ಸೆಂಚುರಿಯನ್’ನಲ್ಲಿ ರಾಹುಲ್ ಭರ್ಜರಿ ಸೆಂಚುರಿ: ಕ್ರಿಕೆಟ್ ಇತಿಹಾಸದಲ್ಲಿ ಈ ವಿಶ್ವದಾಖಲೆ ಬರೆದ ಏಕೈಕ ಕ್ರಿಕೆಟಿಗ
KL Rahul World Record: ಕೆಎಲ್ ರಾಹುಲ್ ತಮ್ಮ 8 ಶತಕಗಳಲ್ಲಿ ಎರಡು ಶತಕಗಳನ್ನು ಬಾರಿಸಿದ್ದು, ವಿಶ್ವದ ಅತ್ಯಂತ ಕಠಿಣ ಮೈದಾನಗಳಲ್ಲಿ ಒಂದಾದ ದಕ್ಷಿಣ ಆಫ್ರಿಕಾದ ಸೆಂಚುರಿಯನ್’ನಲ್ಲಿ. ಅಂದಹಾಗೆ ಸೆಂಚುರಿಯನ್ ಮೈದಾನದಲ್ಲಿ ಸತತ ಎರಡನೇ ಶತಕ ಇದಾಗಿದ್ದು, ಈ ಮೂಲಕ ವಿಶೇಷ ದಾಖಲೆ ಸೃಷ್ಟಿಯಾಗಿದೆ.
KL Rahul World Record: ದಕ್ಷಿಣ ಆಫ್ರಿಕಾ ವಿರುದ್ಧ ಸೆಂಚುರಿಯನ್ ಮೈದಾನದಲ್ಲಿ ಭರ್ಜರಿ ಶತಕ ಸಿಡಿಸುವ ಮೂಲಕ ಟೀಂ ಇಂಡಿಯಾದ ವಿಕೆಟ್ ಕೀಪರ್ ಬ್ಯಾಟ್ಸ್’ಮನ್ ಕೆಎಲ್ ರಾಹುಲ್ ಟೀಂ ಇಂಡಿಯಾವನ್ನು ಸಂಕಷ್ಟದಿಂದ ಪಾರು ಮಾಡಿದ್ದಾರೆ. ರಾಹುಲ್ 137 ಎಸೆತಗಳಲ್ಲಿ 101 ರನ್’ಗಳ ಅದ್ಭುತ ಇನ್ನಿಂಗ್ಸ್ ಆಡಿ, ಕೆಳ ಕ್ರಮಾಂಕದ ಬ್ಯಾಟ್ಸ್‌ಮನ್’ಗಳ ಜೊತೆಗೂಡಿ ತಂಡದ ಸ್ಕೋರ್ ಅನ್ನು 245 ರನ್’ಗಳಿಗೆ ಕೊಂಡೊಯ್ದರು. ಅವರ ಈ ಇನ್ನಿಂಗ್ಸ್’ನಲ್ಲಿ 14 ಬೌಂಡರಿ ಮತ್ತು 4 ಸಿಕ್ಸರ್’ಗಳನ್ನು ಬಾರಿಸಿದ್ದು, 73.72 ಸ್ಟ್ರೈಕ್ ರೇಟ್’ನಲ್ಲಿ ಬ್ಯಾಟಿಂಗ್ ಮಾಡಿದ್ದಾರೆ.
ಇದನ್ನೂ ಓದಿ: ಟಿ20 ವಿಶ್ವಕಪ್ ಗೆಲ್ಲಲು ಮಾಸ್ಟರ್ ಪ್ಲಾನ್: ಈ ದಿಗ್ಗಜನನ್ನು ಕೋಚ್ ಆಗಿ ನೇಮಿಸಿದ ಸಮಿತಿ
ಕೆಎಲ್ ರಾಹುಲ್ ಭರ್ಜರಿ ಶತಕ:
ಈ ಪಂದ್ಯದಲ್ಲಿ ಕೆಎಲ್ ರಾಹುಲ್ 6ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಕ್ರೀಸ್’ಗೆ ಬಂದಾಗ ಟೀಂ ಇಂಡಿಯಾ ಸ್ಕೋರ್ 4 ವಿಕೆಟ್ ನಷ್ಟಕ್ಕೆ ಕೇವಲ 92 ರನ್ ಆಗಿತ್ತು. ಆ ನಂತರ 121 ರನ್’ಗಳಿಗೆ ಆರನೇ ವಿಕೆಟ್ ಕಳೆದುಕೊಂಡಿತ್ತು. ಆದರೆ ಆ ನಂತರ ಕೆಎಲ್ ರಾಹುಲ್ ಮೊದಲು ಶಾರ್ದೂಲ್ ಠಾಕೂರ್, ನಂತರ ಜಸ್ಪ್ರೀತ್ ಬುಮ್ರಾ, ನಂತರ ಮೊಹಮ್ಮದ್ ಸಿರಾಜ್, ಅಂತಿಮವಾಗಿ ಪ್ರಸಿದ್ಧ್ ಕೃಷ್ಣ ಅವರೊಂದಿಗೆ ಬ್ಯಾಟ್ ಮಾಡಿ ಟೀಮ್ ಇಂಡಿಯಾವನ್ನು ಮುನ್ನಡೆಸಿದರು. ಪಿಚ್ ವಿಷಯದಲ್ಲಿ ಇದು ಉತ್ತಮ ಸ್ಕೋರ್ ಆಗಿದ್ದು ಮಾತ್ರವಲ್ಲದೆ, ರಾಹುಲ್ ವೃತ್ತಿಜೀವನದ 8ನೇ ಶತಕ ಇದಾಗಿದೆ.
ಕೆಎಲ್ ರಾಹುಲ್ ತಮ್ಮ 8 ಶತಕಗಳಲ್ಲಿ ಎರಡು ಶತಕಗಳನ್ನು ಬಾರಿಸಿದ್ದು, ವಿಶ್ವದ ಅತ್ಯಂತ ಕಠಿಣ ಮೈದಾನಗಳಲ್ಲಿ ಒಂದಾದ ದಕ್ಷಿಣ ಆಫ್ರಿಕಾದ ಸೆಂಚುರಿಯನ್’ನಲ್ಲಿ. ಅಂದಹಾಗೆ ಸೆಂಚುರಿಯನ್ ಮೈದಾನದಲ್ಲಿ ಸತತ ಎರಡನೇ ಶತಕ ಇದಾಗಿದ್ದು, ಈ ಮೂಲಕ ವಿಶೇಷ ದಾಖಲೆ ಸೃಷ್ಟಿಯಾಗಿದೆ. 2021 ರಲ್ಲಿ ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಸಂದರ್ಭದಲ್ಲಿ, ಸೆಂಚುರಿಯನ್ ಮೈದಾನದಲ್ಲಿ ನಡೆದ ಸರಣಿಯ ಮೊದಲ ಟೆಸ್ಟ್ ಪಂದ್ಯದಲ್ಲಿ, ಆರಂಭಿಕ ಬ್ಯಾಟ್ಸ್’ಮನ್ ಆಗಿ ಕೆಎಲ್ ರಾಹುಲ್ 123 ರನ್’ಗಳ ಅದ್ಭುತ ಶತಕವನ್ನು ಆಡಿದ್ದರು.
ಇದನ್ನೂ ಓದಿ: Baba Vanga: 2024ರಲ್ಲಿ ಇಡೀ ಜಗತ್ತಿಗೆ ಎದುರಾಗಲಿದೆ ದೊಡ್ಡ ಸಂಕಷ್ಟ! ಬಾಬಾ ವಂಗಾ ಭವಿಷ್ಯವೇನು?
ಇದೀಗ ದಕ್ಷಿಣ ಆಫ್ರಿಕಾದ ಸೆಂಚೂರಿಯನ್ ಮೈದಾನದಲ್ಲಿ ಕೆಎಲ್ ರಾಹುಲ್ ಸತತ ಎರಡನೇ ಶತಕ ಸಿಡಿಸಿದ್ದಾರೆ. ದಕ್ಷಿಣ ಆಫ್ರಿಕಾದ ಸೆಂಚುರಿಯನ್ ಮೈದಾನದಲ್ಲಿ 2 ಶತಕ ಸಿಡಿಸಿದ ವಿಶ್ವದ ಮೊದಲ ವಿದೇಶಿ ಬ್ಯಾಟ್ಸ್‌ಮನ್ ಎಂಬ ಹೆಗ್ಗಳಿಕೆಗೆ ಕೆಎಲ್ ರಾಹುಲ್ ಪಾತ್ರರಾಗಿದ್ದಾರೆ. ಅಂದರೆ ದಕ್ಷಿಣ ಆಫ್ರಿಕಾದ ಬ್ಯಾಟ್ಸ್‌ಮನ್’ಗಳ ಹೊರತಾಗಿ ಸೆಂಚುರಿಯನ್ ಮೈದಾನದಲ್ಲಿ ಎರಡು ಟೆಸ್ಟ್ ಶತಕಗಳನ್ನು ಬಾರಿಸಿದ ಏಕೈಕ ಕ್ರಿಕೆಟಿಗ ರಾಹುಲ್.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ