Team India Cricket News: ಈ ವರ್ಷ ಭಾರತದಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್‌ ಗೆ ವೇಗದ ಬೌಲರ್ ಜೋಫ್ರಾ ಆರ್ಚರ್ ಫಿಟ್ ಆಗುವ ಹಾದಿಯಲ್ಲಿದ್ದಾರೆ ಎಂದು ಇಂಗ್ಲೆಂಡ್ ಮಾಜಿ ಸಹಾಯಕ ಕೋಚ್ ಪಾಲ್ ಫಾರ್ಬ್ರೇಸ್ ಬಹಿರಂಗಪಡಿಸಿದ್ದಾರೆ. ಇಂಗ್ಲೆಂಡ್ ವೇಗದ ಬೌಲರ್ ಜೋಫ್ರಾ ಆರ್ಚರ್ ಬಹಳ ದಿನಗಳಿಂದ ಗಾಯದಿಂದ ಬಳಲುತ್ತಿದ್ದಾರೆ. ಆಂಗ್ಲರ ತಂಡ ಅವರನ್ನು ನಿರಂತರವಾಗಿ ಮಿಸ್ ಮಾಡಿಕೊಂಡಿದೆ ಎಂದೇ ಹೇಳಬಹುದು. ಆದರೆ ಇದೀಗ ಅವರು ಶೀಘ್ರದಲ್ಲೇ ತಂಡಕ್ಕೆ ಮರಳಲಿದ್ದಾರೆ ಎಂಬ ಸುದ್ದಿ ಬರುತ್ತಿದೆ. ಈ ವರ್ಷ ODI ವಿಶ್ವಕಪ್ ಭಾರತದಲ್ಲಿ ನಡೆಯಲಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: 10 ವರ್ಷಗಳ ಬಳಿಕ Team India ಏಕದಿನದಲ್ಲಿ ಅವಕಾಶ ಪಡೆದ ಕೊಹ್ಲಿ ಗೆಳೆಯ! ಇನ್ಮುಂದೆ ಕಾರುಬಾರು ಶುರು…


2019 ರಲ್ಲಿ ಇಂಗ್ಲೆಂಡ್ ತಮ್ಮ ಮೊದಲ ವಿಶ್ವಕಪ್ ಪ್ರಶಸ್ತಿಯನ್ನು ಗೆಲ್ಲುವಲ್ಲಿ ಜೋಫ್ರಾ ಆರ್ಚರ್ ಪ್ರಮುಖ ಪಾತ್ರ ವಹಿಸಿದ್ದರು, ಬಲಗೈ ವೇಗದ ಬೌಲರ್ 20 ವಿಕೆಟ್‌ಗಳೊಂದಿಗೆ ಪಂದ್ಯಾವಳಿಯಲ್ಲಿ ತಂಡದ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್‌ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಅಷ್ಟೇ ಅಲ್ಲದೆ, ಆಸ್ಟ್ರೇಲಿಯಾ ವಿರುದ್ಧದ ಟೆಸ್ಟ್ ಸರಣಿಯಲ್ಲೂ ಉತ್ತಮ ರನ್ ಗಳಿಸಿದ್ದರು, ಆದರೆ 28 ವರ್ಷ ವಯಸ್ಸಿನ ವೇಗದ ಬೌಲರ್ ಅನೇಕ ಬಾರಿ ಮೊಣಕೈ ಶಸ್ತ್ರಚಿಕಿತ್ಸೆ, ಬೆನ್ನಿನ ನೋವು ಸಮಸ್ಯೆಗೆ ತುತ್ತಾಗಿದ್ದಾರೆ.


ಇದನ್ನೂ ಓದಿ:   IND vs WI: ವಿಂಡೀಸ್ ಏಕದಿನಕ್ಕೆ ಸಿದ್ಧವಾಯ್ತು Playing 11: ಒಬ್ಬರಲ್ಲ, ಇಬ್ಬರಲ್ಲ…Team Indiaದ ಈ 6 ಆಟಗಾರರು ಔಟ್!


ಕೌಂಟಿ ತಂಡ ಸಸೆಕ್ಸ್‌ ನಲ್ಲಿ ಆರ್ಚರ್‌ ಗೆ ತರಬೇತುದಾರರಾಗಿರುವ ಪಾಲ್ ಫಾರ್ಬ್ರೇಸ್ ಮಾತನಾಡಿದ್ದು, “ಆರ್ಚರ್ ವೇಗವಾಗಿ ಚೇತರಿಸಿಕೊಳ್ಳುತ್ತಿದ್ದಾರೆ ಮತ್ತು ಅವರು ODI ವಿಶ್ವಕಪ್‌ಗೆ ಸೇರುವ ಸಾಧ್ಯತೆಯಿದೆ” ಎಂದು ಹೇಳಿದರು. ಆರ್ಚರ್ ಇತ್ತೀಚೆಗೆ ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ಮತ್ತು ಬಾಂಗ್ಲಾದೇಶದ ವಿರುದ್ಧ ವೈಟ್-ಬಾಲ್ ಕ್ರಿಕೆಟ್‌ ನಲ್ಲಿ ತಮ್ಮ ದೇಶದ ಪರ ಕಾಣಿಸಿಕೊಂಡಿದ್ದರು. ಆದರೆ ಮೇ ತಿಂಗಳಲ್ಲಿ ಬೆನ್ನುನೋವಿನಿಂದಾಗಿ ಆಸ್ಟ್ರೇಲಿಯಾ ವಿರುದ್ಧ ನಡೆಯುತ್ತಿರುವ ಆಶಸ್ ಸರಣಿಯನ್ನು ಮಿಸ್ ಮಾಡಿಕೊಂಡರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ