DC vs PBKS ಪಂದ್ಯಕ್ಕೆ ಕೊರೋನಾ ಕಾಟ : ದೆಹಲಿ ಆಟಗಾರನಿಗೆ ಕೋವಿಡ್ ಪಾಸಿಟಿವ್!

ದೆಹಲಿ ಕ್ಯಾಪಿಟಲ್ಸ್ ತಂಡದ ಒಬ್ಬ ಆಟಗಾರನಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಇಂದು ನಡೆಯಲಿರುವ ಪಂದ್ಯದ ಮೇಲೆ ಬಿಕ್ಕಟ್ಟಿನ ವಾತಾವರಣ ಸೃಷ್ಟಿಯಾಗಿದೆ.

Written by - Channabasava A Kashinakunti | Last Updated : Apr 20, 2022, 06:34 PM IST
  • ಈ ಆಟಗಾರನಿಗೆ ಕೊರೋನಾ ಸೋಂಕು
  • ದೆಹಲಿ ಕ್ಯಾಪಿಟಲ್ಸ್ ಕ್ಯಾಂಪ್‌ನಲ್ಲಿ ಕೊರೋನಾ ಸ್ಫೋಟ
  • ಟಿಮ್ ಸೀಫರ್ಟ್ ಕೊರೋನಾ ಪಾಸಿಟಿವ್ ಬಂದ ಕಾರಣ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿವೆ.
DC vs PBKS ಪಂದ್ಯಕ್ಕೆ ಕೊರೋನಾ ಕಾಟ : ದೆಹಲಿ ಆಟಗಾರನಿಗೆ ಕೋವಿಡ್ ಪಾಸಿಟಿವ್! title=

Tim Seifert tested positive for covid -19 PBKS vs DC : ಐಪಿಎಲ್ 2022 ರ 32ನೇ ಪಂದ್ಯ ಇಂದು (20 ಏಪ್ರಿಲ್ ರಂದು) ಡೆಲ್ಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವೆ ನಡೆಯಲಿದೆ. ಆದರೆ ಅದಕ್ಕೂ ಮೊದಲು ದೆಹಲಿ ಕ್ಯಾಪಿಟಲ್ಸ್ ತಂಡದ ಒಬ್ಬ ಆಟಗಾರನಿಗೆ ಕೊರೋನಾ ಪಾಸಿಟಿವ್ ಬಂದಿದೆ. ಹೀಗಾಗಿ ಇಂದು ನಡೆಯಲಿರುವ ಪಂದ್ಯದ ಮೇಲೆ ಬಿಕ್ಕಟ್ಟಿನ ವಾತಾವರಣ ಸೃಷ್ಟಿಯಾಗಿದೆ.

ಈ ಆಟಗಾರನಿಗೆ ಕೊರೋನಾ ಸೋಂಕು

ಡೆಲ್ಲಿ ಕ್ಯಾಪಿಟಲ್ಸ್‌ನ ಟಿಮ್ ಸೀಫರ್ಟ್ ಗೆ ಕೊರೋನಾ ಪಾಸಿಟಿವ್ ಕಂಡು ಬಂದ ಎರಡನೇ ಆಟಗಾರನಾಗಿದ್ದಾನೆ. ಅವರಿಗಿಂತ ಮೊದಲು ಮಿಚೆಲ್ ಮಾರ್ಷ್ ಗೂ ಕೊರೋನಾ ಪಾಸಿಟಿವ್ ಆಗಿದ್ದಾರೆ. ಹೆಚ್ಚುತ್ತಿರುವ ಕರೋನಾ ಪ್ರಕರಣಗಳಿಂದಾಗಿ, ಬಿಸಿಸಿಐ ದೆಹಲಿ ಕ್ಯಾಪಿಟಲ್ಸ್ ಮತ್ತು ಪಂಜಾಬ್ ಕಿಂಗ್ಸ್ ನಡುವಿನ ಪಂದ್ಯದ ಸ್ಥಳವನ್ನೂ ಬದಲಾಯಿಸಿದೆ. ಇದರಿಂದ ಆಟಗಾರರು ದೀರ್ಘ ಪ್ರಯಾಣವನ್ನು ಕಡಿಮೆ ಆಗಬಹುದು ಮತ್ತು ಕೊರೋನಾ ಏಕಾಏಕಿ ತಡೆಯಬಹುದು, ಆದರೆ ಈಗ ಅದು ಹಾಗೆ ಕಾಣುತ್ತಿಲ್ಲ.

ಇದನ್ನೂ ಓದಿ : Mumbai Indians : ಮುಂಬೈ ಟೀಂಗೆ ಎಂಟ್ರಿ ನೀಡಲಿದ್ದಾನೆ ಮಾರಣಾಂತಿಕ ಬೌಲರ್‌! 

ದೆಹಲಿ ಕ್ಯಾಪಿಟಲ್ಸ್ ಕ್ಯಾಂಪ್‌ನಲ್ಲಿ ಕೊರೋನಾ ಸ್ಫೋಟ

ಡೆಲ್ಲಿ ಕ್ಯಾಪಿಟಲ್ಸ್‌ನ ಸದಸ್ಯರಲ್ಲಿ, ಫಿಸಿಯೋ ಪ್ಯಾಟ್ರಿಕ್ ಫರ್ಹತ್, ಕ್ರೀಡಾ ಚಿಕಿತ್ಸಕ ಚೇತನ್ ಕುಮಾರ್, ಆಸ್ಟ್ರೇಲಿಯಾದ ಆಟಗಾರ ಮಿಚೆಲ್ ಮಾರ್ಷ್, ಡಾ ಅಭಿಜಿತ್ ಸಾಲ್ವಿ ಮತ್ತು ಸಾಮಾಜಿಕ ಮಾಧ್ಯಮ ತಂಡದ ಸದಸ್ಯ ಆಕಾಶ್ ಮಾನೆ ಅವರಿಗೆ ಕೊರೋನಾ ಪಾಸಿಟಿವ್ ಕಂಡುಬಂದಿದೆ. ಈ ಕುರಿತು ಮಾತನಾಡಿದ ಅವರು, 'ಕೋವಿಡ್ ಪಾಸಿಟಿವ್ ಪ್ರಕರಣದ ದೃಷ್ಟಿಯಿಂದ, ಎಲ್ಲಾ ಆಟಗಾರು ಪ್ರತ್ಯೇಕವಾಗಿ ಮತ್ತು ವೈದ್ಯಕೀಯ ವೀಕ್ಷಣೆಯಲ್ಲಿದ್ದಾರೆ. 6 ಅಥವಾ 7 ನೇ ದಿನ ಅವರನ್ನು ಪರೀಕ್ಷಿಸಲಾಗುವುದು ಮತ್ತು ಎರಡೂ ಟೆಸ್ಟ್ ಗಳು ನೆಗೆಟಿವ್ ಎಡಿಎ ನಂತರ, ಅವರನ್ನು ದೆಹಲಿ ಕ್ಯಾಪಿಟಲ್ಸ್‌ನ ಬಯೋ ಬಬಲ್‌ನಲ್ಲಿ ಕಾಣಿಸಿಕೊಳ್ಳಲು ಅನುಮತಿಸಲಾಗುತ್ತದೆ. ಈಗ ಆಟಗಾರ ಟಿಮ್ ಸೀಫರ್ಟ್ ಕೊರೋನಾ ಪಾಸಿಟಿವ್ ಬಂದ ಕಾರಣ ಡೆಲ್ಲಿ ಕ್ಯಾಪಿಟಲ್ಸ್‌ ತಂಡದಲ್ಲಿ ಆತಂಕ ಇನ್ನಷ್ಟು ಹೆಚ್ಚಾಗಿವೆ.

ಇದನ್ನೂ ಓದಿ : ಅತಿಯಾ ಶೆಟ್ಟಿ ಜತೆ ಹಸೆಮಣೆ ಏರಲು ಸಜ್ಜಾದ್ರಾ ಕ್ರಿಕೆಟಿಗ ಕೆ.ಎಲ್.ರಾಹುಲ್!?

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.

Trending News