ಇಂಡೋ-ಕೀವೀಸ್ ಪಂದ್ಯ ವೀಕ್ಷಿಸಲು ಬಂದ MS Dhoni-Sakshi: ವಿಶೇಷ ಪ್ರೀತಿ ತೋರಿಸಿದ ಅಭಿಮಾನಿಗಳು

MS Dhoni Watches IND vs NZ T20 Match: ಭಾರತದ ದಿಗ್ಗಜ ಕ್ರಿಕೆಟಿಗ ಧೋನಿ ಅವರ ಹೆಸರನ್ನು ಜೆಎಸ್‌ಸಿಎ ಸ್ಟೇಡಿಯಂನಲ್ಲಿ ಹಾಕಲಾಗಿದೆ. ಆಟದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗುತ್ತಿದ್ದಾಗ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಅವರು ಕ್ಯಾಮೆರಾದಲ್ಲಿ ಕಾಣಿಸಿಕೊಂಡರು. ಇನ್ನು ಎಂ ಎಸ್ ಧೋನಿ ಸ್ಟೇಡಿಯಂ ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ, ಅಭಿಮಾನಿಗಳು ಧೋನಿ-ಧೋನಿ ಎಂಬ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಅದೇ ಸಂದರ್ಭದಲ್ಲಿ ಧೋನಿ ಕೈ ಸನ್ನೆ ಮಾಡುವ ಮೂಲಕ ಕ್ಯಾಮರಾಗೆ ಹಾಯ್ ಮಾಡಿದರು.  

Written by - Bhavishya Shetty | Last Updated : Jan 27, 2023, 09:07 PM IST
    • ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯ
    • ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಆಗಮಿಸಿ ಪೆವಿಲಿಯನ್ ನಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಿಸಿದ್ದಾರೆ
    • ಕಳೆದ ದಿನವೂ ಟೀಂ ಇಂಡಿಯಾ ಆಟಗಾರರ ಅಭ್ಯಾಸ ಸೆಂಟರ್ ಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು
ಇಂಡೋ-ಕೀವೀಸ್ ಪಂದ್ಯ ವೀಕ್ಷಿಸಲು ಬಂದ MS Dhoni-Sakshi: ವಿಶೇಷ ಪ್ರೀತಿ ತೋರಿಸಿದ ಅಭಿಮಾನಿಗಳು  title=
ms dhoni

MS Dhoni Watches IND vs NZ T20 Match: ಇಂದು ರಾಂಚಿಯ ಜೆಎಸ್‌ಸಿಎ ಅಂತರಾಷ್ಟ್ರೀಯ ಕ್ರಿಕೆಟ್ ಸ್ಟೇಡಿಯಂನಲ್ಲಿ ಟೀಂ ಇಂಡಿಯಾ ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯವನ್ನಾಡುತ್ತಿದೆ. ಈ ಸಂದರ್ಭದಲ್ಲಿ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಮತ್ತು ಅವರ ಪತ್ನಿ ಸಾಕ್ಷಿ ಸಿಂಗ್ ಧೋನಿ ಆಗಮಿಸಿ ಪೆವಿಲಿಯನ್ ನಲ್ಲಿ ಕುಳಿತುಕೊಂಡು ಪಂದ್ಯ ವೀಕ್ಷಿಸಿದ್ದಾರೆ.

ಕಳೆದ ದಿನವೂ ಟೀಂ ಇಂಡಿಯಾ ಆಟಗಾರರ ಅಭ್ಯಾಸ ಸೆಂಟರ್ ಗೆ ಭೇಟಿ ನೀಡಿ ಮಾತುಕತೆ ನಡೆಸಿದ್ದರು. ಇಂದು ಸ್ಟೇಡಿಯಂಗೆ ದಂಪತಿ ಸಮೇತ ಆಗಮಿಸಿ ಪಂದ್ಯ ವೀಕ್ಷಿಸಿದ್ದಾರೆ,

ಇದನ್ನೂ ಓದಿ: Team Indiaದ ಡ್ರೆಸ್ಸಿಂಗ್ ರೂಂಗೆ ವಿಶ್ವದ ಅಪಾಯಕಾರಿ ಕ್ರಿಕೆಟಿಗನ ದಿಢೀರ್ ಎಂಟ್ರಿ! ಭಯದಲ್ಲಿ ನ್ಯೂಜಿಲೆಂಡ್

ಭಾರತದ ದಿಗ್ಗಜ ಕ್ರಿಕೆಟಿಗ ಧೋನಿ ಅವರ ಹೆಸರನ್ನು ಜೆಎಸ್‌ಸಿಎ ಸ್ಟೇಡಿಯಂನಲ್ಲಿ ಹಾಕಲಾಗಿದೆ. ಆಟದ ಆರಂಭಕ್ಕೂ ಮುನ್ನ ರಾಷ್ಟ್ರಗೀತೆ ಮೊಳಗುತ್ತಿದ್ದಾಗ ಮಾಜಿ ವಿಕೆಟ್‌ಕೀಪರ್-ಬ್ಯಾಟ್ಸ್‌ಮನ್ ಅವರು ಕ್ಯಾಮೆರಾದಲ್ಲಿ ಕಾಣಿಸಿಕೊಂಡರು.

ಇನ್ನು ಎಂ ಎಸ್ ಧೋನಿ ಸ್ಟೇಡಿಯಂ ನಲ್ಲಿ ಕಾಣಿಸಿಕೊಳ್ಳುತ್ತಿದ್ದಂತೆ, ಅಭಿಮಾನಿಗಳು ಧೋನಿ-ಧೋನಿ ಎಂಬ ಘೋಷಣೆಗಳನ್ನು ಕೂಗಲು ಆರಂಭಿಸಿದರು. ಅದೇ ಸಂದರ್ಭದಲ್ಲಿ ಧೋನಿ ಕೈ ಸನ್ನೆ ಮಾಡುವ ಮೂಲಕ ಕ್ಯಾಮರಾಗೆ ಹಾಯ್ ಮಾಡಿದರು.  

ಡ್ರೆಸ್ಸಿಂಗ್ ರೂಂಗೆ ಭೇಟಿ ನೀಡಿದ್ದ ಎಂ ಎಸ್ ಧೋನಿ:

ನ್ಯೂಜಿಲೆಂಡ್ ವಿರುದ್ಧದ ಮೊದಲ ಟಿ20 ಪಂದ್ಯಕ್ಕೂ ಮುನ್ನ ಭಾರತದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ ಟೀಂ ಇಂಡಿಯಾ ಆಟಗಾರರ ಡ್ರೆಸ್ಸಿಂಗ್ ರೂಂಗೆ ಭೇಟಿ ನೀಡಿದ್ದು, ಮಾತುಕತೆ ನಡೆಸಿದ್ದರು. ಏಕದಿನ ಸರಣಿಯಲ್ಲಿ ನ್ಯೂಜಿಲೆಂಡ್ ಅನ್ನು ಕ್ಲೀನ್ ಸ್ವೀಪ್ ಮಾಡಿದ್ದ ಭಾರತ ತಂಡ, ಈ ಮಾದರಿಯಲ್ಲೂ ಆ ವೇಗವನ್ನು ಕಾಯ್ದುಕೊಳ್ಳಲು ಬಯಸಿದೆ.

ಇದನ್ನೂ ಓದಿ: Hardik Pandya: ಮೊದಲ ಟಿ20 ಪಂದ್ಯದಲ್ಲಿಲ್ಲ ಈ ಆಟಗಾರನಿಗೆ ಸ್ಥಾನ: ಬಹಿರಂಗ ಹೇಳಿಕೆ ನೀಡಿದ ಪಾಂಡ್ಯ

ರಾಂಚಿ ಬಾಯ್ ಧೋನಿ ಮೊದಲು ಟಿ20 ನಾಯಕ ಹಾರ್ದಿಕ್ ಪಾಂಡ್ಯ ಜೊತೆ ಮಾತನಾಡಿದ್ದರು. ಆ ನಂತರ ಯುವ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಕೂಡ ಇಶಾನ್ ಕಿಶನ್‌ಗೆ ಸಲಹೆ ನೀಡುತ್ತಿರುವುದು ಕಂಡುಬಂದಿತು. ಟೀಂ ಇಂಡಿಯಾದ ಡ್ರೆಸ್ಸಿಂಗ್ ರೂಮ್‌ನಲ್ಲಿ ಧೋನಿ ಅವರನ್ನು ಕಂಡಿದ್ದೇ ತಡ ನ್ಯೂಜಿಲೆಂಡ್ ತಂಡದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

 

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News