ಕನ್ನಡಿಗ ಕೆ.ಎಲ್.ರಾಹುಲ್ ಪಾಕ್ ಗೆ ಅಪಾಯಕಾರಿಯಾಗಲಿದ್ದಾರೆ ಎಂದ ಮ್ಯಾಥ್ಯೂ ಹೇಡನ್
ಟಿ 20 ವಿಶ್ವಕಪ್ 2021 ರ ದುಬೈನಲ್ಲಿ ಭಾನುವಾರ (ಅಕ್ಟೋಬರ್ 24) ನಡೆಯಲಿರುವ ಭಾರತ ಮತ್ತು ಪಾಕ್ ನಂತಹ ಡಾಗ್‌ಫೈಟ್ ಪಂದ್ಯಗಳಲ್ಲಿ ನಾಯಕತ್ವ ಪ್ರಮುಖವಾಗಿರುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮತ್ತು ಪ್ರಸ್ತುತ ಪಾಕಿಸ್ತಾನದ ಬ್ಯಾಟಿಂಗ್ ತರಬೇತುದಾರರಾಗಿರುವ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.
ನವದೆಹಲಿ: ಟಿ 20 ವಿಶ್ವಕಪ್ 2021 ರ ದುಬೈನಲ್ಲಿ ಭಾನುವಾರ (ಅಕ್ಟೋಬರ್ 24) ನಡೆಯಲಿರುವ ಭಾರತ ಮತ್ತು ಪಾಕ್ ನಂತಹ ಡಾಗ್‌ಫೈಟ್ ಪಂದ್ಯಗಳಲ್ಲಿ ನಾಯಕತ್ವ ಪ್ರಮುಖವಾಗಿರುತ್ತದೆ ಎಂದು ಆಸ್ಟ್ರೇಲಿಯಾದ ಮಾಜಿ ಆರಂಭಿಕ ಆಟಗಾರ ಮತ್ತು ಪ್ರಸ್ತುತ ಪಾಕಿಸ್ತಾನದ ಬ್ಯಾಟಿಂಗ್ ತರಬೇತುದಾರರಾಗಿರುವ ಮ್ಯಾಥ್ಯೂ ಹೇಡನ್ ಹೇಳಿದ್ದಾರೆ.
ಭಾರತ ಮತ್ತು ಪಾಕ್ ನಂತಹ ದೊಡ್ಡ ಪಂದ್ಯದಲ್ಲಿ ತಪ್ಪುಗಳ ಅಂತರವು ತುಂಬಾ ಕಡಿಮೆ ಇರುತ್ತದೆ ಆದ್ದರಿಂದ ನಾಯಕತ್ವವು ಪಂದ್ಯದ ಫಲಿತಾಂಶಕ್ಕೆ ಪ್ರಮುಖವಾಗಿರುತ್ತದೆ ಎಂದರು.ವೈಯಕ್ತಿಕ ಪ್ರದರ್ಶನಗಳು ನಿರೀಕ್ಷಿತ ಮಟ್ಟದಲ್ಲಿ ಇಲ್ಲದಿದ್ದಾಗ ತಮ್ಮ ಐಪಿಎಲ್ ಫ್ರಾಂಚೈಸಿಗಳನ್ನು ಯಶಸ್ವಿಯಾಗಿ ಮುನ್ನಡೆಸಿದ ಎಂಎಸ್ ಧೋನಿ ಮತ್ತು ಇಯೋನ್ ಮಾರ್ಗನ್ ಅವರ ಉದಾಹರಣೆಗಳನ್ನು ಹೇಡನ್ ಉಲ್ಲೇಖಿಸಿದ್ದಾರೆ.
ಇದನ್ನೂ ಓದಿ: T20 World Cup 2021: ಕನ್ನಡಿಗ ಕೆ.ಎಲ್.ರಾಹುಲ್ ಬ್ಯಾಟಿಂಗ್ ಬಗ್ಗೆ ಕೊಹ್ಲಿ ಹೇಳಿದ್ದೇನು?
"ಅವರ ವೈಯಕ್ತಿಕ ಪ್ರದರ್ಶನಗಳು ಈ ಹಿಂದೆ ಅವರ ಅಂಕಿಅಂಶಗಳ ದಾಖಲೆಗಳಂತೆ ಉತ್ತಮವಾಗಿರಲಿಲ್ಲ, ಆದರೆ ಅವರು ತಮ್ಮ ತಂಡವನ್ನು ಮುನ್ನಡೆಸಿದ ರೀತಿ ಮತ್ತು ಯುಎಇ ಪರಿಸ್ಥಿತಿಗಳಲ್ಲಿ ಐಪಿಎಲ್ ಫೈನಲ್ ತಲುಪುವಲ್ಲಿ ತಮ್ಮ ತಂಡಗಳು ಪ್ರಮುಖ ಪಾತ್ರವಹಿಸಿವೆ" ಎಂದು ಹೇಡನ್ ಮಾಧ್ಯಮ ಸಂವಾದದಲ್ಲಿ ಹೇಳಿದರು.
ಇದನ್ನೂ ಓದಿ: ಒಂದೇ ಕರೆ ಮೂಲಕ ಮನೆ ಬಾಗಿಲಿಗೆ ಬರುತ್ತದೆ 20 ಸಾವಿರ ರೂಪಾಯಿ : SBI ನೀಡುತ್ತಿದೆ ವಿಶೇಷ ಸೌಲಭ್ಯ
ಭಾರತದ ವಿರುದ್ಧದ ಪಂದ್ಯದಲ್ಲಿ ಪಾಕಿಸ್ತಾನದ ನಾಯಕ ಬಾಬರ್ ಅಜಮ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಡನ್ ಹೇಳಿದರು."ಕ್ಯಾಪ್ಟನ್ ಮತ್ತು ಬ್ಯಾಟ್ಸ್‌ಮನ್ ಆಗಿ ಅವರ ಮೇಲೆ ಹೆಚ್ಚುವರಿ ಒತ್ತಡವಿರುತ್ತದೆ ಏಕೆಂದರೆ ಅವರು ಗುರಿಯಾಗುತ್ತಾರೆ. ಆದ್ದರಿಂದ ಈಗ ಅವರು ನಾಯಕನಾಗಿ ಅಲ್ಲದೆ ಬ್ಯಾಟಿಂಗ್ ಮೂಲಕವು ತಮ್ಮ ಜವಾಬ್ದಾರಿಯನ್ನು ಪೂರೈಸಬೇಕು ಎಂದು ಹೇಳಿದರು.
ಇದನ್ನೂ ಓದಿ: ಜೋಡಿಯ ಕೊಲೆಗಾರನ ವಿರುದ್ದ ಪೋಲಿಸ್ ಠಾಣೆ ಮೆಟ್ಟಿಲೇರಿದ ನಾಗರಹಾವು, ಮೈ ಜುಮ್ಮೆನಿಸುತ್ತದೆ ಇಡೀ ಪ್ರಕರಣ
ಹಲವು ವರ್ಷಗಳಿಂದ ಭಾರತೀಯ ಕ್ರಿಕೆಟ್ ಅನ್ನು ಅತ್ಯಂತ ನಿಕಟವಾಗಿ ಅನುಸರಿಸುತ್ತಿರುವ ಹೇಡನ್, ರಾಹುಲ್ ಮತ್ತು ರಿಷಭ್ ಪಂತ್ ಪಾಕಿಸ್ತಾನಕ್ಕೆ ಪಂದ್ಯದಲ್ಲಿ ಅಪಾಯಕಾರಿಯಾಗಲಿದ್ದಾರೆ ಎಂದು ಹೇಳಿದರು."ಹೆಚ್ಚು ಕಡಿಮೆ ನಾನು ಕೆ.ಎಲ್ ರಾಹುಲ್(K L Rahul) ಬೆಳೆಯುವುದನ್ನು ನೋಡಿದ್ದೇನೆ ಮತ್ತು ಅವನು ಪಾಕಿಸ್ತಾನಕ್ಕೆ ದೊಡ್ಡ ಬೆದರಿಕೆಯಾಗಿದ್ದಾನೆ. ಅವನು ಹುಡುಗನಾಗಿ ಬೆಳೆಯುವುದನ್ನು ನಾನು ನೋಡಿದ್ದೇನೆ. ಹೋರಾಟಗಳನ್ನು ಮತ್ತು ಕಡಿಮೆ ಸ್ವರೂಪದ ಆಟಗಳಲ್ಲಿ ಅವರ ಪ್ರಾಬಲ್ಯವನ್ನು ನಾನು ನೋಡಿದ್ದೇನೆ. ಎಂದು ಅಭಿಪ್ರಾಯಪಟ್ಟಿದ್ದಾರೆ.
ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.