ಅಪ್ಪನಂತೆ ಕ್ರಿಕೆಟರ್ ಆಗಬೇಕಿದ್ದ ʼಕಪಿಲ್ ದೇವ್ʼ ಮಗಳು ಈಗ ಏನು ಮಾಡುತ್ತಿದ್ದಾಳೆ ಗೊತ್ತಾ..!
Kapil Dev Daughter : ಇತ್ತೀಚಿಗೆ ಸಿನಿ ನಟರ ಮಕ್ಕಳು ಸಿನಿರಂಗಕ್ಕೆ, ಕ್ರಿಕೆಟಿಗರ ಮಕ್ಕಳು ಕ್ರಿಕೆಟ್ಗೆ, ರಾಜಕಾರಣಿಗಳ ಮಕ್ಕಳು ರಾಜಕೀಯಕ್ಕೆ ಬರುತ್ತಿರುವುದು ಹೆಚ್ಚಾಗುತ್ತದೆ. ಅದ್ರೆ, ತಂದೆ ಒಬ್ಬ ಲೆಜೆಂಡರಿ ಕ್ರಿಕೆಟರ್ ಆಗಿದ್ದರೂ ಸಹ ತನ್ನದೆ ಛಾಪು ಮೂಡಿಸಲು ಹೊರಟ ಕಪಿಲ್ ದೇವ್ ಅವರ ಪುತ್ರಿ ಅಮಿಯಾ ದೇವ್ ಸಧ್ಯ ಏನ್ ಮಾಡ್ತೀದಾರೆ ಗೊತ್ತಾ ನಿಮ್ಗೆ..?
Amiya Kapil Dev : 1983 ರ ವಿಶ್ವಕಪ್‌ನಲ್ಲಿ ಟೀಂ ಇಂಡಿಯಾಗೆ ಗೆಲುವಿಗೆ ಯಾವುದೇ ನಿರೀಕ್ಷೆ ಇರಲಿಲ್ಲ, ಆಗ ಕಣಕ್ಕಿಳಿದು ಅಬ್ಬರಿಸಿದ್ದ ಲಿಜೆಂಡ್ ಕೊನೆಗೂ ಕಪ್ ಎತ್ತಿ ಹಿಡಿದಿದ್ದರು, ಯಸ್.. ಅವರೇ ಕಿಕೆಟ್ ದಿಗ್ಗಜ ಕಪಿಲ್ ದೇವ್. ಭಾರತಕ್ಕೆ ಮೊದಲ ವಿಶ್ವಕಪ್ ನೀಡಿ ಖ್ಯಾತಿ ಕಪಿಲ್ ದೇವ್ ಅವರಿಗೆ ಸಲ್ಲುತ್ತದೆ. ಅಲ್ಲದೆ, ಈ ರೋಚಕ ಗೆಲುವಿನ ನಂತರ ಅದೇಷ್ಟೋ ಯುವಪಡೆ ಕ್ರಿಕೆಟ್‌ನತ್ತ ಮುಖ ಮಾಡಿತು. ಆದರೆ, ಈ ದಿಗ್ಗಜ ಕ್ರಿಕೆಟಿಗನ ಮಗಳು ಮಾತ್ರ ಕ್ರಿಡಾಂಗಣಕ್ಕೆ ಬರಲೇಇಲ್ಲ.
ಹೌದು.. ಕ್ರೀಡಾ ಕ್ಷೇತ್ರದಲ್ಲಿ ತಂದೆಯನ್ನು ಅನುಸರಿಸದೆ ಭಿನ್ನವಾಗಿ ಯೋಚಿಸಿದ ಅಮಿಯಾ ಚಲನಚಿತ್ರ ವೃತ್ತಿಜೀವನದಲ್ಲಿ ತಮ್ಮದೇ ಆದ ಹಾದಿಯನ್ನು ರೂಪಿಸಲು ನಿರ್ಧರಿಸಿದರು. ಅಮಿಯಾ ಅನೇಕ ಬಾಲಿವುಡ್ ಚಿತ್ರಗಳ ಭಾಗವಾಗಿದ್ದಾಳೆ. ಸಹಾಯಕ ನಿರ್ದೇಶಕಿಯಾಗಿ ಮಿಂಚುತ್ತಿದ್ದು, ನಿರ್ದೇಶಕಿಯಾಗಿ ತನ್ನನ್ನು ತಾನು ಸಾಬೀತುಪಡಿಸುವ ಪ್ರಯತ್ನದಲ್ಲಿದ್ದಾರೆ.
ಇದನ್ನೂ ಓದಿ: ಟೀಂ ಇಂಡಿಯಾದಲ್ಲಿ ಅತೀ ಹೆಚ್ಚು ಸಂಬಳ ಪಡೆಯುವ ಆಟಗಾರ ಯಾರು ಗೊತ್ತಾ?
ಅಮಿಯಾ 2019 ರಲ್ಲಿ ಕಬೀರ್ ಖಾನ್ ಅವರ ನಿರ್ದೇಶನದ ತಂಡ ಸೇರಿಕೊಳ್ಳುವ ಮೂಲಕ ಬಾಲಿವುಡ್‌ಗೆ ಪಾದಾರ್ಪಣೆ ಮಾಡಿದರು. ತಮ್ಮ ತಂದೆಯ ಜೀವನಚರಿತ್ರೆ '83' ಸೇರಿದಂತೆ ಹಲವಾರು ದೊಡ್ಡ ಬಾಲಿವುಡ್ ಚಿತ್ರಗಳಲ್ಲಿ ಸಹ ನಿರ್ದೇಶಕಿಯಾಗಿ ಕೆಲಸ ಮಾಡಿದ್ದಾರೆ. 83 ಮೊದಲ ವಿಶ್ವಕಪ್‌ನ ರೋಚಕ ಕಥೆ ಆಧಾರಿತ ಸಿನಿಮಾವಾಗಿದೆ.
ಬಾಲಿವುಡ್ ಸೂಪರ್‌ಸ್ಟಾರ್‌ಗಳಾದ ರಣವೀರ್ ಸಿಂಗ್, ದೀಪಿಕಾ ಪಡುಕೋಣೆ ಕಪಿಲ್ ದೇವ್ ಮತ್ತು ರೋಮಿ ದೇವ್ 83 ಚಿತ್ರದಲ್ಲಿ ನಟಿಸಿದ್ದಾರೆ. ಚಿತ್ರದಲ್ಲಿ ಹಾರ್ಡಿ ಸಂಧು, ಪಂಕಜ್ ತ್ರಿಪಾಠಿ, ಆಮಿ ವಿರ್ಕ್, ತಾಹಿರ್ ರಾಜ್ ಭಾಸಿನ್, ಬೊಮನ್ ಇರಾನಿ ಮುಂತಾದವರು ನಟಿಸಿದ್ದಾರೆ. ಈ ಚಿತ್ರವು ಗಲ್ಲಾಪೆಟ್ಟಿಗೆಯಲ್ಲಿ ರೂ.193 ಕೋಟಿಗಳನ್ನು ಸಂಗ್ರಹಿಸಿತು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=uzXzteRDY-k
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.