ನವದೆಹಲಿ: ಭಾರತೀಯ ಕ್ರಿಕೆಟ್ ತಂಡದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಇದುವರೆಗೆ ಪ್ರಭಾವಶಾಲಿ ವೃತ್ತಿಜೀವನ ಹೊಂದಿದ್ದಾರೆ. ಟೀಂ ಇಂಡಿಯಾ ಪರ ಹಲವು ಸಂದರ್ಭಗಳಲ್ಲಿ ಅದ್ಭುತ ಪ್ರದರ್ಶನ ನೀಡಿದ್ದಾರೆ. ಬುಮ್ರಾ 2016ರಲ್ಲಿ ಏಕದಿನ ಕ್ರಿಕೆಟ್‌ಗೆ ಪಾದಾರ್ಪಣೆ ಮಾಡಿದ್ದರು. ಇದಾದ ನಂತರ ಹಲವು ಪಂದ್ಯಗಳಲ್ಲಿ ಸ್ಮರಣೀಯ ಪ್ರದರ್ಶನ ನೀಡುವ ಮೂಲಕ ಗಮನ ಸೆಳೆದರು. ತಮ್ಮ ವೃತ್ತಿಜೀವನದ ಆರಂಭದಲ್ಲಿ ಎದುರಾಳಿ ತಂಡದ ಬ್ಯಾಟ್ಸ್‍ಮನ್‍ಗಳು ಸಿಕ್ಸರ್ ಮತ್ತು ಬೌಂಡರಿ ಬಾರಿಸಿದಾಗ ನನಗೆ ತುಂಬಾ ಕೋಪ ಬರುತ್ತಿತ್ತು ಎಂದು ಬುಮ್ರಾ ಸಂದರ್ಶನವೊಂದರಲ್ಲಿ ಹೇಳಿದ್ದರು. ಆದರೆ ಈಗ ಅವರು ಕೋಪವನ್ನು ನಿಯಂತ್ರಿಸಿದ್ದಾರಂತೆ. ಇದಕ್ಕೆ ಬುಮ್ರಾ ಕಾರಣವನ್ನೂ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಬುಮ್ರಾ 2020ರ ಸಂದರ್ಶನದ ವೇಳೆ ತಮ್ಮ ವೃತ್ತಿ ಜೀವನದ ಬಗ್ಗೆ ಮುಕ್ತವಾಗಿ ಮಾತನಾಡಿದ್ದರು. ಈ ಸಂದರ್ಭದಲ್ಲಿ ಮಾತನಾಡಿದ್ದ ಅವರು, ಕೋಪವನ್ನು ನಿಯಂತ್ರಿಸುವ ಕುರಿತು ಹೇಳಿಕೊಂಡಿದ್ದರು. ‘ಆಗ ನನಗೆ ತುಂಬಾ ಕೋಪ ಬರುತ್ತಿತ್ತು. ಆದರೆ ಈಗ ನನಗೆ ಕೋಪವಿಲ್ಲ. ಮೊದ ಮೊದಲು ನಾನು ತುಂಬಾ ಕೋಪಿಸಿಕೊಳ್ಳುತ್ತಿದ್ದೆ. ನನ್ನ ಬೌಲಿಂಗ್‍ನಲ್ಲಿ ಎದುರಾಳಿ ತಂಡದ ಬ್ಯಾಟ್ಸ್‍ಮನ್‍ಗಳು ಬೌಂಡರಿ ಮತ್ತು ಸಿಕ್ಸರ್ ಭಾರಿಸಿದಾಗ ನನಗೆ ಈ ರೀತಿಯ ಕೋಪ ಬರುತ್ತಿತ್ತು. ಆಗ ಬ್ಯಾಟ್ಸ್‌ಮನ್‌ಗಳನ್ನು ಹೆದರಿಸಲು ನಾನು ಬೌನ್ಸರ್‌ಗಳನ್ನು ಎಸೆಯುತ್ತಿದ್ದೆ. ನಾನು ಕೂಡ ನಿಂದನೆ ಮಾಡುತ್ತಿದ್ದೆ. ಆದರೆ ವೃತ್ತಿಜೀವನ ಪ್ರಾರಂಭವಾದಾಗ ಇವೆಲ್ಲವೂ ಆಟದಲ್ಲಿ ಸಹಾಯ ಮಾಡುವುದಿಲ್ಲವೆಂಬುದು ನನಗೆ ಕ್ರಮೇಣ ಅರ್ಥವಾಯಿತು’ ಅಂತಾ ಬುಮ್ರಾ ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ತಂತ್ರದ ಬಗ್ಗೆ ಕೊಹ್ಲಿ ಎನ್ ಹೇಳಿದ್ರು ಗೊತ್ತಾ?


ಆರಂಭದಲ್ಲಿ ವಿಕೆಟ್ ಕಬಳಿಸಲು ಒಂದೇ ಒಂದು ಮಾರ್ಗ ನನಗೆ ಗೊತ್ತಿತ್ತು ಅಂತಾ ಬುಮ್ರಾ ಹೇಳಿದ್ದರು. ಯಾರ್ಕರ್‌ ಬಾಲ್‌ನಿಂದ ಮಾತ್ರ ವಿಕೆಟ್‌ ತೆಗೆಯಲು ಸಾಧ್ಯವೆಂದು ಅವರು ಭಾವಿಸಿದ್ದರಂತೆ.  ‘ಈಗ ನನ್ನಲ್ಲಿ ಸಾಕಷ್ಟು ಬದಲಾವಣೆಯಾಗಿದೆ. ಸೀರಿಯಸ್ ಕ್ರಿಕೆಟಿಗೆ ಬಂದಾಗ ವಿಕೆಟ್ ಕೀಳಲು ಹಲವು ಮಾರ್ಗಗಳಿವೆ ಅಂತಾ ಆಗ ನನಗೆ ತಿಳಿಯಿತು. ಔಟ್ ಸ್ವಿಂಗರ್, ಸ್ವಿಂಗರ್ ಮತ್ತು ಲೆಂಗ್ತ್ ಬಾಲ್‌ನಲ್ಲಿಯೂ ವಿಕೆಟ್‌ಗಳನ್ನು ತೆಗೆಯಬಹುದು’ ಅಂತಾ ನಾನು ತಿಳಿದುಕೊಂಡೆ ಎಂದು ಬುಮ್ರಾ ಸಂದರ್ಶನದಲ್ಲಿ ತಿಳಿಸಿದ್ದರು.


ಬುಮ್ರಾ ಇದುವರೆಗೆ 59 ಟಿ-20 ಅಂತಾರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದು, ಈ ಅವಧಿಯಲ್ಲಿ ಅವರು 70 ವಿಕೆಟ್ ಪಡೆದಿದ್ದಾರೆ. 72 ಏಕದಿನ ಪಂದ್ಯಗಳಲ್ಲಿ 121 ವಿಕೆಟ್ ಪಡೆದಿದ್ದಾರೆ. ಬುಮ್ರಾ 30 ಟೆಸ್ಟ್ ಪಂದ್ಯಗಳನ್ನೂ ಆಡಿದ್ದು, 128 ವಿಕೆಟ್‍ಗಳನ್ನು ಪಡೆದಿದ್ದಾರೆ.


ಇದನ್ನೂ ಓದಿ: IND vs AUS: ಆಸ್ಟ್ರೇಲಿಯವನ್ನು ಮಣಿಸಿ ಪಾಕಿಸ್ತಾನವನ್ನು ಹಿಂದಿಕ್ಕಿ ವಿಶ್ವದಾಖಲೆ ಬರೆದ ಭಾರತ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.