KKR: ಭಾರತಕ್ಕೆ ಬಂದ್ರೆ ರಾತ್ರಿ ಮಲಗೋದೆ ಇಲ್ವಂತೆ ಕೆಕೆಆರ್ ಸ್ಟಾರ್ ಆಂಡ್ರೆ ರಸೆಲ್! ಮಧ್ಯರಾತ್ರಿ ಅದನ್ನೇ ಮಾಡೋದಂತೆ!!
KKR, IPL 2024: ಬಹಳ ದಿನಗಳ ನಂತರ, ಈಡನ್ ಗಾರ್ಡನ್ಸ್ ರಸೆಲ್ ಅವರ ಪರಾಕ್ರಮವನ್ನು ಕಣ್ತುಂಬಿಕೊಂಡಿತ್ತು. ಕಳೆದ ಕೆಲವು ಋತುಗಳಲ್ಲಿ ಲಯ ಪಡೆಯದಿದ್ದರೂ, ಈ ಬಾರಿ ರಸೆಲ್ ಅದ್ಭುತವಾಗಿ ಆಡುತ್ತಿದ್ದಾರೆ. ಅಂದಹಾಗೆ ಈ ನಡುವೆ ರಸೆಲ್ ಬಗ್ಗೆ ಮಾಹಿತಿ ಬಂದಿದ್ದು ಅಚ್ಚರಿ ಮೂಡಿಸುತ್ತದೆ.
KKR, IPL 2024: ಈಡನ್ ಗಾರ್ಡನ್ಸ್’ನಲ್ಲಿ ಸನ್‌ರೈಸರ್ಸ್ ಹೈದರಾಬಾದ್ ವಿರುದ್ಧ ಕೆಕೆಆರ್ ಬಿಗ್ ಹಿಟ್ಟರ್ ಆಂಡ್ರೆ ರಸೆಲ್ ವಿಧ್ವಂಸಕ ಇನ್ನಿಂಗ್ಸ್ ಆಡಿದ್ದರು. 25 ಎಸೆತಗಳಲ್ಲಿ 65 ರನ್ ಗಳಿಸಿದ ಅವರು, 7 ಸಿಕ್ಸರ್ ಮತ್ತು 3 ಬೌಂಡರಿಗಳನ್ನು ಬಾರಿಸಿದ್ದಾರೆ.
ಇದನ್ನೂ ಓದಿ: ಟಗರು ಪುಟ್ಟಿ ಶ್ರೇಯಾಂಕ ಪಾಟೀಲ್’ಗೆ ಬಾಯ್ ಫ್ರೆಂಡ್ ಇದ್ದಾರಾ? ಕಡೆಗೂ ಸಿಕ್ಕೇಬಿಡ್ತು ಸ್ಪಷ್ಟ ಉತ್ತರ
ಬಹಳ ದಿನಗಳ ನಂತರ, ಈಡನ್ ಗಾರ್ಡನ್ಸ್ ರಸೆಲ್ ಅವರ ಪರಾಕ್ರಮವನ್ನು ಕಣ್ತುಂಬಿಕೊಂಡಿತ್ತು. ಕಳೆದ ಕೆಲವು ಋತುಗಳಲ್ಲಿ ಲಯ ಪಡೆಯದಿದ್ದರೂ, ಈ ಬಾರಿ ರಸೆಲ್ ಅದ್ಭುತವಾಗಿ ಆಡುತ್ತಿದ್ದಾರೆ. ಅಂದಹಾಗೆ ಈ ನಡುವೆ ರಸೆಲ್ ಬಗ್ಗೆ ಮಾಹಿತಿ ಬಂದಿದ್ದು ಅಚ್ಚರಿ ಮೂಡಿಸುತ್ತದೆ.
ಭಾರತಕ್ಕೆ ಬಂದರೆ ರಾತ್ರಿಯಿಡೀ ನಿದ್ದೆಯೇ ಮಾಡಲ್ವಂತೆ ರಸೆಲ್. ಸೂರ್ಯ ಉದಯಿಸಿದ ನಂತರ ಮಲಗಲು ಹೋಗಿ, ಮಧ್ಯಾಹ್ನ ಎದ್ದು ತಿಂಡಿ ಮಾಡಿ ನಂತರ ನೇರವಾಗಿ ಅಭ್ಯಾಸಕ್ಕೆ ಹೋಗುತ್ತಾರಂತೆ. ಇದು ಕೆರಿಬಿಯನ್ ತಾರೆ ಪಂದ್ಯವಿದ್ದ ದಿನ ಅನುಸರಿಸುವ ದಿನಚರಿಯಂತೆ.
ಅಂದಹಾಗೆ ಇದರ ಹಿಂದೆ ಕಾರಣಗಳಿವೆ. ಕೆರಿಬಿಯನ್ ಆಲ್‌ರೌಂಡರ್ ಭಾರತಕ್ಕೆ ಬಂದಾಗ ತನ್ನ ಗಡಿಯಾರವನ್ನು ಬದಲಾಯಿಸುವುದಿಲ್ಲ. ಭಾರತದ ಸಮಯವು ವೆಸ್ಟ್ ಇಂಡೀಸ್‌ಗಿಂತ ಸಂಪೂರ್ಣವಾಗಿ ವಿರುದ್ಧವಾಗಿದೆ. ಆದ್ದರಿಂದ ರಸೆಲ್ ತನ್ನ ದೇಶದ ಸಮಯಕ್ಕೆ ಅನುಗುಣವಾಗಿ ಕೆಲಸ ಮಾಡುತ್ತಾರೆ.
ಭಾರತೀಯ ಕಾಲಮಾನ ಮಧ್ಯರಾತ್ರಿಯ ನಂತರ ಜಿಮ್’ಗೆ ಹೋಗಿ. ರಾತ್ರಿಯಿಡೀ ಎಚ್ಚರವಾಗಿರುತ್ತಾರಂತೆ. ನಂತರ ಭಾರತದಲ್ಲಿ ಬೆಳಿಗ್ಗೆಯಾದಾಗ ಮಲಗಲು ಹೋಗುತ್ತಾರೆ. ಹಾಗೆ ಮಾಡಲು ಕಾರಣ ವರ್ಷವಿಡೀ ತನ್ನ ಅಭ್ಯಾಸವಾಗಿ ಇಟ್ಟುಕೊಳ್ಳುವುದು.
ಇದನ್ನೂ ಓದಿ: LSG vs RCB: ಲಕ್ನೋ ಸೂಪರ್ ಜೈಂಟ್ಸ್ ವಿರುದ್ಧ ಆರ್ಸಿಬಿಗೆ 28 ರನ್ ಗಳ ಹೀನಾಯ ಸೋಲು
ತನ್ನ ಗಡಿಯಾರವನ್ನು ಒಂದೇ ಸಮಯಕ್ಕೆ ಇಟ್ಟುಕೊಳ್ಳುವುದು ಫಿಟ್ಟರ್ ಮತ್ತು ಫ್ರೆಶ್ ಆಗಿ ಇರಿಸುತ್ತದೆ ಎಂಬುದು ರಸೆಲ್ ಭಾವನೆ.
ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ, ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/watch?v=I87DcFM35WY
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ