Ks Ranjitsinhji: ಸ್ವಾತಂತ್ರ್ಯ ಸಂದರ್ಭದಲ್ಲಿ ಭಾರತದಲ್ಲಿ ರಾಜರು ಮತ್ತು ರಾಜಮನೆತನದವರುರು ಮಾತ್ರ ಕ್ರಿಕೆಟ್ ಆಡುತ್ತಿದ್ದರು. ಪಟಿಯಾಲಾದ ಮಹಾರಾಜ, ವಡೋದರದ ಮಹಾರಾಜ ಗಾಯಕ್ವಾಡ್, ಪಟೌಡಿಯ ನವಾಬ್ ಮತ್ತು ಇಂದೋರ್‌’ನ ಹೋಳ್ಕರ್‌’ಗಳು ಹೀಗೆ ಇವರೇ ಕ್ರಿಕೆಟ್ ಬಗ್ಗೆ ಒಲವು ತೋರಿಸಿದ್ದರು. ಅವರಲ್ಲಿ ಒಬ್ಬರು ಜಾಮ್‌’ನಗರದ ಮಹಾರಾಜ ಕುಮಾರ್ ರಂಜಿತ್ ಸಿಂಗ್. ಅವರನ್ನು ಇಂದು ಭಾರತೀಯ ಕ್ರಿಕೆಟ್‌’ನ ಪಿತಾಮಹ ಎಂದು ಕರೆಯಲಾಗುತ್ತದೆ. ಇವರು 10 ಸೆಪ್ಟೆಂಬರ್ 1872 ರಂದು ಗುಜರಾತ್‌’ನ ಕಥಿಯಾವರ್‌’ನ ಸರೋದರ್ ಗ್ರಾಮದಲ್ಲಿ ಜನಿಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಅಂಬಾನಿ, ಅದಾನಿ ಬಳಿಕ ಭಾರತದ 3ನೇ ಶ್ರೀಮಂತ ವ್ಯಕ್ತಿ ಯಾರು ಗೊತ್ತಾ? ಇವರ ಆಸ್ತಿ ಮೌಲ್ಯವೆಷ್ಟು?


16ನೇ ವಯಸ್ಸಿನಲ್ಲಿ ಅಧ್ಯಯನಕ್ಕಾಗಿ ಇಂಗ್ಲೆಂಡ್‌’ಗೆ ತೆರಳಿದ ರಣ್’ಜಿತ್ ಸಿಂಗ್ ಭಾರತದಲ್ಲಿಯೇ ಕ್ರಿಕೆಟ್ ಕಲಿತರು. ಇನ್ನು ಅವರು ವಿಶಿಷ್ಟ ಬ್ಯಾಟಿಂಗ್‌’ಗೆ ಹೆಸರುವಾಸಿಯಾಗಿದ್ದರು. ವಿಭಿನ್ನ ಸ್ಟ್ರೋಕ್‌, ಲೆಗ್ ಗ್ಲಾನ್ಸ್‌’ನಂತಹ ಶಾಟ್’ಗಳನ್ನು ಎಸೆಯುತ್ತಿದ್ದರು ಎನ್ನಲಾಗಿದೆ.


ಇಂಗ್ಲಿಷ್ ತಂಡದಲ್ಲಿ ಆಡಿದ ಮೊದಲ ಏಷ್ಯನ್:


1896 ರಲ್ಲಿ ರಣ್’ಜಿತ್ ಸಿಂಗ್ ಇಂಗ್ಲೆಂಡ್ ತಂಡದಲ್ಲಿ ಆಯ್ಕೆಯಾದಾಗ, ಲಾರ್ಡ್ ಹ್ಯಾರಿಸ್ ಈ ಆಯ್ಕೆಯನ್ನು ವಿರೋಧಿಸಿದರು, ರಂಜಿತ್ ಹುಟ್ಟಿದ್ದು ಇಂಗ್ಲೆಂಡ್‌’ನಲ್ಲಿ ಅಲ್ಲ ಭಾರತದಲ್ಲಿ, ಆದ್ದರಿಂದ ಅವನಿಗೆ ಒಟ್ಟಿಗೆ ಆಹಾರ ನೀಡಬಾರದು ಎಂದು ಹೇಳಿದರು. (ಇದು ಭಾರತದ ಗುಲಾಮಗಿರಿಯ ಅವಧಿಯಾಗಿತ್ತು). ಇನ್ನು ಈ ಸಂದರ್ಭದಲ್ಲಿ ಇಂಗ್ಲಿಷ್ ತಂಡವನ್ನು ಸೇರಿದ ಏಷ್ಯಾದ ಮೂಲದ ಮೊದಲ ಕ್ರಿಕೆಟಿಗ ಎಂಬ ಹೆಸರಿಗೆ ಪಾತ್ರರಾದರು. ಜುಲೈ 1896ರಲ್ಲಿ ಮ್ಯಾಂಚೆಸ್ಟರ್‌’ನಲ್ಲಿ ಆಸ್ಟ್ರೇಲಿಯಾ ವಿರುದ್ಧದ ಅವರ ಮೊದಲ ಟೆಸ್ಟ್ ಪಂದ್ಯದಲ್ಲಿ 62 ಮತ್ತು 154 ರನ್‌’ಗಳ ಎರಡು ಅದ್ಭುತ ಇನ್ನಿಂಗ್ಸ್‌ಗಳನ್ನು ಆಡಿದರು.


ಇದನ್ನೂ ಓದಿ: ಐರ್ಲೆಂಡ್ ವಿರುದ್ಧ ಗೆಲ್ಲುತ್ತಿದ್ದಂತೆ ಜಸ್ಪ್ರೀತ್ ಬುಮ್ರಾ ಪಾಲಿಗೆ ಸೇರಿತು 2 ಶ್ರೇಷ್ಠ ದಾಖಲೆ!


ರಣ್’ಜಿತ್ ಸಿಂಗ್ ಹೆಸರಿನಲ್ಲಿ ರಣಜಿ ಟ್ರೋಫಿ:


ರಂಜಿತ್ ತಮ್ಮ ಕ್ರಿಕೆಟ್ ವೃತ್ತಿಜೀವನದ ಮೊದಲ ಮತ್ತು ಕೊನೆಯ ಪಂದ್ಯವನ್ನು ಆಸ್ಟ್ರೇಲಿಯಾ ವಿರುದ್ಧ ಮತ್ತು ಮ್ಯಾಂಚೆಸ್ಟರ್‌ನ ಓಲ್ಡ್ ಟ್ರಾಫರ್ಡ್ ಮೈದಾನದಲ್ಲಿ ಆಡಿದರು. 1904 ರಲ್ಲಿ ರಂಜಿತ್ ಭಾರತಕ್ಕೆ ಮರಳಿದರು. ರಣ್’ಜಿತ್ ಸಿಂಗ್’ಗೆ ಕ್ರಿಕೆಟ್‌ ಮೇಲಿನ ಪ್ರೀತಿ ಎಷ್ಟಿತ್ತೆಂದರೆ 48ನೇ ವಯಸ್ಸಿನಲ್ಲಿ ಪ್ರಥಮ ದರ್ಜೆ ಕ್ರಿಕೆಟ್‌ ಆಡುವ ಆಸೆ ಇತ್ತು. 1907 ರಲ್ಲಿ ಅವರು ನವನಗರದ ಮಹಾರಾಜರಾದರು. ಆದರೆ 60 ನೇ ವಯಸ್ಸಿನಲ್ಲಿ ಜಾಮ್ನಗರದಲ್ಲಿ 2 ಏಪ್ರಿಲ್ 1933ರಲ್ಲಿ ನಿಧನರಾದರು. ಅವರ ಸೋದರಳಿಯ ದಿಲೀಪ್ ಸಿಂಗ್ ಕೂಡ ಇಂಗ್ಲೆಂಡ್ ಪರ ಟೆಸ್ಟ್ ಪಂದ್ಯಗಳನ್ನು ಆಡಿದ್ದರು. 1934 ರಲ್ಲಿ ಭಾರತವು ರಂಜಿತ್ ಹೆಸರಿನಲ್ಲಿ ರಣಜಿ ಟ್ರೋಫಿಯನ್ನು ಪ್ರಾರಂಭಿಸಿತು. ರಂಜಿತ್ ಅವರನ್ನು ಭಾರತೀಯ ಕ್ರಿಕೆಟ್ ಪಿತಾಮಹ ಎಂದು ಪರಿಗಣಿಸಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ