Ishan Kishan and Shubhman Gill: ಕಳೆದ ದಿನ ವೆಸ್ಟ್ ಇಂಡೀಸ್ ಮತ್ತು ಭಾರತ ನಡುವಿನ ಮೂರನೇ ಏಕದಿನ ಪಂದ್ಯವು ಟ್ರಿನಿಡಾಡ್‌ನ ಬ್ರಿಯಾನ್ ಲಾರಾ ಕ್ರೀಡಾಂಗಣದಲ್ಲಿ ನಡೆದಿದ್ದು, ಈ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಜಯ ಗಳಿಸಿದೆ. ಮೂರನೇ ಏಕದಿನ ಪಂದ್ಯದಲ್ಲಿ ಇಶಾನ್ ಕಿಶನ್ ಮತ್ತು ಶುಭ್ಮನ್ ಗಿಲ್ ಬಿರುಸಿನ ಇನ್ನಿಂಗ್ಸ್ ಆಡಿದ್ದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಒಂದೇ ಪಂದ್ಯದಲ್ಲಿ 10 ಬೌಂಡರಿ, 13 ಸಿಕ್ಸರ್, 137 ರನ್ ಚಚ್ಚಿದ ಈ ಬಲಿಷ್ಠ ದಾಂಡಿಗ ಟಿ20 ಸರಣಿಗೆ ಕಂ-ಬ್ಯಾಕ್!


ಟೀಂ ಇಂಡಿಯಾದ ಸ್ನೇಹಿತರು ಮೊದಲ ವಿಕೆಟ್‌ ಗೆ 143 ರನ್‌ ಗಳ ಜೊತೆಯಾಟವನ್ನು ಹಂಚಿಕೊಂಡರು. ಈ ಮೂಲಕ 6 ವರ್ಷಗಳ ಹಳೆಯ ದಾಖಲೆಯನ್ನು ಮುರಿದಿದ್ದಾರೆ. ಗಿಲ್ ಮತ್ತು ಕಿಶನ್ ಮೊದಲ ವಿಕೆಟ್‌ ಗೆ 143 ರನ್ ಜೊತೆಯಾಟವು ವೆಸ್ಟ್ ಇಂಡೀಸ್‌ ನಲ್ಲಿ ಭಾರತೀಯ ಆರಂಭಿಕ ಬ್ಯಾಟ್ಸ್‌ಮನ್‌ ಗಳ ಅತಿದೊಡ್ಡ ಜೊತೆಯಾಟದ ದಾಖಲೆಯಾಗಿದೆ. ಈ ಹಿಂದೆ ಈ ದಾಖಲೆ ರಹಾನೆ ಮತ್ತು ಶಿಖರ್ ಧವನ್ ಹೆಸರಿನಲ್ಲಿತ್ತು. 2017 ರಲ್ಲಿ ಟ್ರಿನಿಡಾಡ್ ODI ನಲ್ಲಿ ಧವನ್ ಮತ್ತು ರಹಾನೆ ಮೊದಲ ವಿಕೆಟ್‌ ಗೆ 132 ರನ್ ಜೊತೆಯಾಟವನ್ನು ಹಂಚಿಕೊಂಡಿದ್ದರು. ಇದೀಗ ಕಿಶನ್ ಮತ್ತು ಗಿಲ್ 143 ರನ್‌ ಗಳ ಮತ್ತೊಂದು ಅದ್ಭುತ ಜೊತೆಯಾಟ ನಡೆಸಿದರು.


ಇದು ವೆಸ್ಟ್ ಇಂಡೀಸ್‌ ನಲ್ಲಿ ವಿಕೆಟ್‌ಗೆ ಭಾರತೀಯ ಬ್ಯಾಟ್ಸ್‌ಮನ್‌ಗಳ ಎರಡನೇ ಗರಿಷ್ಠ ಜೊತೆಯಾಟದ ದಾಖಲೆಯಾಗಿದೆ. 2007 ರಲ್ಲಿ ಬರ್ಮುಡಾದಲ್ಲಿ ನಡೆದ ವಿಶ್ವಕಪ್ ಪಂದ್ಯದಲ್ಲಿ ಗಂಗೂಲಿ ಮತ್ತು ಸೆಹ್ವಾಗ್ ಎರಡನೇ ವಿಕೆಟ್‌ ಗೆ 202 ರನ್ ಸೇರಿಸಿದ್ದರು.


ಇನ್ನು ಪಂದ್ಯದ ಬಗ್ಗೆ ಮಾತನಾಡುವುದಾದರೆ, ಭಾರತ ತಂಡವು ಪಂದ್ಯವನ್ನು 200 ರನ್‌ ಗಳಿಂದ ಗೆದ್ದಿದೆ. ಮೊದಲು ಬ್ಯಾಟ್ ಮಾಡಿದ ಭಾರತ 50 ಓವರ್‌ಗಳಲ್ಲಿ 5 ವಿಕೆಟ್‌ ಗೆ 351 ರನ್ ಗಳಿಸಿತು. ಇದರಲ್ಲಿ ಇಶಾನ್ ಕಿಶನ್ 64 ಎಸೆತಗಳಲ್ಲಿ 8 ಬೌಂಡರಿ ಮತ್ತು 3 ಸಿಕ್ಸರ್‌ಗಳ ಸಹಿತ 77 ರನ್ ಗಳಿಸಿದರೆ, ಶುಭ್ಮನ್ ಗಿಲ್ 92 ಎಸೆತಗಳಲ್ಲಿ 82 ರನ್ ಗಳಿಸಿದರು, ಗಿಲ್ ಅವರ ಇನ್ನಿಂಗ್ಸ್‌ ನಲ್ಲಿ 11 ಬೌಂಡರಿಗಳು ಸೇರಿವೆ. ಸಂಜು ಸ್ಯಾಮ್ಸನ್ ಕೂಡ ಅದ್ಭುತವಾಗಿ ಬ್ಯಾಟಿಂಗ್ ಮಾಡಿದ್ದು, 51 ರನ್‌ ಗಳ ಇನ್ನಿಂಗ್ಸ್ ಆಡಿದ್ದಾರೆ. ಜೊತೆಗೆ ನಾಯಕ ಹಾರ್ದಿಕ್ 52 ಎಸೆತಗಳಲ್ಲಿ 70 ರನ್ ಗಳಿಸಿದ್ದಾರೆ. ಸೂರ್ಯ ಕೂಡ 30 ಎಸೆತಗಳಲ್ಲಿ 35 ರನ್ ಗಳಿಸಿ ವೆಸ್ಟ್ ಇಂಡೀಸ್ ಬೌಲರ್ ಸಂಕಷ್ಟ ತಂದೊಡ್ಡಿದ್ದಾರೆ.


ಇದನ್ನೂ ಓದಿ: MS Dhoni: ವಿಂಟೇಜ್ ಕಾರಿನಲ್ಲಿ ಧೋನಿ ಜಾಲಿ ರೈಡ್: ಕ್ಯಾಪ್ಟನ್ ಕೂಲ್ ಎಂಜಾಯ್ಮೆಂಟ್ ವಿಡಿಯೋ ನೋಡಿ


ಇದಾದ ಬಳಿಕ ವೆಸ್ಟ್ ಇಂಡೀಸ್ ತಂಡ ಗುರಿ ಬೆನ್ನಟ್ಟುವಲ್ಲಿ ತೀರಾ ಹಿನ್ನಡೆ ಕಂಡಿತು. ಇಡೀ ತಂಡ ಕೇವಲ 151 ರನ್ ಗಳಿಸಲಷ್ಟೇ ಶಕ್ತವಾಯಿತು. ಈ ಪಂದ್ಯವನ್ನು ಭಾರತ 200 ರನ್‌ ಗಳಿಂದ ಗೆದ್ದು ಸರಣಿಯನ್ನು 2-1 ರಿಂದ ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಯಿತು. ವೆಸ್ಟ್ ಇಂಡೀಸ್ ವಿರುದ್ಧ ಭಾರತ ಸತತ 13ನೇ ಏಕದಿನ ಸರಣಿ ಜಯ ಸಾಧಿಸಿದೆ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ