ಜೋಡಿಯ ಕೊಲೆಗಾರನ ವಿರುದ್ದ ಪೋಲಿಸ್ ಠಾಣೆ ಮೆಟ್ಟಿಲೇರಿದ ನಾಗರಹಾವು, ಮೈ ಜುಮ್ಮೆನಿಸುತ್ತದೆ ಇಡೀ ಪ್ರಕರಣ

ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಲು ಬಂದವರ ದಂಡೇ  ನೆರೆದಿತ್ತು. ಪ್ರತಿಯೊಬ್ಬರೂ ತಮ್ಮದೇ ಆದ ದೂರುಗಳೊಂದಿಗೆ ಅಲ್ಲಿಗೆ ಬಂದಿದ್ದರು. ಅದೇ ಸಮಯದಲ್ಲಿ, ಆ ಸ್ಥಳದಲ್ಲಿ ನಾಗರ ಜೋಡಿ  ಕೂಡಾ ಸುತ್ತಾಡುತ್ತಿತ್ತು.

Written by - Ranjitha R K | Last Updated : Oct 21, 2021, 07:14 PM IST
  • ಸರ್ಪದ ಮೇಲೆ ಹರಿದ ಕಾರು
  • ಜೋಡಿ ಸರ್ಪಗಳಲ್ಲಿ ಒಂದರ ಸಾವು
  • ಪೊಲೀಸ್ ಠಾಣೆ ಮೆಟ್ಟಿಲೇರಿದ ನಾಗಪ್ಪ
ಜೋಡಿಯ ಕೊಲೆಗಾರನ ವಿರುದ್ದ ಪೋಲಿಸ್  ಠಾಣೆ ಮೆಟ್ಟಿಲೇರಿದ ನಾಗರಹಾವು, ಮೈ ಜುಮ್ಮೆನಿಸುತ್ತದೆ ಇಡೀ ಪ್ರಕರಣ

ಅಜಮ್‌ಘಢ : ಹಾವಿನ ದ್ವೇಷದ ಕಥೆಯನ್ನು (Snake revenge) ಸಿನಿಮಾಗಳಲ್ಲಿ ಧಾರಾವಾಹಿಗಳಲ್ಲಿ ನೋಡಿರಬಹುದು. ಆದರೆ,  ಅಜಮ್‌ಘಢದಲ್ಲಿ ನಡೆದಿರುವ ಈ ಘಟನೆ ಕೇಳಿದರೆ ಮೈ ಜುಮ್ಮೆನ್ನುತ್ತದೆ. ತನ್ನ ಜೋಡಿಯ ಸಾವಿನ ನಂತರ ಕೊಲೆಗಾರನನ್ನು ಹುಡುಕಿಕೊಂಡು ನಾಗಪ್ಪ  ಠಾಣೆ ಮೆಟ್ಟಿಲೇರಿದ  ಪ್ರಕರಣ ಇದು. 

ಬಹಳ ದೂರದವರೆಗೆ ಕಾರನ್ನು ಬೆನ್ನತ್ತಿದ ನಾಗರಾಜ :
ಕೆಲವು ದಿನಗಳ ಹಿಂದೆ ಪೊಲೀಸ್ ಠಾಣೆಯಲ್ಲಿ (Police station) ದೂರು ದಾಖಲಿಸಲು ಬಂದವರ ದಂಡೇ  ನೆರೆದಿತ್ತು. ಪ್ರತಿಯೊಬ್ಬರೂ ತಮ್ಮದೇ ಆದ ದೂರುಗಳೊಂದಿಗೆ ಅಲ್ಲಿಗೆ ಬಂದಿದ್ದರು. ಅದೇ ಸಮಯದಲ್ಲಿ, ಆ ಸ್ಥಳದಲ್ಲಿ ನಾಗರ ಜೋಡಿ (Cobra) ಕೂಡಾ ಸುತ್ತಾಡುತ್ತಿತ್ತು. ಆದರೆ,  ಪೊಲೀಸ್ ಠಾಣೆಗೆ  ದೂರು ನೀಡಲು ಬಂದಿದ್ದವರು ಹಿಂದಿರುಗುವಾಗ ಈ ನಾಗರ ಜೋಡಿಯ ಒಂದು ಹಾವಿನ ಮೇಲೆ ಕಾರು ಹರಿಸಿದ್ದಾರೆ. ಅ ಹಾವು ಸ್ಥಳದಲ್ಲಿಯೇ ಸಾವನ್ನಪ್ಪಿದೆ. ಇದಾದ ನಂತರ, ಬದುಕುಳಿದ ಹಾವು ಬಹಳ ದೂರದವರೆಗೆ ಆ ಕಾರನ್ನು ಹಿಂಬಾಲಿಸಿತ್ತಂತೆ.  

ಇದನ್ನೂ ಓದಿ : ನಟಿ ಅನನ್ಯ ಪಾಂಡೆ ಮೊಬೈಲ್, ಲ್ಯಾಪ್‌ಟಾಪ್ ಡ್ರಗ್ಸ್ ನಿಯಂತ್ರಣ ಏಜೆನ್ಸಿ ವಶಕ್ಕೆ

 ಪೊಲೀಸ್ ಠಾಣೆಯಲ್ಲಿ ಹೆಡೆಯೆತ್ತಿ ಕುಳಿತ ನಾಗರ :
ಈ ಮಧ್ಯೆ, ರಸ್ತೆಯಲ್ಲಿ ಹಾವು ಸತ್ತಿರುವುದನ್ನು ನೋಡಿದ, ಕೆಲವರು ಆ ಹಾವನ್ನು ಪೊಲೀಸ್ (Police) ಠಾಣೆಯ ಬಳಿಯ ಜಮೀನಿನಲ್ಲಿ ಹೂತು ಹಾಕಿದ್ದರು. ಇಷ್ಟಾದ ಬಳಿಕ ಹಾವು ಇನ್ನು ಆ ಸ್ಥಳಕ್ಕೆ ಬರಲಿಕ್ಕಿಲ್ಲ ಎಂದೇ ಅಲ್ಲಿನ ಜನ ಭಾವಿಸಿದ್ದರು. ಆದರೆ,  ಕೆಲವು ದಿನಗಳ ನಂತರ ನಾಗರಹಾವು (Snake) ಸರ್ಪವನ್ನು ಸಮಾಧಿ ಮಾಡಿದ ಸ್ಥಳದಲ್ಲಿ ಕಾಣಿಸಿಕೊಂಡಿದೆ.  ಸ್ವಲ್ಪ ಸಮಯ ಅಲ್ಲೇ ಸರಿದಾಡುತ್ತಿದ್ದ ಹಾವು, ನಂತರ ಪೊಲೀಸ್ ಠಾಣೆ ತಲುಪಿದೆ. ಪೊಲೀಸ್ ಠಾಣೆಗೆ ಬಂದಿರುವ ಹಾವನ್ನು ಕಂಡು ಅಲ್ಲಿದ್ದವರ ಕೈ ಕಾಲು ನಡುಗಿದ್ದಂತೂ ಸುಳ್ಳಲ್ಲ. ಅಲ್ಲಿದ್ದ ಕೆಲವರು ಈ ಹಾವನ್ನು ಕೂಡಾ ಕೊಲ್ಲುವ ಬಗ್ಗೆಯೂ ಮಾತನಾಡಿದ್ದರು.  ಆದರೆ ಇನ್ಸ್‌ಪೆಕ್ಟರ್  ಹಾಗೆ ಮಾಡದಂತೆ ಎಲ್ಲರನ್ನೂ ತಡೆದಿದ್ದಾರೆ.  

ಹಾವನ್ನು ದೂರದ ಕಾಡಿಗೆ ಬಿಟ್ಟ ಅಧಿಕಾರಿಗಳು : 
ಇಷ್ಟೆಲ್ಲಾ ಆದ ನಾಗರಹಾವನ್ನು ಹಿಡಿದು ದೂರದ ಕಾಡಿಗೆ ಬಿಡಲಾಯಿತು. ಇದೀಗ ಈ ನಾಗ ನಾಗಿಣಿಯ ಕತೆ ಈ ಪರಿಸರದಲ್ಲಿ ಭಾರೀ ಚರ್ಚೆಯ ವಿಷಯವಾಗಿದೆ. 

ಇದನ್ನೂ ಓದಿ : ರೈತರಿಗೆ ಪ್ರತಿಭಟನೆ ಮಾಡುವ ಹಕ್ಕಿದೆ, ಆದರೆ ಅನಿರ್ದಿಷ್ಟವಾಗಿ ರಸ್ತೆಗಳನ್ನು ನಿರ್ಬಂಧಿಸಲು ಸಾಧ್ಯವಿಲ್ಲ: ಸುಪ್ರೀಂ ಕೋರ್ಟ್

ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಝೀ ಹಿಂದೂಸ್ತಾನ್ ಕನ್ನಡ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3loQYe 
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.
  

 

More Stories

Trending News