Karun Nair leave Karnataka Cricket: ನಿತೀಶ್ ರಾಣಾ ನಂತರ ಮತ್ತೊಬ್ಬ ದೊಡ್ಡ ಆಟಗಾರ ದೇಶೀಯ ಕ್ರಿಕೆಟ್‌’ನಲ್ಲಿ ತಂಡವನ್ನು ತೊರೆಯುವುದಾಗಿ ಘೋಷಿಸಿದ್ದಾರೆ. ಕರುಣ್ ನಾಯರ್ ಕರ್ನಾಟಕ ತಂಡದಿಂದ ದೂರವಾಗಲು ನಿರ್ಧರಿಸಿದ್ದಾರೆ. ತಂಡವನ್ನು ತೊರೆಯುವ ನಿರ್ಧಾರವನ್ನು ಪ್ರಕಟಿಸಿದ ಕರುಣ್ ನಾಯರ್ ಭಾವನಾತ್ಮಕ Instagram ಸಂದೇಶವನ್ನು ಶೇರ್ ಮಾಡಿಕೊಂಡಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಮುಂದಿನ 2 ದಿನ ಈ ಭಾಗದಲ್ಲಿ ಎಡೆಬಿಡದೆ ಸುರಿಯಲಿದೆ ಮಳೆ: ಬಿರುಗಾಳಿ ಸಹಿತ ಮಿಂಚಿನ ಭೀತಿ!


ನಾಯರ್ ಅವರನ್ನು ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಿಂದ ಕೈಬಿಡಲಾಗಿತ್ತು. ಆ ಬಳಿಕ ರಣಜಿ ಟ್ರೋಫಿ ತಂಡ ಬರುವ ಮುನ್ನವೇ ಕರ್ನಾಟಕ ತಂಡವನ್ನು ತೊರೆಯಲು ನಿರ್ಧರಿಸಿದ್ದಾರೆ. ಕಳೆದ ವರ್ಷ ಜೂನ್‌’ನಿಂದ ಕರುಣ್ ನಾಯರ್ ಯಾವುದೇ ರೀತಿಯ ಕ್ರಿಕೆಟ್ ಆಡಿಲ್ಲ.


ಇನ್‌ಸ್ಟಾಗ್ರಾಮ್ ಪೋಸ್ಟ್’ನಲ್ಲಿ, “ಕಳೆದ ಎರಡು ದಶಕಳಿಂದ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ಜೊತೆ ಪ್ರಯಾಣಿಸಿದ್ದು, ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇನೆ. ನನ್ನ ಕ್ರಿಕೆಟ್ ವೃತ್ತಿಜೀವನದ ಆರಂಭದಿಂದಲೂ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ನನಗೆ ಬೆಂಬಲ ನೀಡಿದೆ. ಈ ಬೆಂಬಲವು ನಾನು ಆಟಗಾರನಾಗಿ ಬೆಳೆಯಲು ಸಹಾಯ ಮಾಡಿದೆ. ನಾಯಕರಿಗೆ, ಕೋಚ್‌’ಗಳಿಗೆ ಮತ್ತು ಸಹ ಆಟಗಾರರಿಗೆ ಧನ್ಯವಾದ” ಎಂದು ಹೇಳಿದ್ದಾರೆ.


“ನಾನು ವಿದರ್ಭ ಕ್ರಿಕೆಟ್ ಅಸೋಸಿಯೇಷನ್‌’ನೊಂದಿಗೆ ಹೊಸ ಆರಂಭವನ್ನು ಮಾಡುತ್ತಿದ್ದೇನೆ, KSCA ಜೊತೆಗಿನ ನೆನಪುಗಳು ಮತ್ತು ಸ್ನೇಹವನ್ನು ಮರಳಿ ತರುತ್ತಿದ್ದೇನೆ. ನನ್ನ ಕ್ರಿಕೆಟ್ ಪಯಣದ ಭಾಗವಾಗಿದ್ದಕ್ಕೆ ಎಲ್ಲರಿಗೂ ಧನ್ಯವಾದ ಹೇಳುತ್ತೇನೆ” ಎಂದಿದ್ದಾರೆ.


ಕರುಣ್ ನಾಯರ್ ಟೆಸ್ಟ್ ಮತ್ತು ಏಕದಿನ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದ್ದಾರೆ. ಅ ಟೆಸ್ಟ್ ಕ್ರಿಕೆಟ್‌’ನಲ್ಲಿ ತ್ರಿಶತಕ ಗಳಿಸಿದ್ದಾರೆ. ನಾಯರ್ ಇಂಗ್ಲೆಂಡ್ ವಿರುದ್ಧ ಈ ಇನ್ನಿಂಗ್ಸ್ ಆಡಿದ್ದರು. ಅಷ್ಟೇ ಅಲ್ಲದೆ, ವೀರೇಂದ್ರ ಸೆಹ್ವಾಗ್ ದಾಖಲೆ ಸರಿಗಟ್ಟಿದ್ದರು. ನಾಯರ್ ಪ್ರಥಮ ದರ್ಜೆ ಕ್ರಿಕೆಟ್‌’ನಲ್ಲಿ 85 ಪಂದ್ಯಗಳನ್ನು ಆಡಿದ್ದು, ಸುಮಾರು 6 ಸಾವಿರ ರನ್ ಗಳಿಸಿದ್ದಾರೆ.


ಇದನ್ನೂ ಓದಿ: ಸಿಂಹ ರಾಶಿಯಲ್ಲಿ ಸೂರ್ಯ ಬುಧ ಯುತಿ: ಮುಂದಿನ 30 ದಿನ ಈ ರಾಶಿಗೆ ಸಂಪತ್ತಿನ ಮಳೆ ಗ್ಯಾರಂಟಿ


ಈ ಹಿಂದೆ ನಿತೀಶ್ ರಾಣಾ ಕೂಡ ದೆಹಲಿ ತೊರೆಯುವುದಾಗಿ ಘೋಷಿಸಿದ್ದರು. ಆ ಬಳಿಕ ಯುಪಿ ತಂಡಕ್ಕೆ ಸೇರ್ಪಡೆಗೊಂಡಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.