Iran Team Refuses To Sing National Anthem: ಇರಾನ್‌ನ ಆಟಗಾರರು ಸೋಮವಾರ ಇಂಗ್ಲೆಂಡ್ ವಿರುದ್ಧದ ವಿಶ್ವಕಪ್‌ನ ಮೊದಲ ಪಂದ್ಯ ಆರಂಭಕ್ಕೂ ಮುನ್ನ ಮೈದಾನದಲ್ಲಿ ತಮ್ಮ ರಾಷ್ಟ್ರಗೀತೆಯನ್ನು ಹಾಡದೆ, ತಾಯ್ನಾಡಿನಲ್ಲಿ ಸರ್ಕಾರದ ವಿರೋಧಿ ಪ್ರತಿಭಟನಾಕಾರರಿಗೆ ಸ್ಪಷ್ಟವಾದ ಬೆಂಬಲ ನೀಡಿದರು.


COMMERCIAL BREAK
SCROLL TO CONTINUE READING

ಇರಾನ್‌ನಲ್ಲಿನ ನಡೆಯುತ್ತಿರುವ ಹಿಂಸಾತ್ಮಕ ಪ್ರದರ್ಶನಕ್ಕೆ ವಿರುದ್ಧವಾಗಿ ರಾಷ್ಟ್ರಗೀತೆಯನ್ನು ಹಾಡಲು ನಿರಾಕರಿಸಬೇಕೆ ಅಥವಾ ಬೇಡವೇ ಎಂಬುದನ್ನು ತಂಡವು ಒಟ್ಟಾಗಿ ನಿರ್ಧರಿಸುತ್ತದೆ ಎಂದು ನಾಯಕ ಅಲಿರೆಜಾ ಜಹಾನ್‌ಬಕ್ಷ್ ಹೇಳಿದ್ದರು. ದೋಹಾದ ಖಲೀಫಾ ಅಂತರಾಷ್ಟ್ರೀಯ ಕ್ರೀಡಾಂಗಣದ ಸುತ್ತಲೂ ತಮ್ಮ ಗೀತೆ ಮೊಳಗುತ್ತಿದ್ದಂತೆ ಇರಾನ್ ಆಟಗಾರರು ನಿರ್ದಯವಾಗಿ ಮತ್ತು ಕಠೋರವಾಗಿ ನಿಂತರು.


ಇದನ್ನೂ ಓದಿ: Rain Alert: ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಇಂದಿನಿಂದ 3 ದಿನ ಮಳೆ ಎಚ್ಚರಿಕೆ


ಸೆಪ್ಟೆಂಬರ್ 16 ರಂದು 22 ವರ್ಷದ ಮಹ್ಸಾ ಅಮಿನಿ ನೈತಿಕತೆಯ ಪೊಲೀಸ್ ಕಸ್ಟಡಿಯಲ್ಲಿ ಸಾವನ್ನಪ್ಪಿದ ನಂತರ ಇರಾನ್ ಎರಡು ತಿಂಗಳ ರಾಷ್ಟ್ರವ್ಯಾಪಿ ಪ್ರತಿಭಟನೆಗಳಿಂದ ಬೆಚ್ಚಿಬಿದ್ದಿದೆ. ಕುರ್ದಿಷ್ ಮೂಲದ 22 ವರ್ಷದ ಇರಾನಿನ ಅಮಿನಿ ಟೆಹ್ರಾನ್‌ನಲ್ಲಿ ಬಂಧಿಸಲ್ಪಟ್ಟ ಮೂರು ದಿನಗಳ ನಂತರ ನಿಧನರಾದರು. ಮಹಿಳೆಯರಿಗಾಗಿ ಇದ್ದ ಇಸ್ಲಾಮಿಕ್ ಗಣರಾಜ್ಯದ ಡ್ರೆಸ್ ಕೋಡ್‌ನ ಉಲ್ಲಂಘನೆಯ ಆರೋಪದ ಮೇಲೆ ಆಕೆಯನ್ನು ಬಂಧಿಸಲಾಗಿತ್ತು. ಆದರೆ ಕೆಲವೇ ದಿನಗಳಲ್ಲಿ ಸಾವನ್ನಪ್ಪಿದ್ದಳು.


ಕೆಲವು ಇರಾನ್ ಅಥ್ಲೀಟ್‌ಗಳು ರಾಷ್ಟ್ರಗೀತೆಯನ್ನು ಹಾಡದಿರಲು ಅಥವಾ ಪ್ರತಿಭಟನಾಕಾರರನ್ನು ಬೆಂಬಲಿಸಲು ತಮ್ಮ ವಿಜಯಗಳನ್ನು ಆಚರಿಸಲು ನಿರ್ಧರಿಸಿದ್ದಾರೆ. ಇಂಗ್ಲಿಷ್ ಕ್ಲಬ್ ಬ್ರೈಟನ್‌ಗಾಗಿ ಆಡುತ್ತಿದ್ದ ಜಹಾನ್‌ಬಕ್ಷ್, ಕಳೆದ ವಾರ ಬ್ರಿಟಿಷ್ ಪತ್ರಕರ್ತರೊಬ್ಬರು ರಾಷ್ಟ್ರಗೀತೆಯ ವಿಷಯದ ಬಗ್ಗೆ ಕೇಳಿದ ಪ್ರಶ್ನೆಯಿಂದ ಕೋಪಗೊಂಡಿದ್ದರು.


"ಪ್ರತಿಯೊಬ್ಬ ಆಟಗಾರರು ವಿಭಿನ್ನ ಆಚರಣೆಯನ್ನು ಹೊಂದಿದ್ದಾರೆ ಮತ್ತು ನೀವು ರಾಷ್ಟ್ರಗೀತೆಯ ಬಗ್ಗೆ ಕೇಳುತ್ತೀರಿ. ಅದು ತಂಡದಲ್ಲಿ ನಿರ್ಧರಿಸಬೇಕಾದ ವಿಷಯವಾಗಿದೆ, ಅದನ್ನು ನಾವು ಈಗಾಗಲೇ ಮಾತನಾಡಿದ್ದೇವೆ" ಎಂದು ಅವರು ಹೇಳಿದರು.


ಇದನ್ನೂ ಓದಿ: IND vs NZ: ಇಂಡೋ-ಕೀವೀಸ್ ಟಿ20 ಅಂತಿಮ ಹಣಾಹಣಿ: ಸಿಗುತ್ತಾ ಉಮ್ರಾನ್, ಸಂಜುಗೆ ಅವಕಾಶ?


ಇರಾನ್ ಮಾನವ ಹಕ್ಕುಗಳ ಪ್ರಕಾರ ಅಮಿನಿಯ ಸಾವಿನ ನಂತರದ ಉದ್ಭವಿಸಿದ ಪ್ರತಿಭಟನೆಯಲ್ಲಿ ಸುಮಾರು 400 ಮಂದಿ ಬಲಿಯಾಗಿದ್ದಾರೆ.


 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.