IND vs NZ: ಭಾರತದ ಈ ಆಟಗಾರ T20 ಪಂದ್ಯ ಆಡಲು ಯೋಗ್ಯರಲ್ಲವೇ? ಅತ್ಯಂತ ಕಳಪೆ ದಾಖಲೆ ಬರೆದ ಪ್ಲೇಯರ್
India Cricket Team: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಹಾಗೂ ಯೂತ್ ಸೆನ್ಸೇಷನ್ ಅರ್ಷದೀಪ್ ಸಿಂಗ್ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಎದುರಾಳಿ ಬ್ಯಾಟ್ಸ್‌ಮನ್‌ಗಳು ಅವರು ಎಸೆಯುವ ಎಸೆಯಗಳ ಸಹಾಯದಿಂದ ಸಾಕಷ್ಟು ರನ್ ಗಳಿಸಿದರು. ತಮ್ಮ ನಾಲ್ಕು ಓವರ್‌ಗಳಲ್ಲಿ 51 ರನ್‌ಗಳನ್ನು ನೀಡಿ ಕೇವಲ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿತ್ತು.
India Cricket Team: ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ 21 ರನ್‌ಗಳ ಸೋಲು ಎದುರಿಸಬೇಕಾಯಿತು. ಈ ಪಂದ್ಯದಲ್ಲಿ ಭಾರತದ ಬೌಲರ್‌ಗಳು ಮತ್ತು ಬ್ಯಾಟ್ಸ್‌ಮನ್‌ಗಳು ಅತ್ಯಂತ ಕಳಪೆ ಆಟ ಪ್ರದರ್ಶಿಸಿದ್ದು, ಅದರಲ್ಲಿ ಓರ್ವ ವೇಗಿ ಮಾತ್ರ ಮೊದಲ ಟಿ20 ಪಂದ್ಯದಲ್ಲಿ ಅತ್ಯಂತ ದುಬಾರಿ ಎನಿಸಿಕೊಂಡಿದ್ದಾರೆ. ಜೊತೆಗೆ ಈ ಆಟಗಾರ ತನ್ನ ಹೆಸರಿನಲ್ಲಿ ಕಳಪೆ ದಾಖಲೆ ಬರೆದಿದ್ದಾರೆ. ಮೊದಲ ಪಂದ್ಯದ ಸೋಲಿನೊಂದಿಗೆ ಟೀಂ ಇಂಡಿಯಾ ಸರಣಿಯಲ್ಲಿ 0-1 ಹಿನ್ನಡೆಯಲ್ಲಿದೆ.
ಇದನ್ನೂ ಓದಿ: IND vs NZ : ಕಿವೀಸ್ ಎದುರು ಟೀಂ ಇಂಡಿಯಾಗೆ 21 ರನ್‌ಗಳ ಸೋಲು!
ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯದಲ್ಲಿ ಭಾರತದ ವೇಗದ ಬೌಲರ್ ಹಾಗೂ ಯೂತ್ ಸೆನ್ಸೇಷನ್ ಅರ್ಷದೀಪ್ ಸಿಂಗ್ ಹೆಸರಿಗೆ ತಕ್ಕಂತೆ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. ಎದುರಾಳಿ ಬ್ಯಾಟ್ಸ್‌ಮನ್‌ಗಳು ಅವರು ಎಸೆಯುವ ಎಸೆಯಗಳ ಸಹಾಯದಿಂದ ಸಾಕಷ್ಟು ರನ್ ಗಳಿಸಿದರು. ತಮ್ಮ ನಾಲ್ಕು ಓವರ್‌ಗಳಲ್ಲಿ 51 ರನ್‌ಗಳನ್ನು ನೀಡಿ ಕೇವಲ ಒಂದು ವಿಕೆಟ್ ಪಡೆಯಲು ಸಾಧ್ಯವಾಗಿತ್ತು.
ನ್ಯೂಜಿಲೆಂಡ್ ವಿರುದ್ಧ 18ನೇ ಓವರ್‌ನಲ್ಲಿ ಅರ್ಷದೀಪ್ ಸಿಂಗ್ ಕೇವಲ ಎರಡು ರನ್ ನೀಡಿದರು. ಇನ್ನು ಕೊನೆಯ ಓವರ್ ನಲ್ಲಿ ಬೌಲಿಂಗ್ ಮಾಡಲು ಬಂದ ಅರ್ಷದೀಪ್, ಮೊದಲ ಎಸೆತದಲ್ಲಿ ನೋ ಬಾಲ್ ಎಸೆದಿದ್ದಾರೆ. ನಂತರ ಇವರ ಮೂರು ಬೌಲಿಂಗ್ ಗೆ ಸತತ ಮೂರು ಸಿಕ್ಸರ್ ಬಾರಿಸಿದ್ದಾರೆ. ಅವರು ಓವರ್‌ನಲ್ಲಿ ಒಟ್ಟು 27 ರನ್ ನೀಡಿದ್ದರು. ಅರ್ಷದೀಪ್ ಈಗ ಅಂತಾರಾಷ್ಟ್ರೀಯ ಟಿ20ಯಲ್ಲಿ 20ನೇ ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಭಾರತೀಯ ಬೌಲರ್ ಎನಿಸಿಕೊಂಡಿದ್ದಾರೆ. ಈ ಹಿಂದೆ ಈ ನಾಚಿಕೆಗೇಡಿನ ದಾಖಲೆ ಸುರೇಶ್ ರೈನಾ ಹೆಸರಿನಲ್ಲಿತ್ತು. 2012ರಲ್ಲಿ ರೈನಾ 26 ರನ್ ನೀಡಿದ್ದರು.
ಇನಿಂಗ್ಸ್ ನ 20ನೇ ಓವರ್ ನಲ್ಲಿ ಅತಿ ಹೆಚ್ಚು ರನ್ ನೀಡಿದ ಭಾರತೀಯ ಬೌಲರ್ ಗಳು:
27- ಅರ್ಷದೀಪ್ ಸಿಂಗ್ 2023
26- ಸುರೇಶ್ ರೈನಾ 2012
24- ದೀಪಕ್ ಚಹಾರ್ 2022
23- ಖಲೀಲ್ ಅಹ್ಮದ್ 2018
23- ಹರ್ಷಲ್ ಪಟೇಲ್ 2022
23- ಹರ್ಷಲ್ ಪಟೇಲ್ 2022
ಅರ್ಷದೀಪ್ ಸಿಂಗ್ ಕೂಡ ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದವರಲ್ಲಿ ಮೂರನೇ ಸ್ಥಾನಕ್ಕೆ ತಲುಪಿದ್ದಾರೆ. ಶಿವಂ ದುಬೆ ಮೊದಲ ಸ್ಥಾನದಲ್ಲಿದ್ದಾರೆ. ಅವರು 2020 ರಲ್ಲಿ ನ್ಯೂಜಿಲೆಂಡ್ ವಿರುದ್ಧ ಒಂದು ಓವರ್‌ನಲ್ಲಿ 34 ರನ್ ನೀಡಿದರು.
ಒಂದು ಓವರ್‌ನಲ್ಲಿ ಅತಿ ಹೆಚ್ಚು ರನ್ ನೀಡಿದ ಭಾರತೀಯ ಬೌಲರ್‌ಗಳು
34- ಶಿವಂ ದುಬೆ ವಿರುದ್ಧ ನ್ಯೂಜಿಲೆಂಡ್ (2020)
32- ಸ್ಟುವರ್ಟ್ ಬಿನ್ನಿ ವಿರುದ್ಧ ವೆಸ್ಟ್ ಇಂಡೀಸ್ (2016)
27- ಶಾರ್ದೂಲ್ ಠಾಕೂರ್ ವಿರುದ್ಧ ಶ್ರೀಲಂಕಾ (2018)
27- ಅರ್ಷದೀಪ್ ಸಿಂಗ್ ವಿರುದ್ಧ ನ್ಯೂಜಿಲೆಂಡ್ (2023)
ಇದನ್ನೂ ಓದಿ: ಇಂಡೋ-ಕೀವೀಸ್ ಪಂದ್ಯ ವೀಕ್ಷಿಸಲು ಬಂದ MS Dhoni-Sakshi: ವಿಶೇಷ ಪ್ರೀತಿ ತೋರಿಸಿದ ಅಭಿಮಾನಿಗಳು
ಪುಣೆಯಲ್ಲಿ ಶ್ರೀಲಂಕಾ ವಿರುದ್ಧ ಅರ್ಷದೀಪ್ ಸಿಂಗ್ 2 ಓವರ್‌ಗಳಲ್ಲಿ ಒಟ್ಟು 5 ನೋಬಾಲ್‌ಗಳನ್ನು ಎಸೆದರು. ಆ ಪಂದ್ಯದ ನಂತರ ಅವರು ಸಾಕಷ್ಟು ಟೀಕೆಗೆ ಗುರಿಯಾಗಿದ್ದರು. ಅದೇ ವೇಳೆ ನ್ಯೂಜಿಲೆಂಡ್ ವಿರುದ್ಧವೂ ಟೀಂ ಇಂಡಿಯಾ 21 ರನ್‌ಗಳಿಂದ ಸೋಲು ಕಂಡಿತ್ತು. ಕೊನೆಯ ಓವರ್‌ನಲ್ಲಿ ಅರ್ಷದೀಪ್ ಸಿಂಗ್ 27 ರನ್ ನೀಡಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.