ್ ಕಣ್ಣಿಗೆ ಬಾಲ್ ತಗುಲಿ ಗಂಭೀರ ಗಾಯ! ಶಾಕಿಂಗ್ ವಿಡಿಯೋ ನೋಡಿ
Suryakumar Yadav Injury: ಮುಂಬೈ ಇಂಡಿಯನ್ಸ್ ಪರ ಪಿಯೂಷ್ ಚಾವ್ಲಾ ಮತ್ತು ಜೇಸನ್ ಬೆಹ್ರೆನ್‌ಡಾರ್ಫ್ ತಲಾ ಮೂರು ವಿಕೆಟ್ ಪಡೆದರು. ಇನ್ನು ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಗಾಯಗೊಂಡಿದ್ದರು. ಈ ಘಟನೆ 17 ನೇ ಓವರ್’ನಲ್ಲಿ ಸಂಭವಿಸಿದೆ. ಅಕ್ಸರ್ ಲಾಂಗ್-ಆನ್ ಓವರ್’ನಲ್ಲಿ ಬ್ಯಾಟ್ ಬೀಸಿದರು. ಆಗ ಸೂರ್ಯಕುಮಾರ್ ಚೆಂಡನ್ನು ಹಿಡಿಯಲು ಯತ್ನಿಸಿದ್ದು, ಆಕಸ್ಮಿಕವಾಗಿ ಅವರ ಕಣ್ಣಿಗೆ ಬಿದ್ದಿದೆ.
Suryakumar Yadav Injury: ಇಂದು ನಡೆದ ಇಂಡಿಯನ್ ಪ್ರೀಮಿಯರ್ ಲೀಗ್ 2023ರ ಮುಂಬೈ ಇಂಡಿಯನ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ನಡುವಿನ ಪಂದ್ಯವು ಹಲವಾರು ತಿರುವುಗಳಿಂದ ಕೂಡಿತ್ತು. ಡೇವಿಡ್ ವಾರ್ನರ್ ಮತ್ತು ಅಕ್ಷರ್ ಪಟೇಲ್ ಅರ್ಧಶತಕಗಳನ್ನು ಗಳಿಸಿದರು, ಆದರೆ ಡೆಲ್ಲಿ ತಂಡವು 19.4 ಓವರ್;ಗಳಲ್ಲಿ 172 ರನ್‌ಗಳಿಗೆ ಆಲೌಟ್ ಆಗುವ ಮೂಲಕ ಬ್ಯಾಕ್ ಟು ಬ್ಯಾಕ್ ವಿಕೆಟ್‌ಗಳನ್ನು ಕಳೆದುಕೊಂಡಿತು.
ಇದನ್ನೂ ಓದಿ: Kubera Blessing: ಈ ರಾಶಿಗಳ ಮೇಲೆ ಕುಬೇರನ ವಿಶೇಷ ಕೃಪೆ: ವರ್ಷಪೂರ್ತಿ ಯಶಸ್ಸು-ಹಣದ ಹೊಳೆಯೇ ಹರಿಸಲಿದ್ದಾನೆ ಧನದೇವ
ಮುಂಬೈ ಇಂಡಿಯನ್ಸ್ ಪರ ಪಿಯೂಷ್ ಚಾವ್ಲಾ ಮತ್ತು ಜೇಸನ್ ಬೆಹ್ರೆನ್‌ಡಾರ್ಫ್ ತಲಾ ಮೂರು ವಿಕೆಟ್ ಪಡೆದರು. ಇನ್ನು ಈ ಪಂದ್ಯದಲ್ಲಿ ಸೂರ್ಯಕುಮಾರ್ ಯಾದವ್ ಗಾಯಗೊಂಡಿದ್ದರು. ಈ ಘಟನೆ 17 ನೇ ಓವರ್’ನಲ್ಲಿ ಸಂಭವಿಸಿದೆ. ಅಕ್ಸರ್ ಲಾಂಗ್-ಆನ್ ಓವರ್’ನಲ್ಲಿ ಬ್ಯಾಟ್ ಬೀಸಿದರು. ಆಗ ಸೂರ್ಯಕುಮಾರ್ ಚೆಂಡನ್ನು ಹಿಡಿಯಲು ಯತ್ನಿಸಿದ್ದು, ಆಕಸ್ಮಿಕವಾಗಿ ಅವರ ಕಣ್ಣಿಗೆ ಬಿದ್ದಿದೆ. ತಕ್ಷಣವೇ ಫಿಸಿಯೋ ಮೈದಾನಕ್ಕೆ ಆಗಮಿಸಿ, ಚಿಕಿತ್ಸೆ ನೀಡಿದರು.
10 Rupee Old Note: ನಿಮ್ಮ ಬಳಿ 10 ರೂ.ನ ಹಳೆ ನೋಟು ಇದ್ಯಾ? ಒಂದು ನಿಮಿಷದಲ್ಲಿ 25 ಸಾವಿರ ಗಳಿಸಬಹುದು
ಇನ್ನಿಂಗ್ಸ್ ಹೀಗಿತ್ತು:
173 ರನ್‌ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ ಆರಂಭಿಕರಾದ ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ಉತ್ತಮ ಆರಂಭ ಪಡೆದರು. ಇಬ್ಬರೂ ಮೊದಲ ವಿಕೆಟ್’ಗೆ 71 ರನ್ ಸೇರಿಸಿದರು. ಇದಾದ ಬಳಿಕ ಇಶಾನ್ ಕಿಶನ್ 31 ರನ್ ಗಳಿಸಿ ರನೌಟ್ ಆದರು. ಆದರೆ, ರೋಹಿತ್ ಶರ್ಮಾ ಗಟ್ಟಿಯಾಗಿ ನಿಂತು ಅರ್ಧಶತಕ ಬಾರಿಸಿದರು. ರೋಹಿತ್ 45 ಎಸೆತಗಳಲ್ಲಿ 65 ರನ್ ಗಳಿಸಿದರು. ಇದಲ್ಲದೇ ತಿಲಕ್ ವರ್ಮಾ 29 ಎಸೆತಗಳಲ್ಲಿ 41 ರನ್ ಗಳಿಸಿದರು. ಕೊನೆಯ ಓವರ್ ನಲ್ಲಿ ಬ್ಯಾಟಿಂಗ್ ಗೆ ಬಂದ ಕ್ಯಾಮರೂನ್ ಗ್ರೀನ್ 8 ಎಸೆತಗಳಲ್ಲಿ ಅಜೇಯ 17 ರನ್ ಗಳಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದರು. ದೆಹಲಿ ಪರ ವೇಗಿ ಮುಕೇಶ್ ಕುಮಾರ್ 2 ವಿಕೆಟ್ ಪಡೆದರೆ, ಮುಸ್ತಾಫಿಜುರ್ ರೆಹಮಾನ್ 1 ವಿಕೆಟ್ ಪಡೆದರು.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.