ಬ್ರಿಜ್ ಭೂಷನ್ ಬಂಧನಕ್ಕೆ ಜೂನ್ 9ರ ಗಡುವು; ಕುಸ್ತಿಪಟುಗಳ ಪ್ರತಿಭಟನೆ
Brij Bhushan : ಭಾರತೀಯ ಕುಸ್ತಿ ಫೆಡರೇಶನ್ ಅಧ್ಯಕ್ಷ ಮತ್ತು ಬಿಜೆಪಿ ಸಂಸದ ಬ್ರಿಜ್ ಭೂಷನ್ ಸಿಂಗ್ ಬಂಧನಕ್ಕೆ ಆಗ್ರಹಿಸಿ ಕುಸ್ತಿ ಪಟುಗಳು ನಡೆಸುತ್ತಿರುವ ಹೋರಾಟಕ್ಕೆ ಭಾರಿ ಬೆಂಬಲ ವ್ಯಕ್ತವಾಗುತ್ತಿದೆ. ಹಲವು ಸಂಘಟನೆಗಳು ರಾಜಕೀಯ ಪಕ್ಷಗಳು, ಕ್ರೀಡಾಪಟುಗಳು ಈಗಾಗಲೇ ಕುಸ್ತಿಪಟುಗಳ ಬೆಂಬಲಕ್ಕೆ ನೀಂತಿದ್ದಾರೆ.
Wrestlers : ಕುಸ್ತಿಪಟುಗಳ ಪರವಾಗಿ ನಿಂತಿರುವ ಭಾರತೀಯ ಕಿಸಾನ್ ಯೂನಿಯನ್ ಸಂಘಟನೆ, ಬ್ರಿಜ್‌ಭೂಷನ್ ಸಿಂಗ್ ಬಂಧನಕ್ಕೆ ಕೇಂದ್ರ ಸರ್ಕಾರಕ್ಕೆ ಜೂನ್ 9ರ ಗಡುವು ನೀಡಿದೆ.
ಆರೋಪಿ ಸ್ಥಾನದಲ್ಲಿರುವ ಬ್ರಿಜ್ ಭೂಷನ್ ಸಿಂಗ್ ಬಂಧನವಾಗುದರ ಹೊರತು ಈ ಸಮಸ್ಯೆಗೆ ಬೇರೆ ಪರಿಹಾರವಿಲ್ಲ ಎಂದು ರೈತ ಸಂಘಟನೆಗಳು, ಜೂನ್ 9ರೊಳಗೆ ಸಿಂಗ್ ಬಂಧಿಸದಿದ್ದರೆ ಖಾಪ್ ಪಂಚಾಯತ್ ದೇಶಾದ್ಯಂತ ಪ್ರತಿಭಟನೆ ನಡೆಸುವುದಾಗಿ ಘೋಸಿಸಿದೆ. ಎಲ್ಲರ ರೈತ ಸಂಘಟನೆಗಳನ್ನು ಒಗ್ಗೂಡಿಸಿ ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆ ನಡೆಯಲಿದ್ದು, ಈ ಚಳುವಳಿ ದೇಶಾದ್ಯಂತ ನಡೆಯಲಿದೆ ಎಂದು ರೈತ ಮುಖಂಡ ರಾಕೇಶ ಟಿಕಾಯತ್ ಎಚ್ಚರಿಕೆ ನೀಡಿದ್ದಾರೆ.
ಟೀಂ ಇಂಡಿಯಾ ಆಟಗಾರ್ತಿಯನ್ನೇ ಗುಟ್ಟಾಗಿ ಮದುವೆಯಾದ ಟೀಂ ಇಂಡಿಯಾ ಸ್ಟಾರ್ ಬ್ಯಾಟ್ಸ್’ಮನ್! ಫೋಟೋಸ್ ನೋಡಿ
ದೇಶಾದ್ಯಂತ ಖಾಪ್ ಪಂಚಾಯತ್ ಹೋರಾಟದ ರೂಪುರೇಶೆಯನ್ನು ಸಿದ್ದಪಡಿಸಲು ರೈತ ಸಂಘಟನೆಗಳು ಕೆಲ ಸಮಿತಿಯನ್ನು ರಚಿಸಿವೆ. ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ಕುಸ್ತಿಪಟುಗಳ ವಿರುದ್ಧ ದಾಖಲಾಗಿರುವ ಎಲ್ಲಾ ದೂರುಗಳನ್ನು ತಕ್ಷಣವೇ ಕೈ ಬಿಡಬೇಕೆಂದು ಟಿಕಾಯತ್ ಅವರು ಒತ್ತಾಯಿಸಿದ್ದಾರೆ.
ತಾವು ಗೆದ್ದಿರುವ ಪದಕಗಳನ್ನು ಗಂಗಾ ನದಿಗೆ ಎಸೆಯಲು ನಿರ್ಧರಿಸಿದ್ದ ಕುಸ್ತಿಪಟುಗಳನ್ನು ಬೇಟಿ ಮಅಡಿ ಮಾತುಕತೆ ನಡೆಸಿದ್ದ ಕಿಸಾನ್ ಯೂನಿಯನ್ ಸಂಘಟನೆಯ ನರೇಶ್ ಟಿಕಾಯತ್ ಕುಸ್ತಿಪಟುಗಳ ಪದಕವನ್ನು ತಮ್ಮ ವಶಕ್ಕೆ ಪಡೆದು ಸಮಸ್ಯೆ ಪರಿಹಾರಕ್ಕೆ ಐದು ದಿನಗಳ ಸಮಯ ನೀಡಿ ಎಂದು ಮನವಿ ಮಾಡಿಕೊಂಡಿದ್ದರು.
ಇದನ್ನೂ ಓದಿ-ಬ್ರಿಜ್ ಭೂಷನ್ ಬಂಧನಕ್ಕೆ ಜೂನ್ 9ರ ಗಡುವು; ಕುಸ್ತಿಪಟುಗಳ ಪ್ರತಿಭಟನೆ
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://bit.ly/3LwfnhK
Instagram Link - https://bit.ly/3LyfY2l
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.