ವಿರಾಟ್ ಕೊಹ್ಲಿ ಕೇವಲ ಮೈದಾನದ ರನ್ ಮಷಿನ್ ಅಲ್ಲ. ಸೋಶಿಯಲ್ ಮೀಡಿಯಾದಲ್ಲಿ ಇವರಿಗೆ ಇರೋ ಫಾಲೋವರ್ಸ್ ನೋಡಿದ್ರೆ ಅಲ್ಲಿಯೂ ಅವರು ಕಿಂಗ್ ಎನಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಕೇವಲ ಇನ್ ಸ್ಟಾಗ್ರಾಂನಿಂದ ಕೋಟ್ಯಾಂತರ ರೂ ಹಣ ಗಳಿಸುತ್ತಾರೆ ಎಂದರೆ ನೀವು ನಂಬಲೇಬೇಕು. ಏನೂ ಮಾಡದೆ ಇಷ್ಟೆಲ್ಲಾ ಹಣ ಹೇಗೆ ಸಂಪಾದಿಸುತ್ತಾರೆ ಎಂದು ತಿಳಿಯಬೇಕೇ? ಈ ವರದಿ ಓದಿ.


ಇದನ್ನೂ ಓದಿ: IND vs PAK: ಟೀಂ ಇಂಡಿಯಾದ ಬೌಲರ್ ಗಳನ್ನು ಹೀಯಾಳಿಸಿದ ಪಾಕಿಸ್ತಾನದ ಈ ವೇಗಿ!


ಮೂಲಗಳ ಪ್ರಕಾರ, ವಿರಾಟ್ ಕೊಹ್ಲಿ ಕಳೆದ ಒಂದು ವರ್ಷದಲ್ಲಿ 300 ಕೋಟಿಗೂ ಅಧಿಕ ಹಣವನ್ನು ಪಡೆದಿದ್ದಾರಂತೆ. ಇದರ ಜೊತೆಗೆ ಇನ್ ಸ್ಟಾಗ್ರಾಂನಲ್ಲಿ ಅತ್ಯಧಿಕ ಹಣ ಗಳಿಸಿರುವ ಜಗತ್ತಿನ ಸೆಲೆಬ್ರಿಟಿಗಳಲ್ಲಿ ಇವರು ಮೂರನೇ ಸ್ಥಾನ ಪಡೆದುಕೊಂಡಿದ್ದಾರೆ.


ಕೊಹ್ಲಿಯ ಒಂದು ಇನ್ ಸ್ಟಾಗ್ರಾಂ ಪೋಸ್ಟ್ ಬೆಲೆ ಬರೋಬ್ಬರಿ 8.69 ಕೋಟಿ ಎಂದರೆ ನಂಬಲೇಬೇಕು. ಕೊಹ್ಲಿ ಇದುವರೆಗೆ ತಮ್ಮ ಇನ್ ಸ್ಟಾಗ್ರಾಂ ಖಾತೆಯಲ್ಲಿ 1450 ಪೋಸ್ಟ್ ಗಳನ್ನು ಮಾಡಿದ್ದಾರೆ. ಇವರು ಅಪ್ಲೋಡ್ ಮಾಡುವ ಸ್ಪಾನ್ಸರ್ ಪೋಸ್ಟ್ ಬೆಲೆಯೆ 8.69 ಕೋಟಿ. ಇನ್ನು ಈ ಸ್ಪಾನ್ಸರ್ ಪೋಸ್ಟ್ ನಿಂದಲೇ ಕೊಹ್ಲಿ ತಿಂಗಳಿಗೆ ಸುಮಾರು 30 ಕೋಟಿ ಗಣ ಗಳಿಕೆ ಮಾಡುತ್ತಾರೆ.


ಇನ್ ಸ್ಟಾಗ್ರಾಂ ಕಥೆ ಒಂದು ಕಡೆಯಾದ್ರೆ ಟ್ವಿಟರ್ ನಲ್ಲಿ  ಕೊಹ್ಲಿ ಹಾಕುವ ಸ್ಪಾನ್ಸರ್ ಪೋಸ್ಟ್ ಬೆಲೆ  3.5 ಕೋಟಿ. ಇನ್ನು ಕೊಹ್ಲಿ ಟ್ವಿಟರ್ ನಲ್ಲಿ 50 ಕೋಟಿ ಫಾಲೋವರ್ಸ್ ಗಳನ್ನು ಹೊಂದಿದ್ದಾರೆ.


ಇದನ್ನೂ ಓದಿ:  IPL 2023ರ ಮಿನಿ ಹರಾಜು ಪ್ರಕ್ರಿಯೆಗೆ ಡೇಟ್ ಫಿಕ್ಸ್: ಎಲ್ಲಿ-ಯಾವಾಗ ನಡೆಯುತ್ತೆ ಗೊತ್ತಾ?


ಇನ್ನು ವಿರಾಟ್ ಕೊಹ್ಲಿ ಅವರ ವಾರ್ಷಿಕ ಆದಾಯ ಕೇಳಿದ್ರೆ ತಲೆ ಸುತ್ತುಬರೋದು ಖಂಡಿತ. ಬಿಸಿಸಿಐನ ಎ+ ಸೆಂಟ್ರಲ್ ಕಾಂಟ್ರಾಕ್ಟ್ ಆಟಗಾರನಾದ ಕೊಹ್ಲಿ ವರ್ಷಕ್ಕೆ 7 ಕೋಟಿ ರೂ ವೇತನ ಪಡೆಯುತ್ತಾರೆ. ಇನ್ನು ಐಪಿಎಲ್ ನಲ್ಲಿ ಆರ್ ಸಿ ಬಿ ತಂಡ 17 ಕೋಟಿ ವೇತನವನ್ನು ನೀಡುತ್ತದೆ. ಇದರ ಜೊತೆಗೆ ಅದೆಷ್ಟೋ ಬ್ರಾಂಡ್ ಗಳಿಗೆ ಅಂಬಾಸಿಡರ್ ಕೂಡ ಆಗಿದ್ದಾರೆ. ಇದರ ಜೊತೆಗೆ ಒಂದಿಷ್ಟು ಜಾಹೀರಾತುಗಳು. ಹೀಗೆ ಅನೇಕ ಮೂಲಕಗಳಿಂದ ಸುಮಾರು ಸಾವಿರ ಕೋಟಿಗೂ ಅಧಿಕ ಹಣವನ್ನು ವಾರ್ಷಿಕವಾಗಿ ಕೊಹ್ಲಿ ಸಂಪಾದನೆ ಮಾಡುತ್ತಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.