ಒಂದೇ ಪಂದ್ಯದಲ್ಲಿ 10 ಬೌಂಡರಿ, 13 ಸಿಕ್ಸರ್, 137 ರನ್ ಚಚ್ಚಿದ ಈ ಬಲಿಷ್ಠ ದಾಂಡಿಗ ಟಿ20 ಸರಣಿಗೆ ಕಂ-ಬ್ಯಾಕ್!

Nicholas Pooran: ವೆಸ್ಟ್ ಇಂಡೀಸ್ ಟಿ20 ತಂಡದಲ್ಲಿ ನಿಕೋಲಸ್ ಪೂರನ್ ಮತ್ತು ಶಿಮ್ರಾನ್ ಹೆಟ್ಮೆಯರ್ ಸೇರ್ಪಡೆಗೊಂಡಿದ್ದಾರೆ. ಜೇಸನ್ ಹೋಲ್ಡರ್ ಕೂಡ ತಂಡಕ್ಕೆ ಮರಳಿದ್ದಾರೆ.

Written by - Bhavishya Shetty | Last Updated : Aug 2, 2023, 09:56 AM IST
    • ಐದು ಪಂದ್ಯಗಳ ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಬಿಡುಗಡೆ ಮಾಡಿದೆ.
    • ಟಿ20 ತಂಡದಲ್ಲಿ ನಿಕೋಲಸ್ ಪೂರನ್ ಮತ್ತು ಶಿಮ್ರಾನ್ ಹೆಟ್ಮೆಯರ್ ಸೇರ್ಪಡೆಗೊಂಡಿದ್ದಾರೆ
    • ಐದು ಪಂದ್ಯಗಳ ಈ ಸರಣಿಯು ಹಾರ್ದಿಕ್ ಪಾಂಡ್ಯಗೆ ಸವಾಲಿನಿಂದ ಕೂಡಿರಲಿದೆ
ಒಂದೇ ಪಂದ್ಯದಲ್ಲಿ 10 ಬೌಂಡರಿ, 13 ಸಿಕ್ಸರ್, 137 ರನ್ ಚಚ್ಚಿದ ಈ ಬಲಿಷ್ಠ ದಾಂಡಿಗ ಟಿ20 ಸರಣಿಗೆ ಕಂ-ಬ್ಯಾಕ್! title=
Nicholas Pooran

Nicholas Pooran: ಭಾರತ vs ವೆಸ್ಟ್ ಇಂಡೀಸ್ (IND vs WI) ODI ಸರಣಿಯ ನಂತರ, T20 ಸರಣಿ (IND vs WI T20 ಸರಣಿ) ಆಗಸ್ಟ್ 3 ರಿಂದ ಪ್ರಾರಂಭವಾಗಲಿದೆ. ಐದು ಪಂದ್ಯಗಳ ಸರಣಿಗೆ ವೆಸ್ಟ್ ಇಂಡೀಸ್ ತಂಡವನ್ನು ಬಿಡುಗಡೆ ಮಾಡಿದೆ. ಮಾರಕ ಆಟಗಾರರಿಗೆ ಕೆರಿಬಿಯನ್ ತಂಡ ಸ್ಥಾನ ನೀಡಿದೆ. ಇದರಲ್ಲಿ ಇಬ್ಬರು ಆಲ್‌ ರೌಂಡರ್ ಆಟಗಾರರನ್ನು ಸೇರಿಸಿಕೊಳ್ಳಲಾಗಿದ್ದು, ಭಾರತ ತಂಡಕ್ಕೆ ಇವರು ಅಪಾಯ ಒಡ್ಡುವ ಸಾಧ್ಯತೆ ಹೆಚ್ಚಾಗಿದೆ.

ಇದನ್ನೂ ಓದಿ: 3,539 ದಿನಗಳ ಬಳಿಕ ಟೀಂ ಇಂಡಿಯಾ ಏಕದಿನಕ್ಕೆ ಮರಳಿ 27 ವರ್ಷ ಹಳೆದ ದಾಖಲೆ ಮುರಿದ ಸ್ಟಾರ್ ವೇಗಿ!

ವೆಸ್ಟ್ ಇಂಡೀಸ್ ಟಿ20 ತಂಡದಲ್ಲಿ ನಿಕೋಲಸ್ ಪೂರನ್ ಮತ್ತು ಶಿಮ್ರಾನ್ ಹೆಟ್ಮೆಯರ್ ಸೇರ್ಪಡೆಗೊಂಡಿದ್ದಾರೆ. ಜೇಸನ್ ಹೋಲ್ಡರ್ ಕೂಡ ತಂಡಕ್ಕೆ ಮರಳಿದ್ದಾರೆ. ಹೀಗಿರುವಾಗ ಐದು ಪಂದ್ಯಗಳ ಈ ಸರಣಿಯು ಹಾರ್ದಿಕ್ ಪಾಂಡ್ಯಗೆ ಸವಾಲಿನಿಂದ ಕೂಡಿರಲಿದೆ ಎನ್ನಬಹುದು.

ಭಾರತ ಮತ್ತು ವೆಸ್ಟ್ ಇಂಡೀಸ್ ನಡುವಿನ ಎರಡನೇ ಏಕದಿನ ಪಂದ್ಯದಲ್ಲಿ ಹಾರ್ದಿಕ್ ನಾಯಕತ್ವದಲ್ಲಿ ತಂಡ ಸೋಲನುಭವಿಸಬೇಕಾಯಿತು. ಆದರೆ ಮೂರನೇ ಪಂದ್ಯದಲ್ಲಿ ಭರ್ಜರಿ ಗೆಲುವು ಸಾಧಿಸಿ, ಸರಣಿ ಕೈವಶ ಮಾಡಿಕೊಳ್ಳಲಾಗಿದೆ.

ವೆಸ್ಟ್ ಇಂಡೀಸ್ ಬಿಡುಗಡೆ ಮಾಡಿರುವ ಟಿ20 ತಂಡವನ್ನು ರೋವ್‌ಮನ್ ಪೊವೆಲ್ ಮುನ್ನಡೆಸಲಿದ್ದಾರೆ. ಇದಲ್ಲದೆ, ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ಶಾಯ್ ಹೋಪ್ ಮತ್ತು ವೇಗದ ಬೌಲರ್ ಒಶಾನೆ ಥಾಮಸ್ ಕೂಡ ಟಿ20ಯಲ್ಲಿ ಪುನರಾಗಮನ ಮಾಡಲಿದ್ದಾರೆ. ತಂಡದಲ್ಲಿ ಆರಂಭಿಕರಾದ ಕೈಲ್ ಮೇಯರ್ಸ್, ಜಾನ್ಸನ್ ಚಾರ್ಲ್ಸ್, ರೋಶ್ಟನ್ ಚೇಸ್ ಕೂಡ ಇದ್ದಾರೆ.

ಇತ್ತೀಚೆಗೆ ಮೇಜರ್ ಲೀಗ್ ಕ್ರಿಕೆಟ್ ನಲ್ಲಿ ಕೇವಲ 40 ಎಸೆತಗಳಲ್ಲಿ ಶತಕ ಸಿಡಿಸಿದ ಬ್ಯಾಟ್ಸ್ ಮನ್ ನಿಕೋಲಸ್ ಪೂರನ್ ಗೆ ಏಕದಿನ ಸರಣಿಯಲ್ಲಿ ಸ್ಥಾನ ನೀಡಿರಲಿಲ್ಲ. ಮುಂಬರುವ ಟಿ20 ವಿಶ್ವಕಪ್ ಅನ್ನು ಗಮನದಲ್ಲಿಟ್ಟುಕೊಂಡು ತಂಡವನ್ನು ಆಯ್ಕೆ ಮಾಡಲಾಗಿದೆ ಎಂದು ವೆಸ್ಟ್ ಇಂಡೀಸ್ ಮುಖ್ಯ ಆಯ್ಕೆಗಾರ ಡೆಸ್ಮಂಡ್ ಹೇನ್ಸ್ ಹೇಳಿದ್ದಾರೆ. ಮುಂದಿನ ಟಿ20 ವಿಶ್ವಕಪ್‌ಗೆ ಉತ್ತಮ ತಂಡವನ್ನು ನಿರ್ಮಿಸಲು ನಾವು ಯೋಜನೆ ರೂಪಿಸುತ್ತಿದ್ದೇವೆ. ನಮ್ಮಲ್ಲಿ ಕೆಲವು ಮ್ಯಾಚ್ ವಿನ್ನಿಂಗ್ ಆಟಗಾರರು ಇದ್ದಾರೆ ಎಂದು ಅವರು ಹೇಳಿದ್ದರು.

ಇದನ್ನೂ ಓದಿ: MS Dhoni: ವಿಂಟೇಜ್ ಕಾರಿನಲ್ಲಿ ಧೋನಿ ಜಾಲಿ ರೈಡ್: ಕ್ಯಾಪ್ಟನ್ ಕೂಲ್ ಎಂಜಾಯ್ಮೆಂಟ್ ವಿಡಿಯೋ ನೋಡಿ

ವೆಸ್ಟ್ ಇಂಡೀಸ್ T20 ತಂಡ:

ರೋವ್‌ಮನ್ ಪೊವೆಲ್ (ನಾಯಕ), ಕೈಲ್ ಮೇಯರ್ಸ್ (ಉಪ ನಾಯಕ), ಜಾನ್ಸನ್ ಚಾರ್ಲ್ಸ್, ರೋಸ್ಟನ್ ಚೇಸ್, ಶಿಮ್ರಾನ್ ಹೆಟ್ಮೆಯರ್, ನಿಕೋಲಸ್ ಪೂರನ್, ಜೇಸನ್ ಹೋಲ್ಡರ್, ಶಾಯ್ ಹೋಪ್, ಅಕಿಲ್ ಹೊಸೈನ್, ಅಲ್ಜಾರಿ ಜೋಸೆಫ್, ಬ್ರೆಂಡನ್ ಕಿಂಗ್, ಓಬೆಡ್ ಮೆಕಾಯ್, ರೊಮಾರಿಯೊ ಶೆಫರ್ಡ್, ಓಡಿಯನ್ ಥಾಮಸ್, ಓಶನ್ ಥಾಮಸ್, ಒಶಾನೆ ಥಾಮಸ್

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News