IPL auction: ಐಪಿಎಲ್ (ಐಪಿಎಲ್-2023) ನ ಮುಂದಿನ ಋತುವಿನ ಮೊದಲು ಮಿನಿ ಹರಾಜನ್ನು ನಡೆಸಲಾತ್ತದೆ. ಇದರಲ್ಲಿ ಫ್ರಾಂಚೈಸಿಗಳು ಅನೇಕ ಯುವ ಮತ್ತು ಅನುಭವಿ ಆಟಗಾರರನ್ನು ಖರೀದಿಸಲು ಪ್ರಯತ್ನಿಸುತ್ತಿದೆ. ಹರಾಜಿಗೆ ಇನ್ನು ಕೆಲವೇ ದಿನಗಳು ಬಾಕಿ ಇವೆ. ಈ ಮಧ್ಯೆ ಅನೇಕ ಆಟಗಾರರು ಸಾಧ್ಯವಿರುವ ಎಲ್ಲ ರೀತಿಯಲ್ಲಿ ತಮ್ಮನ್ನು ತಾವು ಸಾಬೀತುಪಡಿಸಲು ಪ್ರಯತ್ನಿಸುತ್ತಿದ್ದಾರೆ. ಮಹೇಂದ್ರ ಸಿಂಗ್ ಧೋನಿ ನಾಯಕತ್ವದಲ್ಲಿ ಒಮ್ಮೆ ಆಡಿದ್ದ ಆಟಗಾರನೊಬ್ಬ ಈ ಸೀಸನ್‌ಗೂ ಮುನ್ನ ದೇಶಿ ಕ್ರಿಕೆಟ್‌ನಲ್ಲಿ ಅಬ್ಬರಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: Lionel Messi Retirement: ಫುಟ್ಬಾಲ್ ಲೋಕಕ್ಕೆ ‘ಮೆಸ್ಸಿ’ ವಿದಾಯ!! ಸಂದರ್ಶನದಲ್ಲಿ ರಿವೀಲ್ ಆಯ್ತು ಸತ್ಯಾಂಶ


IPL-2023 ರ ಕಿರು ಹರಾಜಿನ ಸಮಯದಲ್ಲಿ, ಒಟ್ಟು 87 ಸ್ಲಾಟ್‌ಗಳಿಗೆ 405 ಆಟಗಾರರ ಮೇಲೆ ಬಿಡ್ಡಿಂಗ್ ಮಾಡಲಾಗುತ್ತದೆ. ರಾಷ್ಟ್ರೀಯ ತಂಡಕ್ಕಾಗಿ ಆಡಿದ ಅನುಭವಿ ಕ್ರಿಕೆಟಿಗರನ್ನು ಹೊರತುಪಡಿಸಿ, ಎಲ್ಲಾ 10 ಫ್ರಾಂಚೈಸಿಗಳ ನಡುವೆ ಒಪ್ಪಂದಕ್ಕೆ ಸ್ಪರ್ಧಿಸುವ ಕೆಲವು ಅನ್‌ಕ್ಯಾಪ್ಡ್ ಭಾರತೀಯ ಆಟಗಾರರೂ ಇದ್ದಾರೆ. ಅಂತಹ ವಿಕೆಟ್ ಕೀಪರ್ ಬ್ಯಾಟ್ಸ್‌ಮನ್ ನಾರಾಯಣ ಜಗದೀಶ್‌. ನಾಲ್ಕು ಬಾರಿಯ ಚಾಂಪಿಯನ್ ತಂಡವಾದ ಚೆನ್ನೈ ಸೂಪರ್ ಕಿಂಗ್ಸ್ ಮಿನಿ ಹರಾಜಿಗೂ ಮುನ್ನ ಜಗದೀಶನನ್ನು ಬಿಡುಗಡೆ ಮಾಡಿದೆ.


ಜಗದೀಶನ್ 2020 ರಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡದಲ್ಲಿದ್ದರು. ಕಳೆದ ಋತುವಿನಲ್ಲಿಯೂ ಅವರು ಧೋನಿ ನಾಯಕತ್ವದಲ್ಲಿ ಈ ತಂಡದಲ್ಲಿ ಆಡಿದ್ದರು. ಆದರೆ ಈ ಮೂರು ವರ್ಷಗಳಲ್ಲಿ ಅವರಿಗೆ ಕಡಿಮೆ ಅವಕಾಶಗಳು ಸಿಕ್ಕಿದ್ದವು. ಈ ಅವಧಿಯಲ್ಲಿ ಅವರು CSK ಪರ ಕೇವಲ 7 ಪಂದ್ಯಗಳನ್ನು ಮಾತ್ರ ಆಡಿರುಬಹುದು. ಇದಕ್ಕೆ ದೊಡ್ಡ ಕಾರಣ ಧೋನಿ ವಿಕೆಟ್ ಕೀಪರ್ ಆಗಿರುವುದು. ವಾಸ್ತವವಾಗಿ, ಜಗದೀಶ್ ಅವರು ವಿಕೆಟ್ ಕೀಪರ್ ಆಗಿಯೂ ಆಡುತ್ತಾರೆ.


ದೇಶಿ ಕ್ರಿಕೆಟ್‌ನಲ್ಲಿ ಅಮೋಘ ಪ್ರದರ್ಶನ:


ದೇಶಿಯ ಕ್ರಿಕೆಟ್‌ನಲ್ಲಿ ತಮಿಳುನಾಡು ತಂಡವನ್ನು ಪ್ರತಿನಿಧಿಸಿದ್ದ ನಾರಾಯಣ್ ಜಗದೀಶನ್, ವಿಜಯ್ ಹಜಾರೆ ಟ್ರೋಫಿಯಲ್ಲಿ ಅಬ್ಬರಿಸಿದ್ದರು. ಇನ್ನು ರಣಜಿ ಟ್ರೋಫಿಯಲ್ಲೂ ಶತಕ ಬಾರಿಸಿದ್ದಾರೆ. ಹೈದರಾಬಾದ್ ವಿರುದ್ಧದ ಗ್ರೂಪ್-ಬಿ ಎಲೈಟ್ ಪಂದ್ಯದಲ್ಲಿ ಅವರು ಎರಡನೇ ದಿನ 116 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ದಿನದಾಟದ ಅಂತ್ಯಕ್ಕೆ 95 ಎಸೆತಗಳಲ್ಲಿ 16 ಬೌಂಡರಿ ಹಾಗೂ 3 ಸಿಕ್ಸರ್‌ಗಳ ನೆರವಿನಿಂದ 116 ರನ್ ಗಳಿಸಿದ ಜಗದೀಶನ್ ಅಜೇಯರಾಗಿದ್ದರು. ಇದಕ್ಕೂ ಮುನ್ನ ಅವರ ಲಿಸ್ಟ್ ಎ ಕ್ರಿಕೆಟ್‌ನ ಅತಿ ದೊಡ್ಡ ಸ್ಕೋರ್ (277 ರನ್) ಗಳಿಸಿದ್ದರು.


ಇದನ್ನೂ ಓದಿ: FIFA World Cup 2022: ಮೊರೊಕೊ ಕನಸು ಭಗ್ನಗೊಳಿಸಿದ ಫ್ರಾನ್ಸ್: ಫೈನಲ್ ನಲ್ಲಿ ಅರ್ಜೆಂಟಿನಾ ಮುಖಾಮುಖಿ


ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಸತತ 5 ಶತಕಗಳು


ರಣಜಿ ಟ್ರೋಫಿಗೂ ಮುನ್ನ ವಿಜಯ್ ಹಜಾರೆ ಟ್ರೋಫಿ ಟೂರ್ನಿಯಲ್ಲೂ ಜಗದೀಶ್ ಅದ್ಭುತ ಪ್ರದರ್ಶನ ನೀಡಿದ್ದರು. ಅವರು ಸತತ ಐದು ಶತಕಗಳನ್ನು ಬಾರಿಸಿದರು. ಇಷ್ಟೇ ಅಲ್ಲ, ಅರುಣಾಚಲ ವಿರುದ್ಧದ ಪಂದ್ಯದಲ್ಲಿ ಅವರು 277 ರನ್ ಗಳಿಸಿದರು, ಇದು ಲಿಸ್ಟ್-ಎ ಕ್ರಿಕೆಟ್‌ನಲ್ಲಿ ಗರಿಷ್ಠ ಸ್ಕೋರ್ ಆಗಿದೆ. ಅವರು ವಿಜಯ್ ಹಜಾರೆ ಟ್ರೋಫಿಯ 8 ಪಂದ್ಯಗಳಲ್ಲಿ 138 ರ ಸರಾಸರಿಯಲ್ಲಿ ಒಟ್ಟು 830 ರನ್‌ಗಳನ್ನು ಗಳಿಸಿದ್ದಾರೆ. ದೇಶಿ ಕ್ರಿಕೆಟ್‌ನಲ್ಲಿ ಜಗದೀಶ್‌ ಆಡುತ್ತಿರುವ ರೀತಿ ನೋಡಿದರೆ ಡಿಸೆಂಬರ್‌ 23ರಂದು ನಡೆಯಲಿರುವ ಐಪಿಎಲ್‌ ಹರಾಜಿನಲ್ಲಿ ಕೋಟ್ಯಂತರ ರೂ. ಖರೀದಿ ಆಗುವ ಸಾಧ್ಯತೆಯಿದೆ. ಆದರೆ ಇವರಿಗೆ ಅಂತರಾಷ್ಟ್ರೀಯ ಕ್ರಿಕೆಟ್‌ಗೆ ಇನ್ನೂ ಪದಾರ್ಪಣೆ ಮಾಡಲು ಸಾಧ್ಯವಾಗಿಲ್ಲ. ಹೀಗಿರುವಾಗ ಟೀಂ ಇಂಡಿಯಾದಿಂದಲೂ ಜಗದೀಶ್‌ಗೆ ಆಹ್ವಾನ ಬರಬಹುದು ಎಂದು ನಿರೀಕ್ಷಿಸಬಹುದು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.