ಕೊಲ್ಕತ್ತಾ: ಇಲ್ಲಿನ ಈಡನ್ ಗಾರ್ಡನ್ ನಲ್ಲಿ ನಡೆಯುತ್ತಿರುವ  ಕರ್ನಾಟಕ ಮತ್ತು ವಿದರ್ಭ ತಂಡಗಳ ಮೂರನೇ ದಿನದ ಸೆಮಿಫೈನಲ್ ಪಂದ್ಯವು ಕುತೂಹಲ ಘಟ್ಟಕ್ಕೆ ತಲುಪಿದೆ.


COMMERCIAL BREAK
SCROLL TO CONTINUE READING

ನಿನ್ನೆ ಎರಡನೇ ದಿನದ ಅಂತ್ಯದಾಟಕ್ಕೆ ಎಂಟು ವಿಕೆಟ್ ಗಳನ್ನು  ಕಳೆದುಕೊಂಡು  294 ರನ್ ಗಳಿಸಿದ್ದ ಕರ್ನಾಟಕ ತಂಡವು ಇಂದು ಕರುಣ್ ನಾಯರ್ ಮತ್ತು ನಾಯಕ ವಿನಯಕುಮಾರ್ ವಿಕೆಟಗಳನ್ನು ಕಳೆದುಕೊಳ್ಳುವ ಮೂಲಕ 301 ರನ್ ಗಳಿಗೆ ಆಲೌಟ್ ಆಯಿತು.ವಿದರ್ಭ ಪರ ರಜನೀಶ್ ಗುರ್ಬಾನಿ  ಐದು ವಿಕೆಟ್ ಗಳನ್ನು ಕಬಳಿಸುವ  ಮೂಲಕ  ಇಂದು ಕರ್ನಾಟಕವನ್ನು ಬೇಗನೆ ಕಟ್ಟಿ ಹಾಕಿದರು.


ಕರ್ನಾಟಕದ 116 ರನ್ ಗಳ ಮೊದಲ ಇನ್ನಿಂಗ್ಸ್ ಮುನ್ನಡೆಯನ್ನು ಬೆನ್ನತ್ತಿದ ವಿದರ್ಭ ತಂಡವು ಮೂರನೆಯ ದಿನದಾಟಕ್ಕೆ  ನಾಲ್ಕು ವಿಕೆಟ್ ನಷ್ಟಕ್ಕೆ 195 ರನ್ ಗಳನ್ನು ಗಳಿಸಿದೆ. ಪ್ರಾರಂಭದಲ್ಲಿ  ವಿನಯ ಕುಮಾರ್ ಮತ್ತು ಅರವಿಂದ್ ರವರ ಪರಿಣಾಮಕಾರಿ ದಾಳಿಯಿಂದಾಗಿ ಫೈಜ್ ಫಜಾಲ್  ಸಂಜಯ ರಾಮಸ್ವಾಮಿ ಮತ್ತು ವಾಸಿಮ ಜಾಪರ್ ರವರ ವಿಕೆಟ್ ಗಳನ್ನು ಕಳೆದು ಕೊಂಡು ಸಂಕಷ್ಟದಲ್ಲಿದ್ದ ವಿದರ್ಭ ತಂಡಕ್ಕೆ  ಗಣೇಶ್ ಸತೀಶ್ 71 ರನ್ ಗಳ ಮೂಲಕ ಕ್ರಿಸ್ ನಲ್ಲಿದ್ದಾರೆ.


ಇನ್ನು ಎರಡು ದಿನಗಳ ಆಟವಿರುವ ಈ ಪಂದ್ಯ ಯಾರಿಗೆ ಒಲಿಯಿತ್ತೋ ಎನ್ನುವುದನ್ನು ಕಾದು ನೋಡಬೇಕಾಗಿದೆ,ಈ ಪಂದ್ಯದಲ್ಲಿ ಗೆಲ್ಲುವವರು ರಣಜಿ ಫೈನಲ್ ಪಂದ್ಯಕ್ಕೆ ಆಯ್ಕೆಯಾಗಲಿದ್ದಾರೆ.