T20 World Cup 2024: ಟಿ20 ವಿಶ್ವಕಪ್ 2024 ವೆಸ್ಟ್ ಇಂಡೀಸ್ ಮತ್ತು ಅಮೆರಿಕದ ನೆಲದಲ್ಲಿ ಆರಂಭವಾಗಲಿದೆ. ಆದರೆ ವಿಶ್ವಕಪ್‌ ಆರಂಭಕ್ಕೂ ಮುನ್ನ ಹಠಾತ್ ಸುದ್ದಿಯೊಂದು ಎಲ್ಲೆಡೆ ಸಂಚಲನ ಮೂಡಿಸಿದೆ. ಕ್ರಿಕೆಟ್ ವೆಸ್ಟ್ ಇಂಡೀಸ್‌’ಗೆ ಭಯೋತ್ಪಾದಕ ದಾಳಿಯ ಬೆದರಿಕೆ ಇದೆ ಎಂದು ತಿಳಿದುಬಂದಿದೆ.


COMMERCIAL BREAK
SCROLL TO CONTINUE READING

ಉತ್ತರ ಪಾಕಿಸ್ತಾನದಲ್ಲಿರುವ ಐಎಸ್‌’ನ ಅಫ್ಘಾನಿಸ್ತಾನ-ಪಾಕಿಸ್ತಾನ ಶಾಖೆಯಾದ ಐಎಸ್-ಖೊರಾಸನ್, ಟಿ20 ವಿಶ್ವಕಪ್‌ನಲ್ಲಿ ಭಯೋತ್ಪಾದಕ ದಾಳಿ ನಡೆಸುವುದಾಗಿ ಬೆದರಿಕೆ ಹಾಕಿದೆ. ಕೆರಿಬಿಯನ್ ದೇಶಗಳನ್ನು ಗುರಿಯಾಗಿಸಿಕೊಂಡು ಭಯೋತ್ಪಾದಕ ಸಂಘಟನೆ ಇಸ್ಲಾಮಿಕ್ ಸ್ಟೇಟ್ ನಿಂದ ಬೆದರಿಕೆ ಇದೆ.


ಇದನ್ನೂ ಓದಿ: ಟೀಂ ಇಂಡಿಯಾದ ಮಿ.360 ಸೂರ್ಯಕುಮಾರ್ ಯಾದವ್ ಪತ್ನಿ ಯಾರು ಗೊತ್ತಾ? ಈಕೆ ಕರ್ನಾಟಕದ ಖ್ಯಾತ ಡ್ಯಾನ್ಸರ್…


ಆದರೆ, ವೆಸ್ಟ್ ಇಂಡೀಸ್‌’ನಲ್ಲಿ ನಡೆಯಲಿರುವ ಟಿ20 ವಿಶ್ವಕಪ್‌’ಗೆ ಭದ್ರತಾ ಬೆದರಿಕೆಯ ಭಯವನ್ನು ನಿವಾರಿಸಲು ಕ್ರಿಕೆಟ್ ವೆಸ್ಟ್ ಇಂಡೀಸ್ ಸರ್ವ ಪ್ರಯತ್ನ ಮಾಡುತ್ತಿದೆ. 2024 ರ ಟಿ 20 ವಿಶ್ವಕಪ್‌’ಗೆ ಕ್ರಿಕೆಟ್ ವೆಸ್ಟ್ ಇಂಡೀಸ್ ಬಿಗಿ ಭದ್ರತೆಯನ್ನು ಭರವಸೆ ನೀಡಿದೆ.


"ಐಸಿಸಿ ಪುರುಷರ T20 ವಿಶ್ವಕಪ್‌ನಲ್ಲಿ ಪ್ರತಿಯೊಬ್ಬರ ಸುರಕ್ಷತೆಯು ನಮ್ಮ ಮೊದಲ ಆದ್ಯತೆಯಾಗಿದೆ. ನಾವು ಸಮಗ್ರ ಮತ್ತು ದೃಢವಾದ ಭದ್ರತಾ ಯೋಜನೆಯನ್ನು ಹೊಂದಿದ್ದೇವೆ ಎಂದು ಭರವಸೆ ನೀಡಲು ಬಯಸುತ್ತೇವೆ" ಎಂದು ಕ್ರಿಕೆಟ್ ವೆಸ್ಟ್ ಇಂಡೀಸ್ ಸಿಇಒ ಜಾನಿ ಗ್ರೇವ್ಸ್ ಕ್ರಿಕ್‌ಬಜ್‌ಗೆ ತಿಳಿಸಿದರು.


ಮಾಹಿತಿಯ ಪ್ರಕಾರ, ಪ್ರೊ-ಇಸ್ಲಾಮಿಕ್ ಸ್ಟೇಟ್ ನಿಂದ ಟಿ 20 ವಿಶ್ವಕಪ್‌ಗೆ ಸಂಭವನೀಯ ಬೆದರಿಕೆಯ ಬಗ್ಗೆ ಗುಪ್ತಚರ ಮಾಹಿತಿಯು 'ನಾಶೀರ್ ಪಾಕಿಸ್ತಾನ್' ಮಾಧ್ಯಮ ಗುಂಪಿನ ಮೂಲಕ ಬಂದಿದೆ. ಡೈಲಿ ಎಕ್ಸ್‌ಪ್ರೆಸ್ ಪ್ರಕಾರ, ನಶೀರ್-ಇ ಪಾಕಿಸ್ತಾನವು ಇಸ್ಲಾಮಿಕ್ ಸ್ಟೇಟ್ ಗುಂಪಿನೊಂದಿಗೆ ಸಂಬಂಧಿಸಿದ ಪ್ರಚಾರದ ಚಾನಲ್ ಆಗಿದೆ.


ಇದನ್ನೂ ಓದಿ: ಮಾವಿನ ಹಣ್ಣನ್ನು ಹೀಗೆ ತಿಂದರೆ ಒಂದೇ ವಾರದಲ್ಲಿ 5 ಕೆಜಿಯಷ್ಟು ತೂಕ ಇಳಿಸಿಕೊಳ್ಳಬಹುದು! ಸೀಸನ್ ಮುಗಿಯೋದ್ರಲ್ಲಿ ಸ್ಲಿಮ್ ಆಗಿ


ವೆಸ್ಟ್ ಇಂಡೀಸ್‌ನಲ್ಲಿ T20 ವಿಶ್ವಕಪ್ 2024 ಪಂದ್ಯಗಳು ಆಂಟಿಗುವಾ ಮತ್ತು ಬಾರ್ಬುಡಾ, ಬಾರ್ಬಡೋಸ್, ಗಯಾನಾ, ಸೇಂಟ್ ಲೂಸಿಯಾ, ಸೇಂಟ್ ವಿನ್ಸೆಂಟ್ ಮತ್ತು ಗ್ರೆನಡೈನ್ಸ್, ಟ್ರಿನಿಡಾಡ್ ಮತ್ತು ಟೊಬಾಗೊದಲ್ಲಿ ನಡೆಯಲಿದೆ. ಯುಎಸ್ ನಗರಗಳಾದ ಫ್ಲೋರಿಡಾ, ನ್ಯೂಯಾರ್ಕ್ ಮತ್ತು ಟೆಕ್ಸಾಸ್‌ನಲ್ಲಿಯೂ ಪಂದ್ಯಗಳಿವೆ. ಆದರೆ ಅಮೆರಿಕಾದಲ್ಲಿ ಆಟಗಳಿಗೆ ಯಾವುದೇ ಅಪಾಯದ ಲಕ್ಷಣಗಳಿಲ್ಲ. ಎರಡು ಸೆಮಿಫೈನಲ್ ಪಂದ್ಯಗಳು ಟ್ರಿನಿಡಾಡ್ ಮತ್ತು ಗಯಾನಾದಲ್ಲಿ ನಡೆಯಲಿದ್ದು, ಫೈನಲ್ ಪಂದ್ಯ ಬಾರ್ಬಡೋಸ್‌ನಲ್ಲಿ ನಡೆಯಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ