ಒಬ್ಬರಲ್ಲ, ಇಬ್ಬರಲ್ಲ… 8 ನಟಿಯರೊಂದಿಗೆ ಡೇಟ್! ಕಡೆಗೆ ಬ್ರಿಟಿಷ್ ಯುವತಿಯನ್ನು ಪ್ರೀತಿಸಿ 2 ಬಾರಿ ಮದ್ವೆಯಾದ ಟೀಂ ಇಂಡಿಯಾದ ಸ್ಟಾರ್ ಆಲ್’ರೌಂಡರ್!

Yuvraj Singh love affairs: ಯುವರಾಜ್ ಸಿಂಗ್ ಮೈದಾನಕ್ಕೆ ಇಳಿದರೆ ಸಾಕು ಭರ್ಜರಿ ಸಿಕ್ಸರ್, ಬೌಂಡರಿಗಳಿಗೆ ಲೆಕ್ಕವೇ ಇರಲ್ಲ. ಅವರ ಈ ಸ್ಟೈಲ್’ಗೆ ಅದೆಷ್ಟೋ ಹುಡುಗಿಯರು ಫಿದಾ ಆಗಿದ್ದರು. ಆದರೆ 2016ರಲ್ಲಿ ಹೇಜಲ್ ಕೀಚ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಟ್ಟ ಯುವಿ, ಮಹಿಳಾ ಅಭಿಮಾನಿಗಳ ಹೃದಯ ಒಡೆದಿದ್ದು ಸುಳ್ಳಲ್ಲ.

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.

1 /9

ಟೀಂ ಇಂಡಿಯಾದ ಮಾಜಿ ಆಲ್ ರೌಂಡರ್ ಯುವರಾಜ್ ಸಿಂಗ್ ಕ್ರಿಕೆಟ್ ಲೋಕದಲ್ಲಿ ಎಷ್ಟು ಜನಪ್ರಿಯವೋ ಅಷ್ಟೇ ಪ್ರೇಮ ಪ್ರಕರಣಗಳಿಗೂ ಜನಪ್ರಿಯರಾಗಿದ್ದಾರೆ. ಮದುವೆಗೂ ಮುನ್ನ 8 ಮಂದಿ ಬಾಲಿವುಡ್ ಬೆಡಗಿಯರ ಜೊತೆ ಯುವರಾಜ್ ಸಿಂಗ್ ಹೆಸರು ತಳುಕು ಹಾಕಿಕೊಂಡಿತ್ತು. ಆದರೆ ಕೊನೆಗೆ ಯುವರಾಜ್ ಸಿಂಗ್ ಹೇಜಲ್ ಕೀಚ್ ಅವರನ್ನು ಸಂಗಾತಿಯನ್ನಾಗಿಸಿ ಎಲ್ಲರಲ್ಲೂ ಅಚ್ಚರಿ ಮೂಡಿಸಿದ್ದರು.

2 /9

ಅಷ್ಟಕ್ಕೂ ಯುವರಾಜ್ ಸಿಂಗ್ ಡೇಟ್ ಮಾಡಿದ್ದರು ಎನ್ನಲಾದ ಆ ಬಾಲಿವುಡ್ ಬೆಡಗಿಯರು ಯಾರು ಎಂಬುದನ್ನು ನೋಡೋಣ. ಕಿಮ್ ಶರ್ಮಾ, ಪ್ರೀತಿ ಝಂಗಿಯಾನಿ, ದೀಪಿಕಾ ಪಡುಕೋಣೆ, ರಿಯಾ ಸೇನ್, ಮಿನಿಶಾ ಲಾಂಬಾ, ಆಂಚಲ್ ಕುಮಾರ್, ನೇಹಾ ಧೂಪಿಯಾ, ಪ್ರೀತಿ ಜಿಂಟಾ… ಈ ಎಲ್ಲಾ ನಟಿಯರ ಜೊತೆ ಯುವಿ ಹೆಸರು ಕೇಳಿಬಂದಿತ್ತು.

3 /9

ಇನ್ನು ಈ ಎಲ್ಲಾ ವದಂತಿಗಳ ಮಧ್ಯೆ 2016ರಲ್ಲಿ ಹೇಜಲ್ ಕೀಚ್ ಅವರನ್ನು ಯುವಿ ಸಂಗಾತಿಯನ್ನಾಗಿ ಮಾಡಿಕೊಂಡರು.

4 /9

8 ಬಾಲಿವುಡ್ ಬೆಡಗಿಯರೊಂದಿಗಿನ ಪ್ರೇಮ ಪ್ರಕರಣದಲ್ಲಿ ಸುದ್ದಿಯಾಗಿದ್ದ ಯುವರಾಜ್ ಸಿಂಗ್, 2016ರಲ್ಲಿ 'ಬಾಡಿಗಾರ್ಡ್' ಚಿತ್ರದ ನಟಿ ಹೇಜಲ್ ಕೀಚ್ ಅವರನ್ನು ಮದುವೆಯಾಗುವ ಮೂಲಕ ಎಲ್ಲರನ್ನು ಅಚ್ಚರಿಗೊಳಿಸಿದರು.

5 /9

2015 ರಲ್ಲಿ ಹೇಜೆಲ್ ಕೀಚ್ ಅವರಿಗೆ ಪ್ರಪೋಸ್ ಮಾಡುವ ಮೂಲಕ ತಮ್ಮ ಸಂಬಂಧದ ಬಗ್ಗೆ ನಡೆಯುತ್ತಿರುವ ಎಲ್ಲಾ ವದಂತಿಗಳಿಗೆ ಕೊನೆ ಹಾಡಿದರು. ಇನ್ನು ಆ ಸಂದರ್ಭದಲ್ಲಿ ಕೀಚ್ ಪ್ರೀತಿಗೆ ಒಪ್ಪಿಗೆ ಸೂಚಿಸಿದ್ದರು.

6 /9

ಇದಾದ ಬಳಿಕ ಯುವರಾಜ್ ತಮ್ಮ ಸಾಮಾಜಿಕ ಮಾಧ್ಯಮ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಳ್ಳುವ ಮೂಲಕ ಹೇಜಲ್ ಅವರೊಂದಿಗಿನ ಸಂಬಂಧವನ್ನು ಖಚಿತಪಡಿಸಿದರು.

7 /9

30 ನವೆಂಬರ್ 2016 ರಂದು, ಯುವರಾಜ್ ಸಿಂಗ್ ಮತ್ತು ಹೇಜೆಲ್ ಕೀಚ್ ಸಿಖ್ ಸಂಪ್ರದಾಯಗಳ ಪ್ರಕಾರ ವಿವಾಹವಾದರು. ಅಂದಹಾಗೆ ಹೇಜಲ್ ಅವರ ತಂದೆ ಬ್ರಿಟೀಷ್ ಮತ್ತು ತಾಯಿ ಭಾರತ ಮೂಲದವರಾಗಿದ್ದರು. ಈ ಹಿನ್ನೆಲೆಯಲ್ಲಿ ಮದುವೆಗೂ ಮೊದಲು ಕೀಚ್, ಸಿಖ್ ಧರ್ಮವನ್ನು ಅಳವಡಿಸಿಕೊಂಡರು.

8 /9

ಅಷ್ಟೇ ಅಲ್ಲದೆ, ಹೇಜಲ್ ಕೀಚ್ ಹೆಸರನ್ನು ಗುರುಬಸಂತ್ ಕೌರ್ ಎಂದು ಬದಲಾಯಿಸಲಾಗಿದೆ. ಸಂತ ಬಾಬಾ ರಾಮ್ ಸಿಂಗ್ ಜಿ ಅವರು ಈ ಹೆಸರನ್ನು ಹೇಜಲ್‌’ಗೆ ನೀಡಿದರು. ಇನ್ನು ಯುವರಾಜ್ ಸಿಂಗ್ ಮತ್ತು ಅವರ ತಾಯಿ ಶಬ್ನಮ್ ಸಂತ ಮತ್ತು ಡೇರಾದ ಅನುಯಾಯಿಗಳು. ಯುವರಾಜ್ ತಂದೆ ಯೋಗರಾಜ್ ಸಿಂಗ್ ಡೇರಾದಲ್ಲಿ ನಂಬಿಕೆ ಇಲ್ಲದ ಕಾರಣ ಈ ಮದುವೆಯಲ್ಲಿ ಭಾಗವಹಿಸಿರಲಿಲ್ಲ.

9 /9

ಈ ಮದುವೆಯಾದ ಒಂದು ವಾರದ ನಂತರ, 2 ಡಿಸೆಂಬರ್ 2016 ರಂದು ಯುವರಾಜ್ ಸಿಂಗ್ ಮತ್ತು ಹೇಜೆಲ್ ಕೀಚ್ ಮತ್ತೊಮ್ಮೆ ಗೋವಾದಲ್ಲಿ ಹಿಂದೂ ಸಂಪ್ರದಾಯದ ಪ್ರಕಾರ ವಿವಾಹವಾದರು.