ಪ್ರಸ್ತುತ ನಡೆಯುತ್ತಿರುವ ಇಂಡಿಯನ್ ಪ್ರೀಮಿಯರ್ ಲೀಗ್ 2022 ರಲ್ಲಿ ಲಕ್ನೋ ಸೂಪರ್ ಜೈಂಟ್ಸ್ ಫ್ರಾಂಚೈಸ್‌ನ ನಾಯಕತ್ವ ವಹಿಸಿರುವ ಕೆ.ಎಲ್ ರಾಹುಲ್ ಉತ್ತಮ ಪ್ರದರ್ಶನ ನೀಡುತ್ತಿದ್ದಾರೆ. ಇದೀಗ ಇವರ ಆಟದ ವೈಖರಿ ಮೂಲಕ ಜನಮನ ಗೆದ್ದಿದ್ದಲ್ಲದೆ, ವಿರಾಟ್‌ ಕೊಹ್ಲಿಯವರ ದಾಖಲೆಯನ್ನು ಕನ್ನಡಿಗ ರಾಹುಲ್‌ ಮುರಿದಿದ್ದಾರೆ. 


COMMERCIAL BREAK
SCROLL TO CONTINUE READING

ಕೆ.ಎಲ್.ರಾಹುಲ್ ಅವರು​ ಮಂಗಳವಾರ ನಡೆದ ರಾಯಲ್‌ ಚಾಲೆಂಜರ್ಸ್‌ ಬೆಂಗಳೂರು ವಿರುದ್ಧದ ಪಂದ್ಯದಲ್ಲಿ 6,000 ರನ್​ ಪೂರೈಸಿದ್ದಾರೆ. ಈ ಮೂಲಕ ಚುಟುಕು ಕ್ರಿಕೆಟ್​ನಲ್ಲಿ ವೇಗವಾಗಿ ಈ ಮೈಲಿಗಲ್ಲು ದಾಟಿದ ಭಾರತೀಯ ಬ್ಯಾಟರ್​ ಎಂಬ ದಾಖಲೆಗೆ ಪಾತ್ರರಾಗಿದ್ದಾರೆ. 


ಇದನ್ನು ಓದಿ: DC vs PBKS ಪಂದ್ಯಕ್ಕೆ ಕೊರೋನಾ ಕಾಟ : ದೆಹಲಿ ಆಟಗಾರನಿಗೆ ಕೋವಿಡ್ ಪಾಸಿಟಿವ್!


ಈ ದಾಖಲೆಯನ್ನು ಕೆ.ಎಲ್.ರಾಹುಲ್​  ಅವರು ತಮ್ಮ 179 ನೇ ಪಂದ್ಯದಲ್ಲಿ ಪೂರೈಸಿದ್ದಾರೆ. ಕನ್ನಡಿಗನಿಗೂ ಮುನ್ನ ಭಾರತ ತಂಡದ ಮಾಜಿ ನಾಯಕ ವಿರಾಟ್​ ಕೊಹ್ಲಿ 184 ಇನ್ನಿಂಗ್ಸ್​ಗಳಲ್ಲಿ 6 ಸಾವಿರ ರನ್​ ಗಡಿ ದಾಟಿದ್ದರು. ಇದೀಗ ಲಕ್ನೋ ಸೂಪರ್ ಜೈಂಟ್ಸ್ ತಂಡದ ನಾಯಕ  ಟಿ-20 ಕ್ರಿಕೆಟ್​ನಲ್ಲಿ ವೇಗವಾಗಿ 6 ಸಾವಿರ ರನ್​ ಗಳಿಸಿದ್ದಾರೆ. ಇನ್ನು ಈ ಪಟ್ಟಿಯಲ್ಲಿ ವೆಸ್ಟ್​ ಇಂಡೀಸ್​ ಕ್ರಿಕೆಟ್‌ ತಂಡದ ಗ್ರಿಸ್​ ಗೇಲ್ (162 ಇನ್ನಿಂಗ್ಸ್) ಮತ್ತು ಪಾಕಿಸ್ತಾನ ತಂಡದ ನಾಯಕ ಬಾಬರ್ ಅಜಮ್(165) ಇದ್ದಾರೆ. ರಾಹುಲ್ ಪ್ರಸ್ತುತ ಇಂಡಿಯನ್ ಪ್ರೀಮಿಯರ್ ಲೀಗ್​ನಲ್ಲಿ ಅತ್ಯುತ್ತಮ ಫಾರ್ಮ್​ನಲ್ಲಿದ್ದು, ರಾಜಸ್ಥಾನ್​ ರಾಯಲ್ಸ್​ನ ಜಾಸ್​ ಬಟ್ಲರ್​ ಹೊರತುಪಡಿಸಿ ಶತಕ ಸಿಡಿಸಿರುವ ಬ್ಯಾಟರ್​ ಎನಿಸಿಕೊಂಡಿದ್ದಾರೆ. 


ಇದನ್ನು ಓದಿ: Mumbai Indians : ಮುಂಬೈ ಟೀಂಗೆ ಎಂಟ್ರಿ ನೀಡಲಿದ್ದಾನೆ ಮಾರಣಾಂತಿಕ ಬೌಲರ್‌! 


ಡೆಲ್ಲಿ ಕ್ಯಾಪಿಟಲ್ಸ್ - ಪಂಜಾಬ್ ಕಿಂಗ್ಸ್ ಪಂದ್ಯ:
ಇಂದು ಮುಂಬೈನ ಬ್ರಬೋರ್ನ್‌ ಕ್ರೀಡಾಂಗಣದಲ್ಲಿ ನಡೆಯಲಿರುವ ಐಪಿಎಲ್‌ನ 32ನೇ ಪಂದ್ಯದಲ್ಲಿ ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ತಂಡಗಳು ಮುಖಾಮುಖಿಯಾಗಲಿವೆ. ಆದರೆ ಡೆಲ್ಲಿ ತಂಡದ ಆಟಗಾರ ಮಿಚೆಲ್ ಮಾರ್ಷ್ ಕೊರೊನಾ ಸೋಂಕಿಗೆ ತುತ್ತಾಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಹಿನ್ನೆಲೆಯಲ್ಲಿ ಹೆಚ್ಚಿನ ಮುಂಜಾಗೃತಾ ಕ್ರಮಗಳನ್ನು ಕೈಗೊಳ್ಳಲಾಗಿದೆ. 


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.