Today Horoscope 24 July 2023, Dina Bhavishya Thursday: ಗುರುವಾರದಂದು ವೃಷಭ ರಾಶಿಯವರಲ್ಲಿ ಕೆಲಸ ಮಾಡುವ ಚೈತನ್ಯವು ಹೆಚ್ಚಿನ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕು.
ಇದನ್ನೂ ಓದಿ: ಎಷ್ಟೇ ಕಷ್ಟಪಟ್ಟರೂ ಜೀವನದಲ್ಲಿ ಹಣಕಾಸಿನ ಸ್ಥಿತಿ ಸುಧಾರಿಸುತ್ತಿಲ್ಲವೇ? ಈ ಸಲಹೆಗಳನ್ನೊಮ್ಮೆ ಪ್ರಯತ್ನಿಸಿ!
ಮೇಷ ರಾಶಿ - ಈ ರಾಶಿಯ ಜನರು ದಿನದ ಆರಂಭದಿಂದ ನಕಾರಾತ್ಮಕತೆಯನ್ನು ಅನುಭವಿಸಬಹುದು. ವಿದ್ಯಾರ್ಥಿಗಳ ಸ್ಥಿತಿ ಉತ್ತಮವಾಗಿರುತ್ತದೆ. ಕೌಟುಂಬಿಕ ವಾತಾವರಣ ಆಹ್ಲಾದಕರವಾಗಿರುತ್ತದೆ. ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸಿ. ಅನಾರೋಗ್ಯಕ್ಕೆ ಒಳಗಾಗುವ ಸಾಧ್ಯತೆಯಿದೆ.
ವೃಷಭ ರಾಶಿ - ಕೆಲಸ ಮಾಡುವ ಶಕ್ತಿಯನ್ನು ವೃಷಭ ರಾಶಿಯ ಜನರಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಕಾಣಬಹುದು. ಇದರ ಉತ್ತಮ ಪ್ರಯೋಜನವನ್ನು ಪಡೆದುಕೊಳ್ಳಬೇಕು. ಲಾಭ ಹೆಚ್ಚಾಗಿರುತ್ತದೆ. ಆರೋಗ್ಯದ ಬಗ್ಗೆ ಕಾಳಜಿವಹಿಸಿ.
ಮಿಥುನ ರಾಶಿ - ಈ ರಾಶಿಯ ಜನರು ದಿನಾಂತ್ಯಕ್ಕೆ ಶುಭಸುದ್ದಿಯನ್ನು ಕೇಳುವಿರಿ. ಯುವಕರ ಮನಸ್ಸಿನಲ್ಲಿ ಅನೇಕ ಆಲೋಚನೆಗಳು ಬರಬಹುದು. ಸಾವಧಾನದಿಂದ ನಿರ್ಧಾರ ತೆಗೆದುಕೊಳ್ಳಿ. ಮಕ್ಕಳಿಗೆ ವಿದ್ಯಾಭ್ಯಾಸದ ಕಡೆ ಗಮನ ಹರಿಸುವಂತೆ ಪೋಷಕರು ನೋಡಿಕೊಳ್ಳಿ.
ಕರ್ಕಾಟಕ ರಾಶಿ - ಕರ್ಕಾಟಕ ರಾಶಿಯ ಜನರ ಕಛೇರಿಯಲ್ಲಿ ನಿರ್ವಹಣೆಯು ಉತ್ತಮವಾಗಿರುತ್ತದೆ. ವ್ಯಾಪಾರಿಗಳು ತಮ್ಮ ಶ್ರಮಕ್ಕೆ ಅನುಗುಣವಾಗಿ ಲಾಭವನ್ನು ಪಡೆಯದ ಕಾರಣ ಅಸಮಾಧಾನಗೊಳ್ಳಬಹುದು. ಇಂದು ಯುವಕರಿಗೆ ವಿಶ್ರಾಂತಿಯ ದಿನವಾಗಿದೆ.
ಸಿಂಹ ರಾಶಿ - ಈ ರಾಶಿಯ ಜನರು ಜೀವನೋಪಾಯದ ಕ್ಷೇತ್ರದಲ್ಲಿ ಹೆಚ್ಚು ಕಷ್ಟಪಡಬೇಕಾಗಬಹುದು. ವ್ಯಾಪಾರದ ದೃಷ್ಟಿಯಿಂದ ಇಂದು ಶುಭ ದಿನವಾಗಿದೆ. ವ್ಯಾಪಾರ ಯೋಜನೆಗಳು ತಮ್ಮದೇ ಆದ ವೇಗದಲ್ಲಿ ಸುಗಮವಾಗಿ ಸಾಗುತ್ತವೆ. ಕೌಟುಂಬಿಕ ವಿವಾದಗಳಿಂದ ದೂರವಿರಿ.
ಕನ್ಯಾ ರಾಶಿ - ಹೊಸ ಜವಾಬ್ದಾರಿಯನ್ನು ನಿಯೋಜಿಸಬಹುದು. ಯುವಕರು ಮಾನಸಿಕವಾಗಿ ಜಾಗರೂಕರಾಗಿರಬೇಕು, ಸಣ್ಣ ವಿಷಯಗಳಿಗೆ ಸಹ ಬೇಸರವಾಗಬಹುದು. ಉತ್ತಮ ಬಾಂಧವ್ಯವು ನಿಮಗೆ ಕಷ್ಟಗಳಿಂದ ಹೊರಬರಲು ಸಹಾಯ ಮಾಡುತ್ತದೆ.
ತುಲಾ - ಈ ರಾಶಿಯ ಜನರಿಗೆ ದಿನವು ತುಂಬಾ ಕಾರ್ಯನಿರತವಾಗಿರುತ್ತದೆ. ಹಳೆಯ ದ್ವೇಷವನ್ನು ಮತ್ತೆ ಸಾಧಿಸಬೇಡಿ. ಕುಟುಂಬದ ದೃಷ್ಟಿಯಿಂದ ಇಂದು ಉತ್ತಮ ದಿನವಾಗಿದೆ. ಕುಟುಂಬದಲ್ಲಿ ಸಾಕಷ್ಟು ಚಟುವಟಿಕೆ ಇರುತ್ತದೆ, ಸ್ನಾಯು ನೋವು ಬರುವ ಸಾಧ್ಯತೆಯಿದೆ.
ವೃಶ್ಚಿಕ ರಾಶಿ - ವೃಶ್ಚಿಕ ರಾಶಿಯ ಜನರು ಕೆಲಸದಲ್ಲಿ ಅಪೇಕ್ಷಿತ ಯಶಸ್ಸನ್ನು ಪಡೆಯುವ ಸಾಧ್ಯತೆ ಕಡಿಮೆ. ಮಧ್ಯಾಹ್ನದ ನಂತರ ಪರಿಸ್ಥಿತಿಯಲ್ಲಿ ಬದಲಾವಣೆ ಕಂಡುಬರಲಿದೆ. ಹೂಡಿಕೆ ಮಾಡುವ ಆಲೋಚನೆಯಲ್ಲಿರುವ ಉದ್ಯಮಿಗಳು ಸ್ವಲ್ಪ ಸಮಯ ಕಾಯುವುದು ಸೂಕ್ತ.
ಧನು ರಾಶಿ - ಈ ರಾಶಿಯ ಜನರು ಕಚೇರಿಯಲ್ಲಿ ತಮ್ಮ ಜವಾಬ್ದಾರಿಗಳಿಂದ ಹಿಂದೆ ಸರಿಯಬಾರದು, ಕೆಲಸದ ಒತ್ತಡವು ನಿಮ್ಮ ಮೇಲೆ ಹೆಚ್ಚು ಇರಬಹುದು. ವ್ಯಾಪಾರಿಗಳು ವಿವಾದಗಳಿಂದ ದೂರವಿರುವುದು ಸೂಕ್ತ.
ಮಕರ ರಾಶಿ: ಮಕರ ರಾಶಿಯ ಜನರು ಜಾಗರೂಕರಾಗಿರಿ. ನಿಮ್ಮ ಕೆಲಸವನ್ನು ಹಾಳು ಮಾಡಲು ಅನೇಕರು ಪ್ರಯತ್ನಿಸಬಹುದು. ವ್ಯಾಪಾರದಲ್ಲಿ ಲಾಭವಿದೆ. ಯುವಕರು ಆರೋಗ್ಯದ ಬಗ್ಗೆ ಕಾಳಜಿವಹಿಸಿ. ದೇಹ ಮತ್ತು ಮನಸ್ಸು ಆರೋಗ್ಯವಾಗಿರಲು ಯೋಗ ಮತ್ತು ಧ್ಯಾನ ಮಾಡಿ.
ಕುಂಭ - ಈ ರಾಶಿಯ ಜನರಿಗೆ ಉದ್ಯೋಗದ ಸ್ಥಳದಲ್ಲಿ ಗೊಂದಲಗಳು ಕಾಣಿಸುತ್ತವೆ. ಅದನ್ನು ಸಕಾರಾತ್ಮಕವಾಗಿ ಪರಿಗಣಿಸಿ ಮುನ್ನಡೆಯಿರಿ, ಲಾಭದ ಸಾಧ್ಯತೆ ಇದೆ. ಗುರು ರಾಘವೇಂದ್ರರ ಜಪ ಮಾಡಿದರೆ ಇಂದು ಧನಲಾಭವಾಗಲಿದೆ.
ಮೀನ ರಾಶಿ - ಮೀನ ರಾಶಿಯ ಜನರು ವಿಶ್ರಾಂತಿ ಪಡೆಯಬೇಕು, ನಿರಂತರ ಕೆಲಸದ ಒತ್ತಡವು ಪ್ರಸ್ತುತ ಸಮಯಕ್ಕೆ ಒಳ್ಳೆಯದಲ್ಲ. ವ್ಯಾಪಾರ ವರ್ಗದವರು ಧನಲಾಭವಾಗಲಿದೆ.
ಇದನ್ನೂ ಓದಿ: 13 ವರ್ಷಗಳ ಬಳಿಕ ಈ ರಾಶಿಗೆ ಒಲಿದ ಶ್ರೀಮಂತಿಕೆ ಭಾಗ್ಯ! ಸಂಪತ್ತಿನ ಮಳೆ-ಶುಕ್ರನಿಂದ ಹೆಚ್ಚಾಗುವುದು ಅದೃಷ್ಟ, ಸಂಪತ್ತು
(ಸೂಚನೆ: ಇಲ್ಲಿ ನೀಡಲಾದ ಮಾಹಿತಿಯು ಸಾಮಾನ್ಯ ನಂಬಿಕೆಗಳು ಮತ್ತು ಮಾಹಿತಿಯನ್ನು ಆಧರಿಸಿದೆ. ZEE NEWS ಅದನ್ನು ಖಚಿತಪಡಿಸುವುದಿಲ್ಲ.)
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ