India net session : ಬಾರತವು ದಕ್ಷಿಣ ಆಫ್ರಿಕಾ ವಿರುದ್ಧ ಮೊದಲನೇ ಪಂದ್ಯದಲ್ಲಿ ಹೀನಾಯ ಸೋಲನ್ನು ಅನುಭವಿಸಿದ ಹಿನ್ನಲೇ, ಮುಂದಿನ ಪಂದ್ಯಕ್ಕೆ ಭಾರಿ ತಯಾರಿನಡೆಸಿದೆ. ಈ ಪಂದ್ಯವು ಭಾರತದ ಪಾಲಿಗೆ ಮಾಡು ಇಲ್ಲವೇ ಮಡಿ ಪಂದ್ಯವಾಗಿದೆ, ಈ ಪಂದ್ಯದಲ್ಲಿ ಗೆದರೆ ಮಾತ್ರ ಸರಣಿಯನ್ನು ದಕ್ಷಿಣ ಆಫ್ರಿಕಾ ತಂಡದ ವಶವಾಗುವುದನ್ನ ತಪ್ಪಿಸಲು ಸಾಧ್ಯ.


COMMERCIAL BREAK
SCROLL TO CONTINUE READING

ಹಿಂದಿನ ಪಂದ್ಯದಲ್ಲಿ ಭಾರತಕ್ಕೆ ಪ್ರಮುಖ ಆಟಗಾರ ಕೊರತೆ ಉಂಟಾಗಿರುವುದು ಎದ್ದುಕಾಣಿಸಿದೆ. ಬ್ಯಾಟಿಂಗ್‌ ವಿಭಾಗದಲ್ಲಿ ಮಾತ್ರವಲ್ಲದೇ, ಬೌಲಿಂಗ್‌ ವಿಭಾಗದಲ್ಲೂ ಭಾರತ ತಂಡ ವಿಫಲವಾಯಿತು, ಅಷ್ಟೇ ಅಲ್ಲದೇ ಮೊದಲನೇ ಟೆಸ್ಟ್‌ನಲ್ಲಿ ತಂಡದ ಆಲ್‌ರೌಂಡರ್‌ ಜಡೇಜ ಕೊರತೆ ಇದ್ದುದು ಭಾರತಕ್ಕೆ ಭಾರಿ ಪರಿಣಾಮ ಬೀರಿದೆ. ಆದರೆ ಈ ಟೀಂ ಇಂಡಿಯಾದ ಮುಂದಿನ ಪಂದ್ಯಕ್ಕೆ ಜಡ್ಡು ಫುಲ್‌ ಫಟ್‌ ಆಗಿರುವುದು ಬಿಗ್‌ ಸರ್ಪ್ರೈಸ್‌ ಆಗಿದೆ.


ಇದನ್ನು ಓದಿ-ವಿಶ್ವದಲ್ಲೇ ಅತ್ಯಂತ ಕಡಿಮೆ ಸಾಧನೆ ಮಾಡಿರುವ ತಂಡಗಳಲ್ಲಿ ಭಾರತವು ಸೇರಿದೆ: ಮೈಕಲ್‌ ವಾಘನ್‌


ನೆಟ್‌ ಸೆಷನ್‌ ವೇಳೆ ಜಡೇಜಾ ಅವರು ಉತ್ತಮವಾಗಿ ಬೌಲಿಂಗ್‌ ಮಾಡಿದರು, ಈ ಮೂಲಕ ತಾವು ಫಿಟ್‌ ಆಗಿರುವುದನ್ನು ಸಾಭೀತು ಪಡಿಸಿ, ತಮ್ಮ ಹಳೆಯ ಫಾರ್ಮ್‌ ಮುಂದುವರೆಸುವ ಸೂಚನೆ ನೀಡಿದರು. ಅಷ್ಟೇ ಅಲ್ಲದೇ ನೆಟ್‌ನಲ್ಲಿ ಸಾಕಷ್ಟೂ ಸಮಯದ ವೆರಗೂ ಬ್ಯಾಟಿಂಗ್‌ ಮಾಡಿದರು. ಇವರು ತಂಡಕ್ಕೆ ಮರಳಿದರೆ ಬ್ಯಾಟಿಂಗ್‌ ವಿಭಾಗದಲ್ಲಿ ಮಾತ್ರ ಬಲಿಷ್ಠವಾಗುವುದಲ್ಲದೇ, ಬೌಲಿಂಗ್‌ ವಿಭಾಗದಲ್ಲಿ ಅಶ್ವಿನ್‌ಗೆ ಬಲ ನೀಡಲಿದ್ಧಾರೆ. 


ಇನ್ನು ನೆಟ್‌ ಸೆಷನ್‌ ಅಲ್ಲಿ ಮುಕೇಶ್‌ ಕೂಡ ಉತ್ತಮವಾಗಿ ಕಾಣಿಸಿಕೊಂಡರು, ಇವರು ಬೌಲಿಂಗ್‌ ಮಾಡುವ ವೇಳೆ ರೋಹಿತ್‌ ಶರ್ಮಾ ಅವರ ವಿಕೇಟ್‌ ಉರುಳಿಸಿ ಎಲ್ಲರ ಗಮನ ಸೆಳೆದರು. ರೋಹಿತ್‌ ಶರ್ಮಾ ಗಮನ ಇವರ ಮೇಲೆ ಹೆಚ್ಚು ಕೇಂದ್ರಿಕೃತವಾಗಿದ್ದು, ದಕ್ಷಿಣ ಆಫ್ರಿಕಾ ವಿರುದ್ದದ 2ನೇ ಟೆಸ್ಟ್‌ ಪಂದ್ಯದಲ್ಲಿ ಭಾರತ ತಂಡದಲ್ಲಿ ಆಡುವ ಹೆಚ್ಚು ನಿರೀಕ್ಷೆಯಿದೆ. 


ಇದನ್ನು ಓದಿ-“ಈ ವೇಗಿಯನ್ನು ಈಗಿನಿಂದಲೇ ಸಿದ್ಧಪಡಿಸಿ, ಅತ್ಯುತ್ತಮ ಬೌಲರ್ ಆಗಬಹುದು”: ಟೀಂ ಇಂಡಿಯಾಗೆ ರವಿ ಶಾಸ್ತ್ರಿ ಸಲಹೆ


ಮೊದಲ ಪಂದ್ಯದಲ್ಲಿ 185 ರನ್‌ ಗಳಿಸಿ ಭಾರತಕ್ಕೆ ಮಾರಕವಾಗಿದ್ದ ಡೀನ್‌ ಎಲ್ಗರ್‌ ವಿಕೇಟ್‌ ಪಡೆದ ಶಾರ್ದೂಲ್‌ ಇಂಜುರಿಯ ಸಮಸ್ಯೆ ಎದುರಾಗಿದೆ. ನೆಟ್‌ ಸೆಷನ್‌ ಅಲ್ಲಿ ಬ್ಯಾಟಿಂಗ್‌ ಪ್ರಾಕ್ಟೀಸ್‌ ಮಾಡುತ್ತಿರುವಾಗ ಅವರ ಭುಜಕ್ಕೆ ಸ್ವಲ್ಪ ನೋವುಂಟಾಗಿದೆ. 2ನೇ ಟೆಸ್ಟ್‌ ಆರಂಭವಾಗುವುದಕ್ಕು ಮುನ್ನ ಸಂಪೂರ್ಣವಾಗಿ ಗುಣಮುಖರಾಗುವ ಸಾಧ್ಯತೆ ಇದೆ.


ದಕ್ಷಿಣ ಆಪ್ರಿಕಾ ಮತ್ತು ಭಾರತದ 2ನೇ ಟೆಸ್ಟ್‌ ಪಂದ್ಯವು 2024ರ ಜನವರಿ 3ರಂದು ನ್ಯೂಲಾಂಡ್‌ನಲ್ಲಿರಂದು ಆರಂಭಗೊಳ್ಳಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.