Irani Cup 2024: ಮುಂಬೈನ ಬೀದಿ ಬದಿಗಳಲ್ಲಿ ಪಾನಿಪೂರಿ ಮಾರುತ್ತಿದ್ದ ಯಶಸ್ವಿ ಜೈಸ್ವಾಲ್ ಭಾರತ ಪರ ಕ್ರಿಕೆಟ್ ಆಡುತ್ತಿದ್ದಾನೆ... ರೈಲ್ವೆ ಟಿಕೆಟ್ ಕಲೆಕ್ಟರ್ ಆಗಿದ್ದ ಎಂ.ಎಸ್.ಧೋನಿ ಭಾರತಕ್ಕೆ ಎರಡೆರಡು ವಿಶ್ವಕಪ್‌ಗಳನ್ನು ಗೆದ್ದು ಕೊಡುತ್ತಾನೆ.. ಹಂಬಲ್‌ ಬ್ಯಾಗ್ರೌಂಡ್‌ನಿಂದ ಬಂದ ಹುಡುಗರ ಯಶೋಗಾಥೆಗಳು ಒಂದೆರಡಲ್ಲ.. ಇದು ಅಂಥದ್ದೇ ಮತ್ತೊಂದು ಯಶೋಗಾಥೆ. ಉತ್ತರ ಪ್ರದೇಶದ ಕನೌಜ್‌ನಿಂದ ಒಬ್ಬ ಹುಡುಗ ಬದುಕು ಕಟ್ಟಿಕೊಳ್ಳಲು ಹತ್ತು ವರ್ಷಗಳ ಹಿಂದೆ ಮಹಾನಗರಿ ಮುಂಬೈಗೆ ಬರುತ್ತಾನೆ. ಹಾಗೆ ಸಮುದ್ರದ ಅಲೆಗಳ ವಿರುದ್ಧ ಈಜಲು ಹೊರಟವನ ವಯಸ್ಸು ಬರೀ 15. ಅವನ ಹೆಸರು ಮೊಹಮ್ಮದ್ ಜುನೇದ್ ಖಾನ್. 


COMMERCIAL BREAK
SCROLL TO CONTINUE READING

ಮುಂಬೈಗೆ ಕಾಲಿಟ್ಟವನೇ ಜುನೇದ್ ಗಾರ್ಮೆಂಟ್ಸ್ ಫ್ಯಾಕ್ಟರಿಯೊಂದರಲ್ಲಿ ಕೆಲಸ ಶುರು ಮಾಡುತ್ತಾನೆ. 3 ವರ್ಷ ಗಾರ್ಮೆಂಟ್ಸ್‌ನಲ್ಲಿ ಕೆಲಸ. ಒಂದು ದಿನ ಇದ್ದಕ್ಕಿದ್ದಂತೆ ಕೆಲಸ ಬಿಟ್ಟ ಹುಡುಗ ಆಟೋ ರಿಕ್ಷಾ ಓಡಿಸುತ್ತೇನೆಂದು ಹೊರಟು ನಿಲ್ಲುತ್ತಾನೆ. ವಿಧಿಲಿಖಿತ ನೋಡಿ.. ಆಟೋ ಹತ್ತಿದ್ದೇ ಜುನೇದ್ ಬದುಕಿಗೆ ದೊಡ್ಡ ತಿರುವು ಕೊಟ್ಟು ಬಿಡುತ್ತದೆ. ಮುಂಬೈನಲ್ಲಿ ಆಟೋ ರಿಕ್ಷಾ ಓಡಿಸುತ್ತಿದ್ದ ಜುನೇದ್ ಹೀಗೇ ಒಂದು ದಿನ ಅದೊಂದು ಜಾಗಕ್ಕೆ ಬಂದು ತಲುಪುತ್ತಾನೆ. ಅದು ಮುಂಬೈನ ಮಾಜಿ ವಿಕೆಟ್ ಕೀಪರ್ ಮನೀಶ್ ಬಂಗೇರ ಅವರ ‘ಸಂಜೀವನಿ ಕ್ರಿಕೆಟ್ ಅಕಾಡೆಮಿ’.


ಇದನ್ನೂ ಓದಿ: T20 IND vs BNG: ಮೊದಲ ಪಂದ್ಯದಲ್ಲೇ ಭರ್ಜರಿ ಗೆಲುವಿನೊಂದಿಗೆ ಅಪರೂಪದ ರೆಕಾರ್ಡ್‌ ಬ್ರೇಕ್!‌ ಪಾಕ್‌ನ ಈ ದಾಖಲೆಯನ್ನ ನೆಲಕ್ಕುರುಳಿಸಿದ ಟೀಂ ಇಂಡಿಯಾ!!


ಅಕಾಡೆಮಿಯಲ್ಲಿ ಅಭ್ಯಾಸ ನಡೆಸುತ್ತಿದ್ದ ಹುಡುಗರಿಗೆ ಬೌಲಿಂಗ್ ಮಾಡುವೆಯಾ? ಎಂದು ಕೇಳುತ್ತಾರೆ ಮನೀಶ್ ಬಂಗೇರಾ. ಅಲ್ಲಿವರೆಗೆ ಟೆನಿಸ್ ಬಾಲ್ ಮಾತ್ರ ಹಿಡಿದವನು ಅದೇ ಮೊದಲ ಬಾರಿ ಲೆದರ್ ಬಾಲ್ ಹಿಡಿಯುತ್ತಾನೆ ಜುನೇದ್. ಒಂದು impressive run up, ಮತ್ತೊಂದು ಬೆಂಕಿ ಎಸೆತ.. ಪಕ್ಕದಲ್ಲೇ ನಿಂತು ನೋಡುತ್ತಿದ್ದ ಮನೀಶ್ ಬಂಗೇರ ಹೇಳಿದ್ದು ಒಂದೇ ಮಾತು, ‘ಪ್ರತಿದಿನ ಇದೇ ರೀತಿ ಬೌಲಿಂಗ್ ಮಾಡು’. ಇದಕ್ಕೆ ಉತ್ತರಿಸಿದ ಆತ ‘ಕ್ರಿಕೆಟ್ ನಮ್ಮಂಥ ಬಡ ಹುಡುಗರಿಗಲ್ಲ ಸಾಬ್’’ ಎಂದವನೇ ಆಟೋ ಹತ್ತಿ ಹೊರಟು ಬಿಡುತ್ತಾನೆ. 


ಆದರೆ ಮನೀಶ್ ಬಂಗೇರ ಹೇಳಿದ ಮಾತು ಮನಸ್ಸಲ್ಲೇ ಕೊರೆಯಲು ಶುರು ಮಾಡುತ್ತದೆ. ‘ಅವರು ನನ್ನಲ್ಲೇನೋ ನೋಡಿದ್ದಾರೆ. ಏಕೆ ನಾನು ಒಂದು ಪ್ರಯತ್ನ ಮಾಡಬಾರದು’ ಎಂದುಕೊಂಡವನೇ ಲೆದರ್ ಬಾಲ್ ಬೌಲಿಂಗ್ ಆರಂಭಿಸುತ್ತಾನೆ. ಹಾಗೆ ಶುರುವಾಗಿತ್ತು ಆಟೋ ಚಾಲಕನ ಕ್ರಿಕೆಟ್ ಪ್ರಯಾಣ. ಒಮ್ಮೆ PJ Hindu Gymkhana ತಂಡದ ಪರ ಆಡುತ್ತಿದ್ದಾಗ ಭಾರತ ಕ್ರಿಕೆಟ್ ತಂಡದ ಈಗಿನ ಅಸಿಸ್ಟೆಂಟ್ ಕೋಚ್ ಅಭಿಷೇಕ್ ನಾಯರ್ ಕಣ್ಣಿಗೆ ಬೀಳುತ್ತಾನೆ ಈ ಜುನೇದ್‌. ಹುಡುಗ ಆಟೋ ಓಡಿಸುತ್ತಾನೆ ಎಂಬುದು ಗೊತ್ತಾದಾಗ ಅಭಿಷೇಕ್ ನಾಯರ್‌ಗೆ ಒಂದು ಕ್ಷಣ ಮಾತೇ ನಿಂತು ಹೋಗಿತ್ತು. 


ಇದನ್ನೂ ಓದಿ: ಭಾರತದ ದಿಗ್ಗಜ ಕೋಚ್ ರಾಹುಲ್ ದ್ರಾವಿಡ್ ಪುತ್ರಿ ಜನಪ್ರಿಯ ನಟಿ: ದಕ್ಷಿಣ ಭಾರತದ ಸಿನಿರಂಗದಲ್ಲಿ ಮಿಂಚುತ್ತಿರುವ ಸುಂದರಿ... ಯಾರೆಂದು ಗೊತ್ತಾಯ್ತಾ?


‘ಆಟೋ ಓಡಿಸುವುದನ್ನು ಇವತ್ತಿಗೇ ನಿಲ್ಲಿಸಿ ನಿನ್ನ ಸಮಯವನ್ನೆಲ್ಲಾ ಕ್ರಿಕೆಟ್‌ಗೆ ಮೀಸಲಿಟ್ಟು ಬಿಡು’ ಎನ್ನುತ್ತಾರೆ ಅಭಿಷೇಕ್ ನಾಯರ್. ತಮ್ಮದೇ ಕ್ರಿಕೆಟ್ ಅಕಾಡೆಮಿಯಲ್ಲಿ ಜುನೇದ್‌ಗೆ ಅಭ್ಯಾಸಕ್ಕೆ ಜಾಗ ನೀಡುತ್ತಾರೆ. 2024ರ ಐಪಿಎಲ್ ಟೂರ್ನಿಯಲ್ಲಿ ಕೆಕೆಆರ್ ತಂಡದ ನೆಟ್ ಬೌಲರ್ ಆಗಿ ಜುನೇದ್‌ನನ್ನು ಕರೆದೊಯ್ಯುತ್ತಾರೆ ಅಭಿಷೇಕ್ ನಾಯರ್. ಹುಡುಗರಲ್ಲಿ ಪ್ರತಿಭೆಯಿದೆ ಎಂದಾಕ್ಷಣ ಅವರ ವಯಸ್ಸು, ಹಿನ್ನೆಲೆ ಯಾವುದನ್ನೂ ನೋಡದೆ merit ಮೇಲೆ ಅವಕಾಶ ಕೊಡುವುದು ಮುಂಬೈ ಕ್ರಿಕೆಟ್ ಸಂಸ್ಥೆಯ ಸ್ಪೆಷಾಲಿಟಿ. ಜುನೇದ್ ಆಟವನ್ನು ನೋಡಿದವರು ಇರಾನಿ ಕಪ್ ಪಂದ್ಯಕ್ಕೆ ಮುಂಬೈ ತಂಡದಲ್ಲಿ ಜುನೇದ್‌ಗೆ ಅವಕಾಶ ಕೊಡುತ್ತಾರೆ. ಮುಂಬೈನ ಬೀದಿಗಳಲ್ಲಿ ಆಟೋ ಓಡಿಸುತ್ತಿದ್ದ ಯುವಕ ಈಗ ಇರಾನಿ ಕಪ್ ಎತ್ತಿ ಹಿಡಿದಿದ್ದಾನೆ. ಇಂತಹ ಧೈರ್ಯ, ದೃಢತೆ ಮತ್ತು ಪರಿಶ್ರಮದ ಕಥೆಗಳನ್ನು ಕೇಳಲು ತುಂಬಾ ಸಂತೋಷವಾಗುತ್ತದೆ. ಎಂತಹ ಅದ್ಭುತ ಯಶಸ್ಸಿನ ಕಥೆ ಅಲ್ಲವೇ?


-ಸುದರ್ಶನ್ 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.