Third Richest Man: ಅಂಬಾನಿ, ಅದಾನಿ ಬಳಿಕ ಭಾರತದ 3ನೇ ಶ್ರೀಮಂತ ವ್ಯಕ್ತಿ ಯಾರು ಗೊತ್ತಾ? ಇವರ ಆಸ್ತಿ ಮೌಲ್ಯವೆಷ್ಟು?

India’s Third Richest Man Shapoor Mistry: ಬ್ಲೂಮ್‌’ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಶಪೂರ್ ಮಿಸ್ತ್ರಿ ಅವರು ಭಾರತದ ಮೂರನೇ ಶ್ರೀಮಂತ ವ್ಯಕ್ತಿ ಎಂದು ಗುರುತಿಸಲಾಗಿದೆ. ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಬಳಿಕ ಮೂರನೇ ಸ್ಥಾನದಲ್ಲಿ ಶಪೂರ್ ಮಿಸ್ತ್ರಿ ಇದ್ದಾರೆ.

Written by - Bhavishya Shetty | Last Updated : Aug 19, 2023, 09:30 AM IST
    • ಶಪೂರ್ ಮಿಸ್ತ್ರಿ ಅವರು ಭಾರತದ ಮೂರನೇ ಶ್ರೀಮಂತ ವ್ಯಕ್ತಿ ಎಂದು ಗುರುತಿಸಲಾಗಿದೆ
    • ಬ್ಲೂಮ್‌’ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ವರದಿಯಲ್ಲಿ ಬಹಿರಂಗ
    • SP ಗ್ರೂಪ್, ಟಾಟಾ ಗ್ರೂಪ್‌’ನ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್‌’ನ ಏಕೈಕ ದೊಡ್ಡ ಷೇರುದಾರ
Third Richest Man: ಅಂಬಾನಿ, ಅದಾನಿ ಬಳಿಕ ಭಾರತದ 3ನೇ ಶ್ರೀಮಂತ ವ್ಯಕ್ತಿ ಯಾರು ಗೊತ್ತಾ? ಇವರ ಆಸ್ತಿ ಮೌಲ್ಯವೆಷ್ಟು? title=
Shapoor Mistry

India’s Third Richest Man Shapoor Mistry: ಸುಮಾರು 157 ವರ್ಷ ಹಳೆಯ ಶಪೂರ್ಜಿ ಪಲ್ಲೋಂಜಿ (SP) ಗ್ರೂಪ್’ನ್ನು ಶಪೂರ್ ಮಿಸ್ತ್ರಿ ಮುನ್ನಡೆಸುತ್ತಿದ್ದಾರೆ. ಮಿಸ್ತ್ರಿ ಕುಟುಂಬವು ಟಾಟಾ ಗ್ರೂಪ್ ಜೊತೆ ನಿಕಟ ಸಂಬಂಧ ಹೊಂದಿದ್ದು, ಇಬ್ಬರೂ ವರ್ಷಗಳಿಂದ ಹಲವಾರು ಯೋಜನೆಗಳಲ್ಲಿ ಪಾಲುದಾರರಾಗಿದ್ದಾರೆ. ಇನ್ನು ಶಪೂರ್ ಅವರು ಸುಪ್ರಸಿದ್ಧ ಕುಟುಂಬದಿಂದ ಬಂದವರು.

ಇದನ್ನೂ ಓದಿ: ಮಾರುಕಟ್ಟೆಯಲ್ಲಿ ಹರಿದಾಡುತ್ತಿದೆ 2 ವಿಧದ 500 ರೂ. ನೋಟುಗಳು: ಆರ್ ಬಿಐ ನೀಡಿದೆ ಮಹತ್ವದ ಅಪ್ ಡೇಟ್

ಬ್ಲೂಮ್‌’ಬರ್ಗ್ ಬಿಲಿಯನೇರ್ಸ್ ಇಂಡೆಕ್ಸ್ ಪ್ರಕಾರ ಶಪೂರ್ ಮಿಸ್ತ್ರಿ ಅವರು ಭಾರತದ ಮೂರನೇ ಶ್ರೀಮಂತ ವ್ಯಕ್ತಿ ಎಂದು ಗುರುತಿಸಲಾಗಿದೆ. ಏಷ್ಯಾದ ಶ್ರೀಮಂತ ವ್ಯಕ್ತಿ ಮುಖೇಶ್ ಅಂಬಾನಿ ಮತ್ತು ಗೌತಮ್ ಅದಾನಿ ಬಳಿಕ ಮೂರನೇ ಸ್ಥಾನದಲ್ಲಿ ಶಪೂರ್ ಮಿಸ್ತ್ರಿ ಇದ್ದಾರೆ.

ಶಪೂರ್ ಮಿಸ್ತ್ರಿಯವರ ಮುಂಬೈ ಪ್ರಧಾನ ಕಛೇರಿಯ ಗ್ರೂಪ್, ಎಂಜಿನಿಯರಿಂಗ್ ಮತ್ತು ಕನ್’ಸ್ಟ್ರಕ್ಶನ್, ರಿಯಲ್ ಎಸ್ಟೇಟ್, ಶಿಪ್ಪಿಂಗ್, ಜವಳಿ, ಗೃಹೋಪಯೋಗಿ ವಸ್ತುಗಳು, ಜೈವಿಕ ತಂತ್ರಜ್ಞಾನ ಇತ್ಯಾದಿಗಳಲ್ಲಿ ವೈವಿಧ್ಯಮಯ ಆಸಕ್ತಿಗಳನ್ನು ಹೊಂದಿದೆ. SP ಗ್ರೂಪ್, ಟಾಟಾ ಗ್ರೂಪ್‌’ನ ಹಿಡುವಳಿ ಕಂಪನಿಯಾದ ಟಾಟಾ ಸನ್ಸ್‌’ನ ಏಕೈಕ ದೊಡ್ಡ ಷೇರುದಾರ.

47 ನೇ ವಯಸ್ಸಿನವರಾಗಿದ್ದ ಸಂದರ್ಭದಲ್ಲಿ ಶಪೂರ್ ಅಧ್ಯಕ್ಷರಾಗಿ ತಮ್ಮ ತಂದೆಯಿಂದ ಎಸ್‌’ಪಿ ಗ್ರೂಪ್‌ನ ಆಡಳಿತವನ್ನು ವಹಿಸಿಕೊಂಡರು. ಈ ಹಿಂದೆ ಎಂಡಿ ಹುದ್ದೆಯಲ್ಲಿ ಅವರು ಸೇವೆ ಸಲ್ಲಿಸುತ್ತಿದ್ದರು.

ಇದನ್ನೂ ಓದಿ: ಗ್ರಾಹಕರಿಗೆ ಶಾಕ್ ನೀಡಿದ ಈ ಐದು ಬ್ಯಾಂಕ್ ಗಳು! ಇಲ್ಲಿ ಲೋನ್ ಪಡೆಯುವುದು ಬಲು ದುಬಾರಿ

ಬ್ಲೂಮ್‌’ಬರ್ಗ್ ಪ್ರಕಾರ, 58 ವರ್ಷದ ಶಪೂರ್ ಮಿಸ್ತ್ರಿ ಪ್ರಸ್ತುತ ಭಾರತದ ಮೂರನೇ ಶ್ರೀಮಂತ ವ್ಯಕ್ತಿ ಮತ್ತು ವಿಶ್ವದ 47 ನೇ ಶ್ರೀಮಂತ ವ್ಯಕ್ತಿ. ಅವರ ನಿವ್ವಳ ಮೌಲ್ಯವು $ 31.1 ಬಿಲಿಯನ್ (ರೂ. 258000 ಕೋಟಿಗಿಂತ ಹೆಚ್ಚು) ಆಗಿದೆ. ಶಪೂರ್ ಮಿಸ್ತ್ರಿ ಈ ವರ್ಷ ತಮ್ಮ ಸಂಪತ್ತಿಗೆ $3.34 ಬಿಲಿಯನ್ ಸೇರಿಸಿದ್ದಾರೆ ಎಂದು ಈ ವರದಿ ಹೇಳಿದೆ.

 

ಕನ್ನಡ ಭಾಷೆಯಲ್ಲಿ ಇತ್ತೀಚಿನ ಕರ್ನಾಟಕ, ದೇಶ, ವಿದೇಶ, ಮನರಂಜನೆ, ಶಿಕ್ಷಣ, ಉದ್ಯೋಗ, ಆರೋಗ್ಯ, ಜೀವನಶೈಲಿ, ಆಧ್ಯಾತ್ಮ,  ಕ್ರೀಡೆ, ಕ್ರೈಂ, ವೈರಲ್, ವ್ಯಾಪಾರ, ತಂತ್ರಜ್ಞಾನ ಸುದ್ದಿಗಳನ್ನು ಓದಲು ಈಗಲೇ ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k

Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ

Trending News