Ireland created history :  ಶುಕ್ರವಾರ ಅಬುಧಾಬಿಯಲ್ಲಿ ನಡೆದ ಐರ್ಲೆಂಡ್  ಮತ್ತು ಅಫ್ಘಾನಿಸ್ತಾನ ವಿರುದ್ಧದ ಪಂದ್ಯದಲ್ಲಿ ಐರ್ಲೆಂಡ್ ಗೆಲುವಿಗೆ ನಾಯಕ ಆಂಡಿ ಬಲ್ಬಿರ್ನ್ ಅಜೇಯ 58 ರನ್‌ ಗಳು ಸಹಕಾರಿಯಾಯಿತು. ಐರ್ಲೆಂಡ್ ಮೂರನೇ ದಿನದ ಅಂತಿಮ ಅವಧಿಯಲ್ಲಿ 111 ರನ್‌ಗಳ ಗೆಲುವಿನ ಗುರಿಯನ್ನು ಬೆನ್ನಟ್ಟುವ ಮೂಲಕ ಗೆಲುವನ್ನು ಸಾಧಿಸಿತು. ಇದಕ್ಕೂ ಮುಂಚೆ  2018 ರಲ್ಲಿ ಐರ್ಲೆಂಡ್ ಪಾಕಿಸ್ತಾನದ ವಿರುದ್ಧ ಮೊದಲ ಟೆಸ್ಟ್ ಪಂದ್ಯವನ್ನಾಡಿತ್ತು. ಆ ಪಂದ್ಯದಲ್ಲಿ ಐರ್ಲೆಂಡ್ ಸೋಲನುಭವಿಸಿತ್ತು.


COMMERCIAL BREAK
SCROLL TO CONTINUE READING

ನಾಯಕ ಐರ್ಲೆಂಡ್ ನಾಯಕ ಆಂಡಿ ಬಲ್ಬಿರ್ನ್‌ ಮೊದಲ ಟೆಸ್ಟ್ ಪಂದ್ಯವನ್ನು ಗೆದ್ದಿದ್ದಕ್ಕೆ ಖುಷಿಯನ್ನು ವ್ಯಕ್ತಪಡಿಸಿದ್ದಾರೆ. ನಾವು ಸಂಪೂರ್ಣವಾಗಿ ಉತ್ಸುಕರಾಗಿದ್ದೇವೆ. ನಾವು ಇತಿಹಾಸವನ್ನು ರಚಿಸಿದ್ದೇವೆ ಎಂದು ಬಲ್ಬಿರ್ನಿ ಸಂತಸ ವ್ಯಕ್ತಪಡಿಸಿದರು. 


ಇದನ್ನು ಓದಿ : Pro-Kabaddi Season 10: ಹತ್ತನೇ ಋತುವಿನ ಪ್ರೊಕಬಡ್ಡಿ ಲೀಗ್ ಗೆ ಪುಣೇರಿ ಪಲ್ಟನ್ ಚಾಂಪಿಯನ್


ಶುಕ್ರವಾರ ಎರಡನೇ ಇನ್ನಿಂಗ್ಸ್ ಆರಂಭಿಸಿದ ಅಫ್ಘಾನಿಸ್ತಾನ 134-3ಕ್ಕೆ 218ಕ್ಕೆ ಆಲೌಟ್ ಆಯಿತು. ನಾಯಕ ಹಶ್ಮತುಲ್ಲಾ ಶಾಹಿದಿ ಗರಿಷ್ಠ 55 ರನ್ ಗಳಿಸಿದರೆ, ಟೆಸ್ಟ್‌ಗೆ ಪದಾರ್ಪಣೆ ಮಾಡಿದ ರಹಮಾನುಲ್ಲಾ ಗುರ್ಬಾಜ್ 46 ರನ್ ಬಾರಿಸಿದರು. ಮಾರ್ಕ್ ಆಡೈರ್ ಪಂದ್ಯದಲ್ಲಿ ಎಂಟು ವಿಕೆಟ್‌ ಪಡೆದರು. ಕ್ರೇಗ್ ಯಂಗ್ ಮತ್ತು ಬ್ಯಾರಿ ಮೆಕಾರ್ಥಿ ಕೂಡ ತಲಾ ಮೂರು ವಿಕೆಟ್‌ಗಳನ್ನು ಪಡೆದರು. 


ಇದನ್ನು ಓದಿ : ಜಾರ್ಖಂಡ್‌ನ 36 ಸಾವಿರ ಕೋಟಿ ಅಭಿವೃದ್ಧಿ ಯೋಜನೆಗಳಿಗೆ ಚಾಲನೆ ನೀಡಿದ ಪ್ರಧಾನಿ ಮೋದಿ 


ಗೆಲುವಿಗಾಗಿ ಕೇವಲ 111 ರನ್‌ಗಳ ಗುರಿಯನ್ನು ಬೆನ್ನಟ್ಟಿದ ಐರ್ಲೆಂಡ್ 18 ವರ್ಷದ ವೇಗದ ಬೌಲರ್ ನವೀದ್ ಝದ್ರಾನ್ ಮಾರಕ ಬೌಲಿಂಗ್‌ಗೆ ತತ್ತರಿಸಿತು. 13 ರನ್‌ಗಳಿಗೆ ಮೂರು ವಿಕೆಟ್‌ಗಳನ್ನು ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿತು. ಬಲ್ಬಿರ್ನ್‌ ಜವಾಬ್ದಾರಿಯುತ ಆಟವಾಡುವ ಮೂಲಕ ಐರ್ಲೆಂಡ್ ತಂಡಕ್ಕೆ ನೆರವಾದರು.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.