Gautam Gambhir Statement on RCB: ಇಂಡಿಯನ್ ಪ್ರೀಮಿಯರ್ ಲೀಗ್ 2024ರಲ್ಲಿ ಇಂದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ನಡುವೆ ಪಂದ್ಯ ನಡೆಯುತ್ತಿದೆ. ಆದರೆ ಈ ಅಮೋಘ ಪಂದ್ಯದ ಹೊರತಾಗಿ ಆರ್ ಸಿ ಬಿ ವಿರುದ್ಧ ಕೋಲ್ಕತ್ತಾ ನೈಟ್ ರೈಡರ್ಸ್ ಮೆಂಟರ್ ಗೌತಮ್ ಗಂಭೀರ್ ದ್ವೇಷ ಕಾರಿದ್ದಾರೆ.


COMMERCIAL BREAK
SCROLL TO CONTINUE READING

ಟೂರ್ನಮೆಂಟ್‌’ನಲ್ಲಿ ಎರಡೂ ತಂಡಗಳು 32 ಪಂದ್ಯಗಳಲ್ಲಿ ಮುಖಾಮುಖಿಯಾಗಿದ್ದು, ಕೆಕೆಆರ್ 18 ಗೆಲುವಿನೊಂದಿಗೆ ಮೇಲುಗೈ ಸಾಧಿಸಿದೆ. ತಮ್ಮ ಕೊನೆಯ ಐದು ಮುಖಾಮುಖಿಗಳಲ್ಲಿಯೂ ಸಹ, ಕೋಲ್ಕತ್ತಾ ನೈಟ್ ರೈಡರ್ಸ್ RCB ವಿರುದ್ಧ ಐದು ಪಂದ್ಯಗಳಲ್ಲಿ ನಾಲ್ಕನ್ನು ಗೆಲ್ಲುವ ಮೂಲಕ ಪ್ರಬಲ ದಾಖಲೆಯನ್ನು ಉಳಿಸಿಕೊಂಡಿದೆ.


ಇದನ್ನೂ ಓದಿ: ಮಧುಮೇಹಿಗಳು ಚೂಯಿಂಗ್ ಗಮ್ ಥರ ಈ ಒಣಹಣ್ಣನ್ನು ಜಗಿತಾ ಇರಿ.. ಎಂದೂ ಹೆಚ್ಚಾಗಲ್ಲ ಬ್ಲಡ್ ಶುಗರ್! ನಾರ್ಮಲ್ ಆಗೇ ಇರುತ್ತೆ!


ಇನ್ನು ಅಧಿಕೃತ ಬ್ರಾಡ್‌ಕಾಸ್ಟರ್ ಸ್ಟಾರ್ ಸ್ಪೋರ್ಟ್ಸ್‌ ಜೊತೆ ಮಾತನಾಡಿದ ಗಂಭೀರ್, "ನಾನು ಪ್ರತಿ ಬಾರಿಯೂ ಸೋಲಿಸಲು ಬಯಸಿದ್ದ ಒಂದು ತಂಡ ಮತ್ತು ನನ್ನ ಕನಸಿನಲ್ಲಿಯೂ ಯಾವುದಾದರೂ ತಂಡವನ್ನು ಸೋಲಿಸುವುದಾದರೆ ಅದು RCB. ಅದು ಎರಡನೇ ಅತ್ಯಂತ ಉನ್ನತ ತಂಡವಾಗಿದೆ" ಎಂದು ಹೇಳಿದ್ದಾರೆ.


2008 ರಲ್ಲಿ ಬೆಂಗಳೂರು ಮೂಲದ ಫ್ರಾಂಚೈಸಿ ವಿರುದ್ಧ ಐಪಿಎಲ್‌’ನ ಮೊದಲ ಪಂದ್ಯದಲ್ಲಿ ಬ್ರೆಂಡನ್ ಮೆಕಲಮ್ ಅವರ ಐತಿಹಾಸಿಕ ಶತಕವನ್ನು (73 ಎಸೆತಗಳಲ್ಲಿ 158 ರನ್) ಉಲ್ಲೇಖಿಸಿದ ಗಂಭೀರ್, ಕೆಕೆಆರ್‌ನ ಇದುವರೆಗಿನ ಗಮನಾರ್ಹ ಪ್ರದರ್ಶನವು ಆರ್‌ಸಿಬಿ ವಿರುದ್ಧವಾಗಿದೆ ಎಂದು ಹೇಳಿದರು.


KKR 2012 ಮತ್ತು 2014 ರಲ್ಲಿ ಎರಡು ಬಾರಿ IPL ಟ್ರೋಫಿ ಗೆದ್ದುಕೊಂಡಿದೆ. ಆದರೆ RCB ಇನ್ನೂ 16 ಸೀಸನ್ ಕಳೆದರೂ ಸಹ ಟ್ರೋಫಿ ಗೆಲ್ಲಲು ಪರದಾಡುತ್ತಿದೆ.


"ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಆರ್ ಸಿ ಬಿ ಒಂದೇ ಒಂದು ಟ್ರೋಫಿ ಗೆದ್ದಿಲ್ಲ. ಆದರೆ ಎಲ್ಲಾ ಗೆದ್ದಿದ್ದಾರೆ ಅನ್ನುವ ಥರ ವರ್ತಿಸುತ್ತಾರೆ. ನನಗೆ ಅದನ್ನು ಸಹಿಸಲು ಸಾಧ್ಯವಿಲ್ಲ” ಎಂದು ಗಂಭೀರ್ ಹೇಳಿದ್ದಾರೆ.


ಇದನ್ನೂ ಓದಿ:ಒಬ್ಬರಲ್ಲ, ಇಬ್ಬರಲ್ಲ… 8 ನಟಿಯರೊಂದಿಗೆ ಡೇಟ್! ಕಡೆಗೆ ಬ್ರಿಟಿಷ್ ಯುವತಿಯನ್ನು ಪ್ರೀತಿಸಿ 2 ಬಾರಿ ಮದ್ವೆಯಾದ ಟೀಂ ಇಂಡಿಯಾದ ಸ್ಟಾರ್ ಆಲ್’ರೌಂಡರ್!


“ಆರ್ ಸಿ ಬಿ ಅತ್ಯಂತ ಬಲಿಷ್ಠ ತಂಡ ಮತ್ತು ಬಹುಶಃ ಅತ್ಯಂತ ಆಕ್ರಮಣಕಾರಿ ಬ್ಯಾಟಿಂಗ್ ಘಟಕ ಹೊಂದಿರುವ ಟೀಂ. ಕ್ರಿಸ್ ಗೇಲ್, ವಿರಾಟ್ ಕೊಹ್ಲಿ, ಎಬಿ ಡಿವಿಲಿಯರ್ಸ್… ಇದಕ್ಕಿಂತ ಉತ್ತಮವಾದದ್ದು ಇನ್ನೇನು? ನನ್ನ ಐಪಿಎಲ್ ವೃತ್ತಿಜೀವನದಿಂದ ನನಗೆ ಬೇಕಾಗಿರುವುದು ಒಂದಿದ್ದರೆ ಅಥವಾ ಮತ್ತೆ ಕ್ರಿಕೆಟ್ ಮೈದಾನಕ್ಕೆ ಹೋಗಿ ಯಾವುದಾದರೂ ಒಂದು ತಂಡವನ್ನು ಸೋಲಿಸಬೇಕೆಂದರೆ ಅದು RCBಯನ್ನು” ಎಂದು ಹೇಳಿದರು.


 


ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್