ದಾಂಪತ್ಯ ಜೀವನಕ್ಕೆ ಕಾಲಿಟ್ಟ ಟೆಸ್ಟ್ ತ್ರಿಶತಕ ವೀರ ಕರುಣ್ ನಾಯರ್
ಟೆಸ್ಟ್ ಕ್ರಿಕೆಟ್‌ನಲ್ಲಿ ಟ್ರಿಪಲ್ ಸೆಂಚುರಿ ಗಳಿಸಿದ ಎರಡನೇ ಭಾರತೀಯನಾಗಿರುವ ಕರುಣ್ ನಾಯರ್, ಉದಯಪುರದ ತನ್ನ ದೀರ್ಘಕಾಲದ ಗೆಳತಿ ಸನಯಾ ತಂಕರಿವಾಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ನವದೆಹಲಿ: ಟೆಸ್ಟ್ ಕ್ರಿಕೆಟ್‌ನಲ್ಲಿ ಟ್ರಿಪಲ್ ಸೆಂಚುರಿ ಗಳಿಸಿದ ಎರಡನೇ ಭಾರತೀಯನಾಗಿರುವ ಕರುಣ್ ನಾಯರ್, ಉದಯಪುರದ ತನ್ನ ದೀರ್ಘಕಾಲದ ಗೆಳತಿ ಸನಯಾ ತಂಕರಿವಾಲಾ ಅವರೊಂದಿಗೆ ದಾಂಪತ್ಯ ಜೀವನಕ್ಕೆ ಕಾಲಿಟ್ಟರು.
ಕರುಣ್ ನಾಯರ್ ಅವರ ವಿವಾಹ ಸಂಭ್ರಮಾಚರಣೆಯಲ್ಲಿ ಭಾರತೀಯ ಕ್ರಿಕೆಟಿಗರಾದ ಶ್ರೇಯಸ್ ಅಯ್ಯರ್, ವರುಣ್ ಆರನ್, ಯುಜ್ವೇಂದ್ರ ಚಾಹಲ್, ಶಾರ್ದುಲ್ ಠಾಕೂರ್ ಮತ್ತು ಅಜಿಂಕ್ಯ ರಹಾನೆ ಭಾಗವಹಿಸಿದ್ದರು.
ಭಾರತದ ಪರವಾಗಿ ಒಂಬತ್ತು ಏಕದಿನ ಪಂದ್ಯಗಳು ಮತ್ತು ಅನೇಕ ಟೆಸ್ಟ್ ಪಂದ್ಯಗಳನ್ನು ಆಡಿದ ವೇಗದ ಬೌಲರ್ ವರುಣ್ ಆರನ್, ಕರುಣ್ ನಾಯರ್ ಮತ್ತು ಸನಾಯ ತಂಕರಿವಾಲಾ ಅವರ ಮದುವೆಯ ಚಿತ್ರಗಳನ್ನು ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ.
ನವವಿವಾಹಿತ ದಂಪತಿಗಳು ಆಯೋಜಿಸಿದ್ದ ಸಂಜೆಯ ಪಾರ್ಟಿಯ ಪೋಟೋಗಳನ್ನು ಮಧ್ಯಮ ಕ್ರಮಾಂಕದ ಬ್ಯಾಟ್ಸ್‌ಮನ್ ಶ್ರೇಯಸ್ ಅಯ್ಯರ್ ಸ್ಪಿನ್ನರ್ ಯುಜ್ವೇಂದ್ರ ಚಾಹಲ್ ಮತ್ತು ವೇಗದ ಬೌಲರ್ ಶಾರ್ದುಲ್ ಠಾಕೂರ್ ಇನ್ಸ್ಟಾಗ್ರಾಮ್ನಲ್ಲಿ ಪೋಸ್ಟ್ ಮಾಡಿದ್ದಾರೆ. ಭಾರತದ ಟೆಸ್ಟ್ ತಂಡದ ಉಪನಾಯಕ ಅಜಿಂಕ್ಯ ರಹಾನೆ ಅವರ ಪತ್ನಿ ರಾಧಿಕಾ ಧೋಪವ್ಕರ್ ಮತ್ತು ಪುತ್ರಿಯೊಂದಿಗೆ ಕರುಣ್ ನಾಯರ್ ಅವರ ಪಾರ್ಟಿಯಲ್ಲಿ ಗುರುತಿಸಿಕೊಂಡಿದ್ದಾರೆ.
ಕಳೆದ ವರ್ಷ ಜೂನ್‌ನಲ್ಲಿ ನಾಯರ್ ತಮ್ಮ ನಿಶ್ಚಿತಾರ್ಥವನ್ನು ದೀರ್ಘಕಾಲದ ಗೆಳತಿ ಸನಾಯಾ ಘೋಷಿಸಿದ್ದರು.