ಬೆಂಗಳೂರು: ಈಗಾಗಲೇ ಹ್ಯಾಟ್ರಿಕ್ ಗೆಲುವು ಸಾಧಿಸಿರುವ ಟೀಂ ಇಂಡಿಯಾ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಾಳೆ ನಡೆಯುವ ಆಸ್ಟ್ರೇಲಿಯ ವಿರುದ್ಧದ 4ನೇ ಪಂದ್ಯದಲ್ಲೂ ಗೆಲುವು ಸಾಧಿಸುವ ವಿಶ್ವಾಸದಲ್ಲಿದೆ.


COMMERCIAL BREAK
SCROLL TO CONTINUE READING

ಆಸಿಸ್ ವಿರುದ್ಧದ  ಐದು ಅಂತರಾಷ್ಟ್ರೀಯ ಏಕದಿನ  ಪಂದ್ಯಗಳಲ್ಲಿ ಈಗಾಗಲೇ 3-0 ಮುನ್ನಡೆ ಸಾಧಿಸಿರುವ ಭಾರತ ತಂಡದ ಮುಂದಿನ ಗುರಿ ಸರಣಿಯನ್ನು ಕ್ಲೀನ್ ಸ್ವೀಪ್ ಮಾಡುವುದು. ಆದರೆ ಭಾರತದ ಗೆಲುವಿನ ಓಟಕ್ಕೆ ಸಿಲಿಕಾನ್ ನಗರಿಯ ವರುಣನ ಆರ್ಭಟದಿಂದ ತಡೆ ಬೀಳುವ ಆತಂಕ ಎದುರಾಗಿದೆ.