ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ತಂತ್ರದ ಬಗ್ಗೆ ಕೊಹ್ಲಿ ಎನ್ ಹೇಳಿದ್ರು ಗೊತ್ತಾ?

 ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರು ಭಾನುವಾರ ಹೈದರಾಬಾದ್‌ನಲ್ಲಿ ನಡೆದ T20I ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ 187 ರನ್‌ಗಳ ಗುರಿಯನ್ನು ತಲುಪುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಈ ಇಬ್ಬರು ಆಟಗಾರರ ಜೊತೆಯಾಟದಿಂದಲೇ 104 ರನ್‌ ಗಳು ಬಂದವು.

Last Updated : Sep 26, 2022, 04:53 AM IST
  • ಅವರು ಏನು ಮಾಡಬೇಕೆಂಬುದರ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇದೆ.
  • ಅವರು ಯಾವುದೇ ರೀತಿಯ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡುವ ಕಲೆಯನ್ನು ಹೊಂದಿದ್ದಾ
ಸೂರ್ಯಕುಮಾರ್ ಯಾದವ್ ಬ್ಯಾಟಿಂಗ್ ತಂತ್ರದ ಬಗ್ಗೆ ಕೊಹ್ಲಿ ಎನ್ ಹೇಳಿದ್ರು ಗೊತ್ತಾ?  title=

ಹೈದರಾಬಾದ್ : ವಿರಾಟ್ ಕೊಹ್ಲಿ ಮತ್ತು ಸೂರ್ಯಕುಮಾರ್ ಯಾದವ್ ಅವರು ಭಾನುವಾರ ಹೈದರಾಬಾದ್‌ನಲ್ಲಿ ನಡೆದ T20I ಸರಣಿಯನ್ನು ಆಸ್ಟ್ರೇಲಿಯಾ ವಿರುದ್ಧ 187 ರನ್‌ಗಳ ಗುರಿಯನ್ನು ತಲುಪುವಲ್ಲಿ ಪ್ರಮುಖ ಪಾತ್ರವನ್ನು ವಹಿಸಿದರು. ಈ ಇಬ್ಬರು ಆಟಗಾರರ ಜೊತೆಯಾಟದಿಂದಲೇ 104 ರನ್‌ ಗಳು ಬಂದವು.

ಸೂರ್ಯಕುಮಾರ್ 36 ಎಸೆತಗಳಲ್ಲಿ  ರಲ್ಲಿ 69 ರನ್ ಗಳಿಸಿದರೆ ಮತ್ತು ವಿರಾಟ್ ಕೊಹ್ಲಿ  48 ಎಸೆತಗಳಲ್ಲಿ 63 ರನ್ ಗಳಿಸಿ ಭಾರತ ತಂಡದ ಗೆಲುವನ್ನು ಸುಲಭಗೊಳಿಸಿದರು.

ಇದನ್ನೂ ಓದಿ:  ನೈಸರ್ಗಿಕವಾಗಿ ಸಿಗುವ ಈ ವಸ್ತು ನಿಮ್ಮ ಮುಖದ ಅಂದವನ್ನು ವೃದ್ಧಿಸುತ್ತೆ 

ಇದೆ ವೇಳೆ ಪಂದ್ಯದ ನಂತರ ಮಾತನಾಡಿದ ಕೊಹ್ಲಿ, ಸೂರ್ಯಕುಮಾರ್ ಅವರನ್ನು ಶ್ಲಾಘಿಸಿದರು ಮತ್ತು ಅವರು ಯಾವುದೇ ಪರಿಸ್ಥಿತಿಯಲ್ಲಿ ಆಟವನ್ನು ಆಡಬಲ್ಲವರು ಕಳೆದ ಆರು ತಿಂಗಳಲ್ಲಿ ಅದು ಅದ್ಬುತವಾಗಿದೆ ಎಂದು ಅವರು ಹೇಳಿದರು.

ಇನ್ನೂ ಮುಂದುವರೆದು "ಅವರು ಏನು ಮಾಡಬೇಕೆಂಬುದರ ಬಗ್ಗೆ ಸಂಪೂರ್ಣ ಸ್ಪಷ್ಟತೆ ಇದೆ. ಅವರು ಯಾವುದೇ ರೀತಿಯ ಪರಿಸ್ಥಿತಿಯಲ್ಲಿ ಬ್ಯಾಟಿಂಗ್ ಮಾಡುವ ಕಲೆಯನ್ನು ಹೊಂದಿದ್ದಾರೆ" ಎಂದು ಹೈದರಾಬಾದ್‌ನಲ್ಲಿ ನಡೆದ ಪಂದ್ಯದ ನಂತರ ಕೊಹ್ಲಿ ಹೇಳಿದರು.

ಇದನ್ನೂ ಓದಿ:  Diabetes control tips: ಈ ನೆಲ್ಲಿಕಾಯಿ ಎದುರು ಡಯಾಬಿಟಿಸ್‌ ಆಟ ನಡೆಯಲ್ಲ

"ಅವರು ಅದನ್ನು ಈಗಾಗಲೇ ತೋರಿಸಿದ್ದಾರೆ. ಅವರು ಇಂಗ್ಲೆಂಡ್‌ನಲ್ಲಿ ಶತಕ ಗಳಿಸಿದ್ದಾರೆ. ಅವರು ಏಷ್ಯಾಕಪ್‌ನಲ್ಲೂ ಅದ್ಬುತವಾಗಿ ಬ್ಯಾಟಿಂಗ್ ಮಾಡಿದ್ದಾರೆ. ನಾನು ಅವರನ್ನು ನೋಡಿದಂತೆ ಇಲ್ಲಿಯೂ ಅವರು ಚೆಂಡನ್ನು ಹೊಡೆಯುತ್ತಿದ್ದರು" ಎಂದು ಕೊಹ್ಲಿ ಹೇಳಿದರು.

"ಕಳೆದ ಆರು ತಿಂಗಳಿನಿಂದ ಅವರು ಅತ್ಯುತ್ತಮವಾಗಿದ್ದಾರೆ. ಇದು ಕೇವಲ ಹೊಡೆತಗಳ ಸರಣಿಯಾಗಿದೆ, ಮತ್ತು ಸರಿಯಾದ ಸಮಯದಲ್ಲಿ ಆ ಹೊಡೆತಗಳನ್ನು ಆಡುವುದು ತನ್ನ ಆಟವನ್ನು ಒಳಗೆ ತಿಳಿದಿರುವ ವ್ಯಕ್ತಿಗೆ ಮಾತ್ರ ಸಾಧ್ಯ " ಎಂದು ಅವರು ಶ್ಲಾಘಿಸಿದರು.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

 

Trending News