ನವದೆಹಲಿ: ಲಕ್ನೋ ಸೂಪರ್ ಜೈಂಟ್ಸ ತಂಡದ ನಾಯಕ ಹಾಗೂ ಭಾರತೀಯ ತಂಡದ ಉಪನಾಯಕ ಕೆ.ಎಲ್.ರಾಹುಲ್ ಅವರು ಐಪಿಎಲ್ 2022 ರ ಆವೃತ್ತಿಯಲ್ಲಿ ಅತಿ ಹೆಚ್ಚು ರನ್ ಗಳಿಸಿದವರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದರು, ಅಷ್ಟೇ ಅಲ್ಲದೆ ತಮ್ಮ ತಂಡವನ್ನು ಪ್ಲೇ ಆಫ್ ಗೆ ಕೊಂಡೊಯ್ಯುವಲ್ಲಿ ಮಹತ್ವದ ಪಾತ್ರವನ್ನು ವಹಿಸಿದ್ದರು.


COMMERCIAL BREAK
SCROLL TO CONTINUE READING

ಆದಾಗ್ಯೂ ಅವರು ರನ್ ಗಳಿಸುವ ಕ್ರಮವನ್ನು ಹಲವಾರು ಆಟಗಾರರು ಟೀಕಿಸಿದ್ದಾರೆ.ರಾಹುಲ್ ಅವರು ರನ್ ಗಳಿಸಲು ಸಾಕಷ್ಟು ಸಮಯವನ್ನು ತೆಗೆದುಕೊಳ್ಳುತ್ತಾರೆ. ಕೆಲವೊಮ್ಮೆ 18, 20 ಓವರ್ ಗಳ ವರೆಗೆ ಆಡಿದರೂ ತಂಡವು ಸೋಲನ್ನು ಅನುಭವಿಸುತ್ತದೆ ಎಂದು ಮಾಜಿ ಆಟಗಾರರು ದೂರಿದ್ದಾರೆ.ಈಗ ಅಂತಹ ಆಟಗಾರರ ಸಾಲಿನಲ್ಲಿ ಪಾಕಿಸ್ತಾನದ ಮಾಜಿ ವಿಕೆಟ್ ಕೀಪರ್ ರಶೀಫ್ ಲತೀಫ್ ಕೂಡ ಸೇರಿದ್ದಾರೆ.


ಇದನ್ನು ಓದಿ: Vikrant Rona: ನೀವೂ ರಕ್ಕಮ್ಮನನ್ನು ಭೇಟಿಯಾಗಬಹುದು.. ಎಲ್ಲಿ? ಯಾವಾಗ? ಇಲ್ಲಿದೆ ನೋಡಿ


ಈ ಕುರಿತಾಗಿ ಮಾತನಾಡಿರುವ ರಶೀಫ್ ಲತೀಫ್ "ಅವರು ಈ ಮೊದಲು ಪಂಜಾಬ್ ಕಿಂಗ್ಸ್‌ಗಾಗಿ ಆಡುತ್ತಿರಲಿಲ್ಲವೇ? ಅವರು 15-18 ನೇ ಓವರ್‌ನವರೆಗೂ ಬ್ಯಾಟಿಂಗ್ ಮಾಡುತ್ತಿದ್ದರು, ಆದರೆ ಗ್ಲೆನ್ ಮ್ಯಾಕ್ಸ್‌ವೆಲ್ ಅವರಿಗೆ ಆಡಲು ಎರಡು ಎಸೆತಗಳು ಸಿಗುತ್ತಿತ್ತು, ಆದರೆ ತಂಡವು ಕ್ಯಾಲಿಫೈ ಆಗಲಿಲ್ಲ.ಅಲ್ಲಿ ಗೇಲ್ ಕೂಡ ಇದ್ದರು, ಆದರೆ ಅವರು ಕೊನೆಯಲ್ಲಿ ಆಡಿದರು.ಕೆ.ಎಲ್.ರಾಹುಲ್ ಉತ್ತಮ ಆಟಗಾರ ಎನ್ನುವುದರಲ್ಲಿ ಎರಡು ಮಾತಿಲ್ಲ. ಅವರು ಆಡಿರುವ ಪಿಚ್ ಗಳಲ್ಲಿಯೇ ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಮತ್ತು ಇಶಾನ್ ಕಿಶನ್ ರನ್ ಗಳಿಸಲು ಪರದಾಡಿದ್ದಾರೆ. ಕೆಲವೊಮ್ಮೆ ಅವರು ಆರಂಭಿಕ ಬ್ಯಾಟ್ ಮಾಡುವಾಗ, ಬ್ಯಾಟಿಂಗ್ ಮಾಡುವುದು ಅವರ ಜವಾಬ್ದಾರಿ ಎಂದು ಅವರು ಭಾವಿಸುತ್ತಾರೆ" ಎಂದು ಲತೀಫ್ ಯೂಟ್ಯೂಬ್ ಶೋ 'ನಲ್ಲಿ ಹೇಳಿದರು.ವೈರಲ್ ಆಗ್ತಾ ಇದೆ ಕಾರ್ತಿಕ್ ಜಯರಾಂ ಮತ್ತು ಅಪರ್ಣಾ ಫೋಟೋಗಳು...! ಅಸಲಿ ವಿಚಾರವೇನು ಗೊತ್ತೇ?


"ರಾಹುಲ್ ರೋಹಿತ್ ಶರ್ಮಾ ಅವರಂತಲ್ಲ. ರೋಹಿತ್ ಮತ್ತು ಕೊಹ್ಲಿ ಬೇರೆ ಲೀಗ್‌ಗೆ ಸೇರಿದವರು, ಆದರೆ ರಾಹುಲ್ ಕೂಡ ವಿಶೇಷ ಆಟಗಾರ. ಆದರೆ ಅವರು ಸ್ವಲ್ಪ ಸುಧಾರಿಸಬೇಕು ಎಂದು ಹೇಳಿದರು. ಅವರು ತಮ್ಮ ಇಚ್ಛೆಯಂತೆ ಕೆಲವು ಡಾಟ್ ಬಾಲ್‌ಗಳನ್ನು ಆಡುತ್ತಾರೆ. ಅವರು ಬೃಹತ್ ಮೊತ್ತವನ್ನು ಗಳಿಸುತ್ತಾರೆ, ಅದೇ ರೀತಿಯಾಗಿ ಅವರು ಹೆಚ್ಚಿನ ಎಸೆತಗಳನ್ನು ಎದುರಿಸುತ್ತಾರೆ. ಇದನ್ನು ನಾನು ಪಂಜಾಬ್ ತಂಡದ ಪರವಾಗಿ ಆಡುತ್ತಿದ್ದ ಸಂದರ್ಭದಲ್ಲಿ ಗಮನಿಸಿದೆ' ಎಂದು ಅವರು ಹೇಳಿದರು.


ಇದನ್ನು ಓದಿ: 


ಜೂನ್ 9 ರಂದು ದೆಹಲಿಯಲ್ಲಿ ನಡೆಯಲಿರುವ ಟಿ20 ಸರಣಿಯಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಟಿ 20 ಸರಣಿಯಲ್ಲಿ ಅವರು ಭಾರತ ತಂಡವನ್ನು ಮುನ್ನೆಡೆಸುತ್ತಿರುವುದರಿಂದ ಈಗ ಅವರಿಗೆ ವಿಶ್ರಾಂತಿ ಪಡೆಯಲು ಹೆಚ್ಚಿನ ಸಮಯವಿಲ್ಲ.ಕಳೆದ ಬಾರಿ ರಾಹುಲ್ ನೇತೃತ್ವದ ಭಾರತ ತಂಡವು 3 ಪಂದ್ಯಗಳ ಏಕದಿನ ಸರಣಿಯಲ್ಲಿ 3-0 ಅಂತರದಲ್ಲಿ ಸೋತಿತ್ತು.ಈಗ ಕೆ.ಎಲ್.ರಾಹುಲ್ ಗೆ ತಂಡದ ನಾಯಕನಾಗಿ ಮೊದಲ ಸರಣಿ ಗೆಲ್ಲುವ ಅನಿವಾರ್ಯತೆ ಎದುರಾಗಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.