T20 World Cup 2022: ಈ 3 ಆಟಗಾರರು ಟೀಂ ಇಂಡಿಯಾದಿಂದ ಔಟ್, ರೋಹಿತ್ ಶರ್ಮಾಗೆ ಟೆನ್ಷನ್!

ಟಿ-20 ವಿಶ್ವಕಪ್ ಪ್ರಾರಂಭವಾಗುವ ಮೊದಲೇ ಟೀಂ ಇಂಡಿಯಾದ ಮೂವರು ಸ್ಟಾರ್ ಆಟಗಾರರು ತಂಡದಿಂದ ಹೊರಬಿದ್ದಿದ್ದಾರೆ. ಇದು ನಾಯಕ ರೋಹಿತ್ ಶರ್ಮಾರಿಗೆ ಟೆನ್ಷನ್ ಹೆಚ್ಚಿಸಿದೆ.

Written by - Puttaraj K Alur | Last Updated : Oct 16, 2022, 08:28 AM IST
  • ಟಿ-20 ವಿಶ್ವಕಪ್‍ಗೂ ಮುನ್ನ ಟೀಂ ಇಂಡಿಯಾಗೆ ಭಾದಿಸುತ್ತಿರುವ ಗಾಯದ ಸಮಸ್ಯೆ
  • ಗಾಯದ ಸಮಸ್ಯೆಯಿಂದ ಜಸ್ಪ್ರೀತ್ ಬುಮ್ರಾ, ದೀಪಕ್ ಚಾಹರ್ ಮತ್ತು ರವೀಂದ್ರ ಜಡೇಜಾ ಔಟ್
  • ನಾಯಕ ರೋಹಿತ್ ಶರ್ಮಾಗೆ ಟೆನ್ಷನ್ ಹೆಚ್ಚಿಸಿದ ಭಾರತ ತಂಡದ ಬೌಲಿಂಗ್ ವಿಭಾಗ
T20 World Cup 2022: ಈ 3 ಆಟಗಾರರು ಟೀಂ ಇಂಡಿಯಾದಿಂದ ಔಟ್, ರೋಹಿತ್ ಶರ್ಮಾಗೆ ಟೆನ್ಷನ್! title=
ಟೀಂ ಇಂಡಿಯಾಗೆ ಭಾದಿಸುತ್ತಿರುವ ಗಾಯದ ಸಮಸ್ಯೆ

ನವದೆಹಲಿ: 2007ರಲ್ಲಿ ಟೀಂ ಇಂಡಿಯಾ ಎಂ.ಎಸ್.ಧೋನಿ ನಾಯಕತ್ವದಲ್ಲಿ ಏಕೈಕ T20 ವಿಶ್ವಕಪ್ ಪ್ರಶಸ್ತಿಯನ್ನು ಮುಡಿಗೇರಿಸಿಕೊಂಡಿತ್ತು. ಆ ಬಳಿಕ ಭಾರತ ತಂಡಕ್ಕೆ ಟಿ-20 ವಿಶ್ವಕಪ್ ಗೆಲ್ಲಲು ಸಾಧ್ಯವಾಗಿಲ್ಲ. ಈ ಬಾರಿ ಭಾರತ ತಂಡದ ಕಮಾಂಡ್ ರೋಹಿತ್ ಶರ್ಮಾ ಕೈಯಲ್ಲಿದೆ. T20 ವಿಶ್ವಕಪ್ ಪ್ರಾರಂಭವಾಗುವ ಮೊದಲೇ ಭಾರತದ ಅನೇಕ ಸ್ಟಾರ್ ಆಟಗಾರರು ತಂಡದಿಂದ ಹೊರಬಿದ್ದಿದ್ದಾರೆ. ಹೀಗಿರುವಾಗ ನಾಯಕ ರೋಹಿತ್ ಶರ್ಮಾ ಮೇಲೆ ಒತ್ತಡ ಹೆಚ್ಚಾಗಿದೆ.    

ಈ ಮೂವರು ಆಟಗಾರರು ತಂಡದಿಂದ ಹೊರಕ್ಕೆ

ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಐಸಿಸಿ ಟಿ-20 ವಿಶ್ವಕಪ್‌ಗೂ ಮುನ್ನವೇ ಟೀಂ ಇಂಡಿಯಾಗೆ ಆಘಾತಗಳ ಮೇಲೆ ಆಘಾತವುಂಟಾಗಿದೆ. ಏಕೆಂದರೆ ಗಾಯದ ಸಮಸ್ಯೆ ಟೀಂ ಇಂಡಿಯಾದ ಆಟಗಾರರನ್ನು ಇನ್ನಿಲ್ಲದಂತೆ ಭಾದಿಸುತ್ತಿದೆ. ಇದರ ಪರಿಣಾಮ ನೇರವಾಗಿ ತಂಡದ ಮೇಲಾಗಲಿದ್ದು, ಹಿಟ್‍ಮ್ಯಾನ್‍ಗೆ ಟೆನ್ಷನ್ ಹೆಚ್ಚಿಸಿದೆ.  

ಇದನ್ನೂ ಓದಿ: World Cup: ಈ 4 ಅಪಾಯಕಾರಿ ಆಟಗಾರರಿಂದ ಟೀಂ ಇಂಡಿಯಾಗೆ ಕಂಟಕ: ಕಪ್ ಗೆಲ್ಲುವ ಕನಸನ್ನು ಒಡೆಯಬಹುದು!

ಆಸ್ಟ್ರೇಲಿಯಾ, ಇಂಗ್ಲೆಂಡ್ ಮತ್ತು ಪಾಕಿಸ್ತಾನದಂತಹ ದೇಶಗಳು ವಿಶ್ವಕಪ್‌ನಲ್ಲಿ ತಮ್ಮ ಅತ್ಯುತ್ತಮ ಆಟಗಾರರನ್ನು ಕಣಕ್ಕಿಳಿಸಲು ಸಿದ್ಧವಾಗಿವೆ. ಆದರೆ ಟೀಂ ಇಂಡಿಯಾದ ವೇಗದ ಬೌಲರ್ ಜಸ್ಪ್ರೀತ್ ಬುಮ್ರಾ (ಬೆನ್ನು ಮುರಿತ), ದೀಪಕ್ ಚಾಹರ್ (Back and Hip Joint Problem) ಮತ್ತು ಆಲ್ ರೌಂಡರ್ ರವೀಂದ್ರ ಜಡೇಜಾ (ಮೊಣಕಾಲು ಶಸ್ತ್ರಚಿಕಿತ್ಸೆಯಿಂದ ಚೇತರಿಸಿಕೊಳ್ಳುತ್ತಿದ್ದಾರೆ) ಗಾಯದ ಕಾರಣ ಮಹತ್ವದ ಟೂರ್ನಿಯಲ್ಲಿ ಆಡುತ್ತಿಲ್ಲ. ಈ ಬಗ್ಗೆ ರೋಹಿತ್ ಶರ್ಮಾ ಪತ್ರಿಕಾಗೋಷ್ಠಿಯಲ್ಲಿ ಕಳವಳ ವ್ಯಕ್ತಪಡಿಸಿದ್ದಾರೆ.

ಬುಮ್ರಾ ಇಲ್ಲದೆ ಆಡಲಿರುವ ಭಾರತ ತಂಡ

ಟೀಂ ಇಂಡಿಯಾದ ವೇಗದ ಬೌಲಿಂಗ್ ವಿಭಾಗಕ್ಕೆ ಜಸ್ಪ್ರೀತ್ ಬುಮ್ರಾ ದೊಡ್ಡ ಶಕ್ತಿಯಾಗಿದ್ದರು. ನಾಯಕ ರೋಹಿತ್ ಶರ್ಮಾ ಅವರ ನೆಚ್ಚಿನ ಆಟಗಾರನಾಗಿರುವ ಬುಮ್ರಾ ಅಪಾಯಕಾರಿ ಬೌಲಿಂಗ್‍ಗೆ ಹೆಸರುವಾಸಿ. T20, ODI, ಟೆಸ್ಟ್ ಮತ್ತು IPL ಹೀಗೆ ಎಲ್ಲಾ ಮಾದರಿಯ ಕ್ರಿಕೆಟ್‍ನಲ್ಲೂ ಬುಮ್ರಾ ತಮ್ಮ ಬೌಲಿಂಗ್ ಸಾಮರ್ಥ್ಯ ತೋರಿಸಿದ್ದಾರೆ. ಇದೀಗ ಬುಮ್ರಾ ಇಲ್ಲದೆ ಭಾರತ ತಂಡ ಟಿ-20 ವಿಶ್ವಕಪ್ ಆಡಲು ಸಜ್ಜಾಗಿದೆ. ಗಾಯಾಳು ಬುಮ್ರಾ ಇಲ್ಲದ ಈ ಟೂರ್ನಿಯಲ್ಲಿ ಭಾರತಕ್ಕೆ ದೊಡ್ಡ ಸವಾಲು ಎದುರಾಗಬಹುದು. ಭಾರತ ತಂಡ ಟಿ-20 ವಿಶ್ವಕಪ್‌ಗೆ ಅಂತಿಮ ಹಂತದ ತಯಾರಿಯಲ್ಲಿದ್ದ ವೇಳೆ ಬುಮ್ರಾ ಗಾಯಗೊಂಡರು. ಅವರ ಅನುಪಸ್ಥಿತಿ ಟೀಂ ಇಂಡಿಯಾಗೆ ಕಾಡಲಿದೆ.   

ಇದನ್ನೂ ಓದಿ: ಬಂಗಾಳ ಕ್ರಿಕೆಟ್ ಅಸೋಸಿಯೇಷನ್ ​​(ಸಿಎಬಿ) ಅಧ್ಯಕ್ಷ ಹುದ್ದೆಗೆ ಗಂಗೂಲಿ ಸ್ಪರ್ಧೆ..!

ಬುಮ್ರಾ ಬದಲಿಗೆ ಈ ಆಟಗಾರನಿಗೆ ಅವಕಾಶ   

ಜಸ್ಪ್ರೀತ್ ಬುಮ್ರಾ ಬದಲಿಗೆ ತಂಡದಲ್ಲಿ ಅನುಭವಿ ವೇಗದ ಬೌಲರ್ ಮೊಹಮ್ಮದ್ ಶಮಿಗೆ ಅವಕಾಶ ಸಿಕ್ಕಿದೆ. ಉತ್ತಮ ಪ್ರದರ್ಶ ತೋರಲು ಶಮಿಗೆ ಇದೊಂದು ಉತ್ತಮ ಅವಕಾಶವೆಂದೇ ಹೇಳಬಹುದು. ಭಾರತದ ಅಗ್ರ ಆಲ್‌ರೌಂಡರ್‌ಗಳಲ್ಲಿ ಒಬ್ಬರಾದ ರವೀಂದ್ರ ಜಡೇಜಾ ಕೂಡ ಮೊಣಕಾಲಿನ ಗಾಯದಿಂದ ಹೊರಗುಳಿದಿದ್ದಾರೆ. ಈ ಇಬ್ಬರು ಪ್ರಮುಖ ಆಟಗಾರರ ಅನುಪಸ್ಥಿತಿಯು ಭಾರತದ ಬೌಲಿಂಗ್ ವಿಭಾಗವನ್ನು ದುರ್ಬಲಗೊಳಿಸಬಹುದು. 

ದೀಪಕ್ ಚಹಾರ್ ಕೂಡ ಆಡುವುದಿಲ್ಲ

ಭಾರತಕ್ಕೆ ಮತ್ತೊಂದು ಆಘಾತವಾಗಿದ್ದು, ದೀಪಕ್ ಚಹಾರ್ ಇತ್ತೀಚೆಗೆ ಗಾಯದ ಕಾರಣ ತಂಡದಿಂದ ಹೊರಗುಳಿದಿದ್ದಾರೆ. ಚಹಾರ್ ಕಿಲ್ಲರ್ ಬೌಲಿಂಗ್ ಮತ್ತು ಬ್ಯಾಟಿಂಗ್‌ನಲ್ಲಿ ಪರಿಣಿತ ಆಟಗಾರ. ಟೀಂ ಇಂಡಿಯಾಗೆ ಹಲವು ಪಂದ್ಯಗಳಲ್ಲಿ ಗೆಲುವು ತಂದುಕೊಟ್ಟಿರುವ ಚಹಾರ್ ಅನುಪಸ್ಥಿತಿ ಸಹ ತಂಡಕ್ಕೆ ಕಾಡಲಿದೆ. ಡೆತ್ ಓವರ್‌ಗಳಲ್ಲಿ ಭುವನೇಶ್ವರ್ ಕುಮಾರ್ ಅವರ ಬೌಲಿಂಗ್ ಶೈಲಿಗೆ ವ್ಯಾಪಕ ಟೀಕೆ ವ್ಯಕ್ತವಾಗಿದೆ. ಮೂವರು ಸ್ಪಿನ್ನರ್‌ಗಳಾದ ರವಿಚಂದ್ರನ್ ಅಶ್ವಿನ್, ಯುಜ್ವೇಂದ್ರ ಚಾಹಲ್ ಮತ್ತು ಅಕ್ಷರ್ ಪಟೇಲ್ ಅವರ ಬಗ್ಗೆ ಕ್ರಿಕೆಟ್ ತಜ್ಞರು ಪ್ರಶ್ನೆ ಎತ್ತುತ್ತಿದ್ದಾರೆ.

ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.

Trending News