6,0,4,6,6,6... ಒಂದೇ ಓವರ್’ನಲ್ಲಿ 28 ರನ್ ಚಚ್ಚಿದ ದಾಂಡಿಗ… ಬ್ಯಾಟ್ಸ್’ಮನ್ ಅಬ್ಬರಕ್ಕೆ ನಡುಗಿತು ಎದುರಾಳಿ ತಂಡ

Andre Russell vs Australia 3rd T20: 35 ವರ್ಷದ ಆಂಡ್ರೆ ರಸೆಲ್ ಇನಿಂಗ್ಸ್‌’ನ 19ನೇ ಓವರ್‌’ನಲ್ಲಿ ರನ್ ಮಳೆ ಸುರಿಸಿದ್ದಾರೆ. 4 ಸಿಕ್ಸರ್‌ ಸಹಾಯದಿಂದ 28 ​​ರನ್ ಗಳಿಸಿದ ಝಂಪಾ, ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ್ದಾರೆ.

Written by - Bhavishya Shetty | Last Updated : Feb 13, 2024, 05:09 PM IST
    • ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ಟಿ20 ಸರಣಿಯ ಮೂರನೇ ಪಂದ್ಯ
    • ಬ್ಯಾಟಿಂಗ್ ವೇಳೆ ಸಂಚಲನ ಮೂಡಿಸಿದ ವೆಸ್ಟ್ ಇಂಡೀಸ್ ಆಲ್’ರೌಂಡರ್
    • 35 ವರ್ಷದ ಆಂಡ್ರೆ ರಸೆಲ್ ಇನಿಂಗ್ಸ್‌’ನ 19ನೇ ಓವರ್‌’ನಲ್ಲಿ ರನ್ ಮಳೆ ಸುರಿಸಿದ್ದಾರೆ
6,0,4,6,6,6... ಒಂದೇ ಓವರ್’ನಲ್ಲಿ 28 ರನ್ ಚಚ್ಚಿದ ದಾಂಡಿಗ… ಬ್ಯಾಟ್ಸ್’ಮನ್ ಅಬ್ಬರಕ್ಕೆ ನಡುಗಿತು ಎದುರಾಳಿ ತಂಡ title=
Andre Russell

Andre Russell vs Australia 3rd T20: ಟಿ20 ಸರಣಿಯ ಮೂರನೇ ಪಂದ್ಯ ವೆಸ್ಟ್ ಇಂಡೀಸ್ ಮತ್ತು ಆಸ್ಟ್ರೇಲಿಯಾ ನಡುವೆ ನಡೆಯುತ್ತಿದೆ. ಮೊದಲೆರಡು ಪಂದ್ಯಗಳನ್ನು ಗೆಲ್ಲುವ ಮೂಲಕ ಆತಿಥೇಯ ಆಸ್ಟ್ರೇಲಿಯಾ ಸರಣಿಯಲ್ಲಿ 2-0 ಮುನ್ನಡೆ ಸಾಧಿಸಿದೆ. ಈ ಪಂದ್ಯದಲ್ಲಿ ಬಲಿಷ್ಠ ವೆಸ್ಟ್ ಇಂಡೀಸ್ ಆಲ್’ರೌಂಡರ್ ಬ್ಯಾಟಿಂಗ್ ವೇಳೆ ಸಂಚಲನ ಮೂಡಿಸಿದ್ದು, ಕೇವಲ 29 ಎಸೆತಗಳಲ್ಲಿ 7 ಸಿಕ್ಸರ್ ಮತ್ತು 4 ಬೌಂಡರಿಗಳ ನೆರವಿನಿಂದ 71 ರನ್ ಗಳಿಸಿದ್ದಾರೆ. ಇದರ ಆಧಾರದ ಮೇಲೆ ವೆಸ್ಟ್ ಇಂಡೀಸ್ ನಿಗದಿತ 20 ಓವರ್‌’ಗಳಲ್ಲಿ 6 ವಿಕೆಟ್ ನಷ್ಟಕ್ಕೆ 220 ರನ್ ಗಳಿಸಿತು.

ಇದನ್ನೂ ಓದಿ: ಅಂದು ವಿರಾಟ್ ಮೆನೇಜರ್… ಇಂದು ಈ ಕ್ರಿಕೆಟಿಗನ ಮುದ್ದಿನ ಮಡದಿ: 5 ಮಿಲಿಯನ್’ಗೂ ಅಧಿಕ ಸಂಪತ್ತಿನ ಒಡತಿ ಈ ಬಾಲಕಿ ಯಾರೆಂದು ಗೆಸ್ ಮಾಡಿ

35 ವರ್ಷದ ಆಂಡ್ರೆ ರಸೆಲ್ ಇನಿಂಗ್ಸ್‌’ನ 19ನೇ ಓವರ್‌’ನಲ್ಲಿ ರನ್ ಮಳೆ ಸುರಿಸಿದ್ದಾರೆ. 4 ಸಿಕ್ಸರ್‌ ಸಹಾಯದಿಂದ 28 ​​ರನ್ ಗಳಿಸಿದ ಝಂಪಾ, ಮೊದಲ ಎಸೆತದಲ್ಲೇ ಸಿಕ್ಸರ್ ಬಾರಿಸಿದ್ದಾರೆ.

ರಸೆಲ್ ಅವರ ಬಿರುಸಿನ ಇನ್ನಿಂಗ್ಸ್‌’ನ ಹೊರತಾಗಿ, ಶೆರ್ಫೇನ್ ರುದರ್‌ಫೋರ್ಡ್ ಕೂಡ ಅದ್ಭುತ ಇನ್ನಿಂಗ್ಸ್ ಆಡಿದರು. ಅವರು 40 ಎಸೆತಗಳಲ್ಲಿ 67 ರನ್‌ಗಳ ಅಜೇಯ ಇನ್ನಿಂಗ್ಸ್ ಆಡಿದರು. ಈ ಇನ್ನಿಂಗ್ಸ್‌’ನಲ್ಲಿ 5 ಬೌಂಡರಿಗಳು ಮತ್ತು 5 ಸಿಕ್ಸರ್‌ಗಳು ಸೇರಿದ್ದವು.

ಇದನ್ನೂ ಓದಿ: ಅಕ್ರಮ ಹಣ ವರ್ಗಾವಣೆ ಪ್ರಕರಣ: 2 ಬಾರಿ ED ಸಮನ್ಸ್ ಜಾರಿಯಾದರೂ ವಿಚಾರಣೆಗೆ ಹಾಜರಾಗುತ್ತಿಲ್ಲ ಫಾರೂಕ್

ಈ ಪಂದ್ಯದಲ್ಲಿ ಆಸ್ಟ್ರೇಲಿಯಾದ ಬೌಲರ್‌’ಗಳು ಹೀನಾಯವಾಗಿ ಸೋತಿದ್ದು ಸುಳ್ಳಲ್ಲ. ಅದರಲ್ಲೂ ಲೆಗ್ ಸ್ಪಿನ್ನರ್ ಆಡಮ್ ಝಂಪಾ ಅತ್ಯಂತ ದುಬಾರಿ ಎನಿಸಿದರು. ತಮ್ಮ 4 ಓವರ್‌’ಗಳನ್ನು ಪೂರ್ಣಗೊಳಿಸಿದ ಅವರು, 65 ರನ್ ನೀಡಿ ಕೇವಲ 1 ವಿಕೆಟ್ ಪಡೆದರು.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News