ಹರಿಣಿಗಳಿಗೆ `ವಿರಾಟ` ತೋರಿದ ಕೊಹ್ಲಿ
ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (112) ಭರ್ಜರಿ ಶತಕದ ನೆರವಿನಿಂದ ಕಿಂಗ್ಸ್‌ಮೇಡ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಆರು ವಿಕೆಟ್ ಗಳಿಂದ ಸೋಲಿಸಿತು.ಆ ಮೂಲಕ ಭಾರತ ತಂಡವು 6 ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ ಕಾಯ್ದುಕೊಂಡಿದೆ.
ನವದೆಹಲಿ: ಭಾರತ ತಂಡದ ನಾಯಕ ವಿರಾಟ್ ಕೊಹ್ಲಿ (112) ಭರ್ಜರಿ ಶತಕದ ನೆರವಿನಿಂದ ಕಿಂಗ್ಸ್‌ಮೇಡ್ ನಲ್ಲಿ ದಕ್ಷಿಣ ಆಫ್ರಿಕಾ ತಂಡವನ್ನು ಆರು ವಿಕೆಟ್ ಗಳಿಂದ ಸೋಲಿಸಿತು.ಆ ಮೂಲಕ ಭಾರತ ತಂಡವು 6 ಪಂದ್ಯಗಳ ಸರಣಿಯಲ್ಲಿ 1–0ರ ಮುನ್ನಡೆ ಕಾಯ್ದುಕೊಂಡಿದೆ.
ಮೊದಲು ಬ್ಯಾಟ್ ಮಾಡಿದ ದಕ್ಷಿಣ ಆಫ್ರಿಕಾ ತಂಡವು 50 ಓವರ್‌ಗಳಲ್ಲಿ 8 ವಿಕೆಟ್‌ಗೆ 269ರನ್ ಗಳಿಸಿತು. ಈ ಗುರಿಯನ್ನು ಬೆನ್ನತ್ತಿದ ಕೊಹ್ಲಿ ಪಡೆ. 4 ವಿಕೆಟ್ ನಷ್ಟಕ್ಕೆ 45.3 ಓವರ್ ಗಳಲ್ಲಿ ಗೆಲುವಿನ ದಡ ತಲುಪಿತು.
ತಂಡದ ನಾಯಕ ವಿರಾಟ್ ಕೊಹ್ಲಿ ಮತ್ತು ಅಜಿಂಕ್ಯ ರಹಾನೆ (79) ಮೂರನೇ ವಿಕೆಟ್‌ಗೆ 189ರನ್ ಗಳ ಜೋತೆಯಾಟದಿಂದಾಗಿ ತಂಡವು ಸುಲಭವಾಗಿ ಗೆಲ್ಲಲು ನೆರವಾದರು. ಮೂರನೇ ಟೆಸ್ಟ್ ಪಂದ್ಯದಲ್ಲಿ ಗೆಲುವು ಸಾಧಿಸಿದ ನಂತರ ಭರ್ಜರಿ ಹುಮ್ಮಸ್ಸಿನಲ್ಲಿರುವ ಭಾರತ ತಂಡದ ಆಟಗಾರರು ಎಲ್ಲ ವಿಭಾಗಗಳಲ್ಲೂ ಉತ್ತಮ ಪ್ರದರ್ಶನ ನೀಡಿದರು.
ಭಾರತದ ಪರ ಕುಲದೀಪ್ ಯಾದವ್(3) ಹಾಗೂ ಯಜ್ವೆಂದ್ರ ಚಹಾಲ್(2 ) ವಿಕೆಟ್ ತೆಗೆದುಕೊಂಡರು.