FIFA World Cup 2022: ಕತಾರ್ ನಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ 2022ರ ಸೆಮಿಫೈನಲ್ ಕಳೆದ ದಿನ ನಡೆದಿದ್ದು, ಮೊರೊಕೋ ವಿರುದ್ಧ ಫ್ರಾನ್ಸ್ ಭರ್ಜರಿ ಜಯ ಸಾಧಿಸಿದೆ. ಥಿಯೋ ಹೆರ್ನಾಂಡೆಜ್ ಮತ್ತು ರಾಂಡಲ್ ಕೊಲೊ ಮುವಾನಿ ಸೆಮಿಫೈನಲ್ ಹಣಾಹಣಿಯಲ್ಲಿ ಬಾರಿಸಿದ 2-0 ಗೋಲುಗಳು ಫ್ರಾನ್ಸ್ ಗೆಲುವಿಗೆ ಕಾರಣವಾಗಿದೆ. ಈ ಮೂಲಕ ಮೊರೊಕೊದ ವಿಶ್ವಕಪ್ ಗೆಲ್ಲುವ ಕನಸನ್ನು ಕೊನೆಗೊಳಿಸಿದೆ.
ಇದೇ ಭಾನುವಾರ ಲಿಯೋನೆಲ್ ಮೆಸ್ಸಿ ಮುಂದಾಳತ್ವದ ಅರ್ಜೆಂಟೀನಾ ವಿರುದ್ಧ ಫ್ರಾನ್ಸ್ ಸೆಣಸಾಡಲಿದೆ. ಕಳೆದ ದಿನ ನಡೆದ ಪಂದ್ಯದಲ್ಲಿ ಅಲ್ ಬೇಟ್ ಸ್ಟೇಡಿಯಂನಲ್ಲಿ ಫ್ರಾನ್ಸ್ ತಂಡದ ಹೆರ್ನಾಂಡೆಜ್ ಐದು ನಿಮಿಷಗಳಲ್ಲಿ ಗೋಲು ಗಳಿಸಿದರು. ಈ ಮೂಲಕ ಎದುರಾಳಿ ತಂಡ ಮೊರೊಕೊವನ್ನು ಕಟ್ಟಿ ಹಾಕಿತು.
ಇದನ್ನೂ ಓದಿ: Virat Kohli : ಕೊಹ್ಲಿಯ ಅದೃಷ್ಟವನ್ನೇ ಬದಲಿಸಿದ ಈ ಶತಕ : ಬಾಂಗ್ಲಾ ಟೆಸ್ಟ್ ಸರಣಿಯ ಮಧ್ಯ ಸಿಹಿ ಸುದ್ದಿ!
ವಿಶ್ವಕಪ್‌ನಲ್ಲಿ ಕೊನೆಯ ನಾಲ್ಕನೇ ಹಂತ ತಲುಪಿದ ಮೊದಲ ಆಫ್ರಿಕನ್ ಮತ್ತು ಅರಬ್ ತಂಡ ಎಂದರೆ ಅದು ಮೊರೊಕೊ. ಈ ತಂಡವು ಪ್ರಮುಖ ಆಟಗಾರರನ್ನು ಗಾಯದಿಂದ ಮಿಸ್ ಮಾಡಿಕೊಂಡರೂ ಸಹ ಬದಲಿ ಆಟಗಾರ ಕೊಲೊ ಮುವಾನಿ ಲೆಸ್ ಬ್ಲ್ಯೂಸ್ ತಂಡಕ್ಕೆ ಕೊಂಚ ನೆರವಾಗಿದ್ದರು. ಈ ಮೂಲಕ ನಾಲ್ಕರ ಹಂತಕ್ಕೆ ತಂಡ ಬಂದು ತಲುಪಿತ್ತು.
ಇನ್ನು ಏಳು ಆವೃತ್ತಿಗಳಲ್ಲಿ ಫ್ರಾನ್ಸ್‌ನ ನಾಲ್ಕನೇ ವಿಶ್ವಕಪ್ ಫೈನಲ್ ಆಗಿದ್ದು, ಭಾನುವಾರ ಲುಸೈಲ್ ಸ್ಟೇಡಿಯಂನಲ್ಲಿ ಅರ್ಜೆಂಟೀನಾವನ್ನು ಎದುರಿಸುವಾಗ 60 ವರ್ಷಗಳ ಹಿಂದೆ ಬ್ರೆಜಿಲ್ ನಂತರ ಟ್ರೋಫಿಯನ್ನು ಉಳಿಸಿಕೊಂಡ ಮೊದಲ ತಂಡವಾಗುವ ಭರವಸೆಯಲ್ಲಿದೆ. ಇದು ಮೆಸ್ಸಿ ಮತ್ತು ಕೈಲಿಯನ್ ಎಂಬಪ್ಪೆ ನಡುವಿನ ಮುಖಾಮುಖಿಯಾಗಿದೆ.
ಇನ್ನು ಶನಿವಾರದಂದು ಮೂರನೇ ಸ್ಥಾನಕ್ಕಾಗಿ ಮೊರೊಕೊ, ಕ್ರೊಯೆಷಿಯಾ ವಿರುದ್ಧ ಸೆಣಸಾಡಲಿದೆ. ಈ ಹಿಂದೆ ಗ್ರೂಪ್ ಹಂತದಲ್ಲಿ ಬೆಲ್ಜಿಯಂ ತಂಡವನ್ನು ಸೋಲಿಸಿ, ಬಳಿಕ ಸ್ಪೇನ್ ಮತ್ತು ಪೋರ್ಚುಗಲ್ ತಂಡವನ್ನು ಮಣಿಸಿದ ಮೊರೊಕೊ ಸೆಮಿಫೈನಲ್ ಪ್ರವೇಶಿಸಿತ್ತು.
ಮೆಸ್ಸಿ ಕೊನೆಯ ಪಂದ್ಯ?
2022 ರ ಫಿಫಾ ವಿಶ್ವಕಪ್ ಫೈನಲ್ ಅರ್ಜೆಂಟೀನಾಗೆ ತನ್ನ ಕೊನೆಯ ಪಂದ್ಯ ಎಂದು ಲಿಯೋನೆಲ್ ಮೆಸ್ಸಿ ದೃಢಪಡಿಸಿದ್ದಾರೆ ಎಂದು ವರದಿಯಾಗಿದೆ. ಬುಧವಾರ ನಡೆದ ಮೊದಲ ಸೆಮಿಫೈನಲ್‌ನಲ್ಲಿ ಅರ್ಜೆಂಟೀನಾ 3-0 ಗೋಲುಗಳಿಂದ ಕ್ರೊಯೇಷಿಯಾವನ್ನು ಸೋಲಿಸುವ ಮೂಲಕ ಫೈನಲ್ ಪ್ರವೇಶಿಸಿದೆ. ಪಂದ್ಯಾವಳಿಯಲ್ಲಿ ಇದುವರೆಗೆ ಐದು ಗೋಲುಗಳನ್ನು ಗಳಿಸಿರುವ ಮೆಸ್ಸಿ ವಿಶ್ವ ಕಪ್‌ಗಳಲ್ಲಿ ಅರ್ಜೆಂಟೀನಾದ ಪ್ರಮುಖ ಗೋಲ್‌ಸ್ಕೋರರ್ ಆಗಿದ್ದಾರೆ. ಪಟ್ಟಿಯಲ್ಲಿ ಗೇಬ್ರಿಯಲ್ ಬಟಿಸ್ಟುಟಾ (10) ಅವರನ್ನು ಹಿಂದಿಕ್ಕಿದ್ದಾರೆ. 35ರ ಹರೆಯದ ಅವರು ಇಲ್ಲಿಯವರೆಗೆ 11 ವಿಶ್ವಕಪ್ ಗೋಲುಗಳನ್ನು ಹೊಂದಿದ್ದಾರೆ.
ಇದನ್ನೂ ಓದಿ: FIFA World Cup: The Hand of God ಬಗ್ಗೆ ನಿಮಗೆಷ್ಟು ಗೊತ್ತು?
"ನನ್ನ ಕೊನೆಯ ಪಂದ್ಯವನ್ನು ಫೈನಲ್‌ನಲ್ಲಿ ಆಡುವ ಮೂಲಕ ನನ್ನ ವಿಶ್ವಕಪ್ ಪ್ರಯಾಣವನ್ನು ಪೂರ್ಣಗೊಳಿಸಲು ನನಗೆ ತುಂಬಾ ಸಂತೋಷವಾಗಿದೆ" ಎಂದು ಮೆಸ್ಸಿ ಅರ್ಜೆಂಟೀನಾದ ಮಾಧ್ಯಮ ಔಟ್‌ಲೆಟ್ ಡಿಯಾರಿಯೊ ಡಿಪೋರ್ಟಿವೊ ಓಲೆಗೆ ತಿಳಿಸಿದ್ದಾರೆ ಎಂದು ಹೇಳಲಾಗಿದೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.