ಮುಂದಿನ ಸರಣಿಗೆ ಪ್ಲೇಯಿಂಗ್ 11 ರೆಡಿ: 40ರ ಹರೆಯದ ಈ ಅನುಭವಿಗೆ ಕೊನೆಗೂ ಅವಕಾಶ ಕೊಟ್ಟ ಸಮಿತಿ
England vs Australia 5th Test: ಓವಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದನೇ ಮತ್ತು ಅಂತಿಮ ಆಶಸ್ ಟೆಸ್ಟ್ ಗಾಗಿ ಇಂಗ್ಲೆಂಡ್ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ
England vs Australia 5th Test: ಆಶಸ್ ಸರಣಿ ಪ್ರಸ್ತುತ ಇಂಗ್ಲೆಂಡ್ ಆತಿಥ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಆಡುತ್ತಿದೆ. ಸರಣಿಯ ಐದನೇ ಮತ್ತು ಅಂತಿಮ ಟೆಸ್ಟ್ ಪಂದ್ಯ ಜುಲೈ 27 ರಿಂದ ಕೆನ್ನಿಂಗ್ಟನ್ ಓವಲ್ ಮೈದಾನದಲ್ಲಿ ನಡೆಯಲಿದೆ. ಈ ಪಂದ್ಯಕ್ಕೆ ಇಂಗ್ಲೆಂಡ್‌ನ ಪ್ಲೇಯಿಂಗ್-11 ಪ್ರಕಟಿಸಲಾಗಿದೆ.
ಇದನ್ನೂ ಓದಿ: IND vs PAK: ಭಾರತ-ಪಾಕ್ ವಿಶ್ವಕಪ್ ಪಂದ್ಯದ ದಿನಾಂಕ ಬದಲಾವಣೆ! ಈ ದಿನದಂದು ನಡೆಯಲಿದೆ ಐತಿಹಾಸಿಕ ಮ್ಯಾಚ್
ಓವಲ್ ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಐದನೇ ಮತ್ತು ಅಂತಿಮ ಆಶಸ್ ಟೆಸ್ಟ್ ಗಾಗಿ ಇಂಗ್ಲೆಂಡ್ ತನ್ನ ತಂಡದಲ್ಲಿ ಯಾವುದೇ ಬದಲಾವಣೆ ಮಾಡಿಲ್ಲ. 40 ವರ್ಷದ ಅನುಭವಿ ಜೇಮ್ಸ್ ಆಂಡರ್ಸನ್ ಅವರನ್ನು ಪ್ಲೇಯಿಂಗ್-11 ರಲ್ಲಿ ಸೇರಿಸಲಾಗಿದೆ.
ಈ ಸರಣಿಯ 5ನೇ ಟೆಸ್ಟ್ ಪಂದ್ಯದ ನಾಲ್ಕನೇ ದಿನಕ್ಕೆ ಜೇಮ್ಸ್ ಆಂಡರ್ಸನ್ 41ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಅವರು ಇಂಗ್ಲೆಂಡ್‌ನ ಅತ್ಯಂತ ಯಶಸ್ವಿ ಬೌಲರ್. ಜೇಮ್ಸ್ ಆಂಡರ್ಸನ್ ಇದುವರೆಗಿನ ಸರಣಿಯಲ್ಲಿ ನಿರಾಶಾದಾಯಕ ಪ್ರದರ್ಶನ ನೀಡಿದರೂ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ವೇಗಿ ಮಾರ್ಕ್ ವುಡ್ ಮತ್ತು ಆಲ್ ರೌಂಡರ್ ಕ್ರಿಸ್ ವೋಕ್ಸ್ ಕೂಡ ಫಿಟ್ ಎಂದು ಘೋಷಿಸಲಾಗಿದೆ. ಐದನೇ ಟೆಸ್ಟ್ ಜುಲೈ 27 ರಿಂದ ಅಂದರೆ ಇಂದಿನಿಂದ ಆರಂಭವಾಗಲಿದೆ.
ಇದನ್ನೂ ಓದಿ: “ಕೊಹ್ಲಿಯಿಂದಲೇ ಅಂತ್ಯ ಕಂಡಿತ್ತು ಜಹೀರ್ ಖಾನ್ ವೃತ್ತಿಜೀವನ”: ಈ ಅನುಭವಿ ಹೇಳಿಕೆಗೆ ಕ್ರಿಕೆಟ್ ಲೋಕದಲ್ಲಿ ತಲ್ಲಣ
ಸರಣಿಯಲ್ಲಿ ಆಸ್ಟ್ರೇಲಿಯಾ 2-1 ಮುನ್ನಡೆ ಕಾಯ್ದುಕೊಂಡಿದ್ದು, ಆಶಸ್ ಟ್ರೋಫಿ ಎತ್ತಿಹಿಡಿಯುವ ತವಕದಲ್ಲಿದೆ. ಬರ್ಮಿಂಗ್ ಹ್ಯಾಮ್ ನಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯವನ್ನು ಆಸ್ಟ್ರೇಲಿಯಾ ತಂಡ 2 ವಿಕೆಟ್ ಗಳಿಂದ ಗೆದ್ದುಕೊಂಡಿದೆ. ಇದಾದ ಬಳಿಕ ಲಂಡನ್ ನ ಐತಿಹಾಸಿಕ ಲಾರ್ಡ್ಸ್ ಮೈದಾನದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದಲ್ಲಿ 43 ರನ್ ಗಳಿಂದ ಗೆದ್ದು 2-0 ಮುನ್ನಡೆ ಸಾಧಿಸಿದೆ. ಬೆನ್ ಸ್ಟೋಕ್ಸ್ ನಾಯಕತ್ವದ ಆಂಗ್ಲ ತಂಡವು ನಂತರ ಮೂರನೇ ಟೆಸ್ಟ್ ಪಂದ್ಯದಲ್ಲಿ ಫಾರ್ಮ್ ಗೆ ಮರಳಿ, 3 ವಿಕೆಟ್‌ಗಳಿಂದ ಗೆದ್ದುಕೊಂಡಿದೆ. ಮ್ಯಾಂಚೆಸ್ಟರ್‌ನಲ್ಲಿ ನಡೆದ ನಾಲ್ಕನೇ ಟೆಸ್ಟ್ ಪಂದ್ಯ ಡ್ರಾ ಆಗಿತ್ತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ