Jasprit Bumrah Baby Photo: ಟೀಂ ಇಂಡಿಯಾದ ಯಾರ್ಕರ್ ಸ್ಪೆಷಲಿಸ್ಟ್ ಜಸ್ಪ್ರೀತ್ ಬುಮ್ರಾ ಮನೆಗೆ ವಿಶೇಷ ಅತಿಥಿಯೊಬ್ಬರು ಆಗಮಿಸಿದ್ದಾರೆ. ಬುಮ್ರಾ ಪತ್ನಿ ಸಂಜನಾ ಗಣೇಶನ್ ಸೋಮವಾರ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ಈ ಕಾರಣದಿಂದಲೇ ಬುಮ್ರಾ ಏಷ್ಯಾ ಕಪ್-2023 ಕ್ರಿಕೆಟ್ ಪಂದ್ಯಾವಳಿಯನ್ನು ಅರ್ಧಕ್ಕೆ ಬಿಟ್ಟು ಶ್ರೀಲಂಕಾದಿಂದ ಮುಂಬೈಗೆ ಮರಳಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ:  ಬಿಡದೇ ಕಾಡುತ್ತಿರುವ ಮಳೆರಾಯ: ಏಷ್ಯಾಕಪ್ ಸೂಪರ್ 4 ಪಂದ್ಯ ಕೊಲಂಬೋದಿಂದ ಈ ಮೈದಾನಕ್ಕೆ ಶಿಫ್ಟ್!


ಬುಮ್ರಾ ಸೋಮವಾರ ಇನ್‌ಸ್ಟಾಗ್ರಾಂನಲ್ಲಿ ತಮ್ಮ ಕಂದಮ್ಮನ ಫೋಟೋವನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗೆ “ನಮ್ಮ ಚಿಕ್ಕ ಕುಟುಂಬ ಈಗ ಬೆಳೆದಿದೆ. ನಾವು ಊಹಿಸಿದ್ದಕ್ಕಿಂತ ಹೆಚ್ಚಾಗಿ ಮನತುಂಬಿದೆ. ಇಂದು ಬೆಳಿಗ್ಗೆ ನಾವು ನಮ್ಮ ಮಗ ‘ಅಂಗದ್ ಜಸ್ಪ್ರೀತ್ ಬುಮ್ರಾ’ ಅವರನ್ನು ಜಗತ್ತಿಗೆ ಸ್ವಾಗತಿಸಿದ್ದೇವೆ. ನಮ್ಮ ಜೀವನದ ಈ ಹೊಸ ಅಧ್ಯಾಯವಿದು” ಎಂದು ಶೀರ್ಷಿಕೆ ಬರೆದಿದ್ದಾರೆ.


ಜಸ್ಪ್ರೀತ್ ಮತ್ತು ಸಂಜನಾ ಅವರು ತನ್ನ ಕಂದಮ್ಮನಿಗೆ ಅಂಗದ್ ಎಂದು ನಾಮಕರಣ ಮಾಡಿದ್ದಾರೆ. ಬುಮ್ರಾ ಇನ್‌ಸ್ಟಾಗ್ರಾಂನಲ್ಲಿ ಈ ಬಗ್ಗೆ ಮಾಹಿತಿ ನೀಡಿದ್ದಾರೆ.


ನವೆಂಬರ್ 4ರವರೆಗೆ ಈ ರಾಶಿಯವರಿಗೆ ಕುಬೇರ ಯೋಗ ! ಸಂಪತ್ತಿನ ಆಗಮನಕ್ಕೆ ತಡೆಯೇ ಇರುವುದಿಲ್ಲ


ಅಂದಹಾಗೆ, ಜಸ್ಪ್ರೀತ್ ಬುಮ್ರಾ ಐರ್ಲೆಂಡ್ ವಿರುದ್ಧದ T20 ಸರಣಿಯಲ್ಲಿ ಟೀಮ್ ಇಂಡಿಯಾದ ನಾಯಕತ್ವವನ್ನು ವಹಿಸಿಕೊಳ್ಳುವ ಮೂಲಕ ಸುಮಾರು 11 ತಿಂಗಳ ಬಳಿಕ ಫೀಲ್ಡ್‌’ಗೆ ಮರಳಿದ್ದರು. ಇದಾದ ಬಳಿಕ ಏಷ್ಯಾಕಪ್ ಆಡಲು ಶ್ರೀಲಂಕಾಕ್ಕೆ ತೆರಳಿದ್ದರು. ಆದರೆ ಕಳೆದ ದಿನ ಬುಮ್ರಾ ಕೊಲಂಬೊದಿಂದ ಮುಂಬೈಗೆ ವಿಮಾನದಲ್ಲಿ ಪ್ರಯಾಣ ಬೆಳೆಸಿದ್ದರು. ಇದಕ್ಕೆ ಅವರು ವೈಯಕ್ತಿಕ ಕಾರಣಗಳೆಂದು ಉಲ್ಲೇಖಿಸಿದ್ದರು. ಇದೀಗ ಅಭಿಮಾನಿಗಳಿಗೆ ಕಾರಣ ಸ್ಪಷ್ಟವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ