Sanjana Ganeshan Savage Reply: ಖ್ಯಾತ ಕ್ರಿಕೆಟಿಗ ಜಸ್ಪ್ರೀತ್ ಬುಮ್ರಾ ಪತ್ನಿ ಸಾಮಾಜಿಕ ಜಾಲತಾಣದ ಮೂಲಕ ಬಾಡಿ ಶೇಮಿಂಗ್ ಮಾಡಿದ ವ್ಯಕ್ತಿಗೆ ಭರ್ಜರಿ ಕ್ಲಾಸ್ ತೆಗೆದುಕೊಂಡಿದ್ದಾರೆ. ಕ್ರೀಡಾ ನಿರೂಪಕಿಯಾಗಿರುವ ಜಸ್ಪ್ರೀತ್ ಬುಮ್ರಾ ಪತ್ನಿ ಸಂಜನಾ ಗಣೇಶನ್ ಫೋಟೋಗೆ ನೆಟ್ಟಿಗನೊಬ್ಬ ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದು, ಇದರಿಂದ ಕೋಪಗೊಂಡಿದ್ದ ಸಂಜನಾ ಕಾಮೆಂಟ್ ಮೂಲಕವೇ ಉತ್ತರ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: 2 ಬಾರಿ ED ಸಮನ್ಸ್ ಜಾರಿಯಾದರೂ ವಿಚಾರಣೆಗೆ ಹಾಜರಾಗುತ್ತಿಲ್ಲ ಫಾರೂಕ್


ಜಸ್ಪ್ರೀತ್ ಬುಮ್ರಾ ಮತ್ತು ಅವರ ಪತ್ನಿ ಸಂಜನಾ ಗಣೇಶನ್ ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ. ಈ ಜೋಡಿ ಆಗಾಗ್ಗೆ ತಮ್ಮ ಫೋಟೋಗಳು ಮತ್ತು ವೀಡಿಯೊಗಳನ್ನು ಹಂಚಿಕೊಳ್ಳುತ್ತಾರೆ. ಅಂತೆಯೇ ಸಂಜನಾ ಗಣೇಶನ್ ಇತ್ತೀಚೆಗೆ ಜಸ್ಪ್ರೀತ್ ಬುಮ್ರಾ ಅವರೊಂದಿಗೆ ಪ್ರೇಮಿಗಳ ದಿನಕ್ಕೆ ಸಂಬಂಧಿಸಿದ ಪೋಸ್ಟ್ ಅನ್ನು Instagram ನಲ್ಲಿ ಹಂಚಿಕೊಂಡಿದ್ದರು. ಈ ಫೋಟೋಗೆ ವ್ಯಕ್ತಿಯೊಬ್ಬ, ಆಕ್ಷೇಪಾರ್ಹ ಕಾಮೆಂಟ್ ಮಾಡಿದ್ದಾನೆ.


ಸಂಜನಾ ಗಣೇಶನ್ ಬಗ್ಗೆ ಪ್ರತಿಕ್ರಿಯಿಸಿದ ಆ ವ್ಯಕ್ತಿ, 'ಅತ್ತಿಗೆ ದಪ್ಪ ಕಾಣುತ್ತಿದ್ದಾರೆ' ಎಂದು ಬರೆದಿದ್ದಾನೆ. ಈ ಬಗ್ಗೆ ಕೋಪಗೊಂಡ ಸಂಜನಾ ಗಣೇಶನ್, “ನಿಮಗೆ ಶಾಲೆಯ ವಿಜ್ಞಾನ ಪಠ್ಯಪುಸ್ತಕವೂ ನೆನಪಿಲ್ಲ ಅನಿಸುತ್ತೆ. ಹೆಣ್ಣಿನ ದೇಹದ ಬಗ್ಗೆ ಕಾಮೆಂಟ್ ಮಾಡುತ್ತಿದ್ದೀಯಾ. ನಡಿ ಇಲ್ಲಿಂದ” ಎಂದು ಹೇಳಿದ್ದಾರೆ.


ಇದನ್ನೂ ಓದಿ: 6,0,4,6,6,6... ಒಂದೇ ಓವರ್’ನಲ್ಲಿ 28 ರನ್ ಚಚ್ಚಿದ ದಾಂಡಿಗ


ಸಂಜನಾ ಗಣೇಶನ್ ಕ್ರೀಡಾ ನಿರೂಪಕಿ. ವಿಶ್ವಕಪ್‌’ನಿಂದ ಹಿಡಿದು ಐಪಿಎಲ್‌ವರೆಗೆ ಅನೇಕ ದೊಡ್ಡ ಟೂರ್ನಿಗಳನ್ನು ಆಯೋಜಿಸುತ್ತಿದ್ದಾರೆ. ಅಂದಹಾಗೆ ಮಾರ್ಚ್ 2021 ರಲ್ಲಿ ಸಂಜನಾ ಗಣೇಶನ್ ಅವರನ್ನು ಜಸ್ಪ್ರೀತ್ ಬುಮ್ರಾ ವಿವಾಹವಾದರು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ