T20 World Cup 2022 : ಟಿ20 ವಿಶ್ವಕಪ್ ಟೀಂ ಇಂಡಿಯಾದಿಂದ ಜಸ್ಪ್ರೀತ್ ಬುಮ್ರಾ ಔಟ್!
ಬುಮ್ರಾ ಅವರು ಗಂಭೀರ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ಅವರು ತಿಂಗಳವರೆಗೆ ತಂಡದಿಂದ ಹೊರಗುಳಿಯಬೇಕಾಗಬಹುದು ಎಂದು ತಿಳಿಸಿದ್ದಾರೆ.
Jasprit Bumrah Ruled Out : ಕ್ರಿಕೆಟ್ ಅಭಿಮಾನಿಗಳಿಗೆ ಬಿಗ್ ಶಾಕಿಂಗ್ ನ್ಯೂಸ್ ಹೊರಬಿದ್ದಿದೆ. ಟೀಂ ಇಂಡಿಯಾದ ಸ್ಟಾರ್ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಬಿದ್ದಿದ್ದಾರೆ. ಬೆನ್ನುನೋವಿನಿಂದಾಗಿ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ ಟಿ20 ವಿಶ್ವಕಪ್‌ನಿಂದ ಹೊರಗುಳಿಯಲಿದ್ದಾರೆ. ಅವರು ಇಡೀ ಟೂರ್ನಿಯಿಂದ ಹೊರಗುಳಿದಿದ್ದಾರೆ. ಅವರು ಚೇತರಿಸಿಕೊಳ್ಳಲು 4 ರಿಂದ 6 ತಿಂಗಳು ಬೇಕಾಗುತ್ತದೆ ಎಂದು ಭಾರತೀಯ ಕ್ರಿಕೆಟ್ ಮಂಡಳಿಯ (ಬಿಸಿಸಿಐ) ಅಧಿಕಾರಿಯೊಬ್ಬರು ಪಿಟಿಐಗೆ ತಿಳಿಸಿದ್ದಾರೆ, ಬುಮ್ರಾ ಅವರು ಗಂಭೀರ ಬೆನ್ನುನೋವಿನ ಸಮಸ್ಯೆಯಿಂದ ಬಳಲುತ್ತಿದ್ದಾರೆ ಮತ್ತು ಅವರು ತಿಂಗಳವರೆಗೆ ತಂಡದಿಂದ ಹೊರಗುಳಿಯಬೇಕಾಗಬಹುದು ಎಂದು ತಿಳಿಸಿದ್ದಾರೆ.
ಟಿ20 ವಿಶ್ವಕಪ್‌ನಿಂದ ಜಸ್ಪ್ರೀತ್ ಬುಮ್ರಾ ಔಟ್
ಈ ಬಗ್ಗೆ ಪಿಟಿಐಗೆ ತಿಳಿಸಿದ ಬಿಸಿಸಿಐ ಅಧಿಕಾರಿ, “ಬುಮ್ರಾ ಟಿ 20 ವಿಶ್ವಕಪ್‌ನಲ್ಲಿ ಆಡುತ್ತಿಲ್ಲ ಎಂಬುದು ಖಚಿತವಾಗಿದೆ. ಅವರು ತೀವ್ರ ಬೆನ್ನು ನೋವಿನ ಕಾರಣ ಹೊಂದಿದ್ದಾರೆ. ಹೀಗಾಗಿ ಅವರು, ಆರು ತಿಂಗಳ ಕಾಲ ಹೊರಗೆ ಇರಬೇಕಾಗಿದೆ. ಬುಮ್ರಾ ಆಸ್ಟ್ರೇಲಿಯಾ ವಿರುದ್ಧ ಎರಡು ಟಿ20 ಪಂದ್ಯಗಳನ್ನು ಆಡಿದ್ದಾರೆ, ಆದರೆ ಅವರು ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯ ಮೊದಲ ಪಂದ್ಯವನ್ನು ಆಡಲು ತಿರುವನಂತಪುರಕ್ಕೆ ಹೋಗಿರಲಿಲ್ಲ. ರವೀಂದ್ರ ಜಡೇಜಾ ನಂತರ ಟಿ20 ವಿಶ್ವಕಪ್‌ನಿಂದ ಹೊರಗುಳಿದ ಎರಡನೇ ಭಾರತೀಯ ಆಟಗಾರ ಬುಮ್ರಾ. ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಜಡೇಜಾ ಚೇತರಿಸಿಕೊಳ್ಳುತ್ತಿದ್ದಾರೆ.
ದೇವರನಾಡಲ್ಲಿ ಟೀಂ ಇಂಡಿಯಾ ಹೊಸ ದಾಖಲೆ:15 ಬಾಲ್, 5 ವಿಕೆಟ್-ಹರಿಣಗಳ ಬೆಂಡೆತ್ತಿದ ಭಾರತದ ಆಟಗಾರರು
ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಭಾರತದ ಮೊದಲ ಪಂದ್ಯ
ಅಕ್ಟೋಬರ್ 23 ರಂದು ಮೆಲ್ಬೋರ್ನ್ ಕ್ರಿಕೆಟ್ ಮೈದಾನದಲ್ಲಿ ಭಾರತ ಮತ್ತು ಪಾಕಿಸ್ತಾನ ಟಿ20 ವಿಶ್ವಕಪ್‌ನಲ್ಲಿ ಮುಖಾಮುಖಿಯಾಗಲಿವೆ. ಟಿ20 ವಿಶ್ವಕಪ್‌ನಲ್ಲಿ ಭಾರತ ಮತ್ತು ಪಾಕಿಸ್ತಾನವನ್ನು ಒಂದೇ ಗುಂಪಿನಲ್ಲಿ ಇರಿಸಲಾಗಿದೆ. ಕಳೆದ ಬಾರಿ ಯುಎಇಯಲ್ಲಿ ನಡೆದ ಟಿ 20 ವಿಶ್ವಕಪ್ 2021 ರಲ್ಲಿ, ಪಾಕಿಸ್ತಾನವು ಈ ಜಾಗತಿಕ ಪಂದ್ಯಾವಳಿಯಲ್ಲಿ ಮೊದಲ ಬಾರಿಗೆ ಭಾರತವನ್ನು ಸೋಲಿಸಿತು ಮತ್ತು ಟೀಮ್ ಇಂಡಿಯಾ ಸೆಮಿಫೈನಲ್‌ಗೆ ಮೊದಲು ಪಂದ್ಯಾವಳಿಯಿಂದ ಹೊರಗುಳಿಯಬೇಕಾಯಿತು. ಹೀಗಾಗಿ, ಭಾರತ ಮತ್ತೊಮ್ಮೆ ಪಾಕಿಸ್ತಾನದ ಮೇಲೆ ಸೇಡು ತೀರಿಸಿಕೊಳ್ಳಲಿದೆ.
2022ರ ಟಿ20 ವಿಶ್ವಕಪ್‌ನಲ್ಲಿ ಭಾರತದ ವಿರುದ್ಧ
ಭಾರತ vs ಪಾಕಿಸ್ತಾನ - 1 ನೇ ಪಂದ್ಯ - 23 ಅಕ್ಟೋಬರ್ (ಮೆಲ್ಬೋರ್ನ್)
ಭಾರತ vs ಗುಂಪು A ರನ್ನರ್ ಅಪ್ - 2 ನೇ ಪಂದ್ಯ - 27 ಅಕ್ಟೋಬರ್ (ಸಿಡ್ನಿ)
ಭಾರತ vs ದಕ್ಷಿಣ ಆಫ್ರಿಕಾ - 3 ನೇ ಪಂದ್ಯ - 30 ಅಕ್ಟೋಬರ್ (ಪರ್ತ್)
ಭಾರತ vs ಬಾಂಗ್ಲಾದೇಶ - 4 ನೇ ಪಂದ್ಯ - ನವೆಂಬರ್ 2 (ಅಡಿಲೇಡ್)
ಭಾರತ vs ಗುಂಪು ಬಿ ವಿಜೇತ - ಪಂದ್ಯ 5 - 6 ನವೆಂಬರ್ (ಮೆಲ್ಬೋರ್ನ್)
ಇದನ್ನೂ ಓದಿ : IND vs SA T20I: ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾಗೆ ಐತಿಹಾಸಿಕ ಗೆಲುವು: ದ.ಆಫ್ರಿಕಾಗೆ ಹೀನಾಯ ಸೋಲು
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.