IND vs SL, Asia Cup 2023: ಬಲಿಷ್ಠ ಆರಂಭಿಕ ಆಟಗಾರ ರೋಹಿತ್ ಶರ್ಮಾ ನಾಯಕತ್ವದ ಭಾರತ ಕ್ರಿಕೆಟ್ ತಂಡವು ಫೈನಲ್‌’ನಲ್ಲಿ ಶ್ರೀಲಂಕಾವನ್ನು ಹೀನಾಯವಾಗಿ ಸೋಲಿಸಿ ಏಷ್ಯಾಕಪ್ ಟ್ರೋಫಿಯನ್ನು ಗೆದ್ದುಕೊಂಡಿದೆ. ಈ ಟ್ರೋಫಿಯನ್ನು ಟೀಂ ಇಂಡಿಯಾ 8ನೇ ಬಾರಿ ತನ್ನ ತೆಕ್ಕೆಗೆ ಸೇರಿಸಿಕೊಂಡು ಇತಿಹಾಸ ಬರೆದಿದೆ.


COMMERCIAL BREAK
SCROLL TO CONTINUE READING

ಇನ್ನು ಈ ಟೂರ್ನಿಯಲ್ಲಿ ಟೀಂ ಇಂಡಿಯಾದ ಸ್ಟಾರ್ ಸ್ಪಿನ್ ಬೌಲರ್ ಕುಲದೀಪ್ ಯಾದವ್ ಅದ್ಭುತ ಪ್ರದರ್ಶನ ನೀಡಿದ್ದರು.


ಇದನ್ನೂ ಓದಿ: 300 ವರ್ಷಗಳ ಬಳಿಕ 3 ಮಹಾಯೋಗಗಳು: ಈ ರಾಶಿಗೆ ಸಿರಿವಂತಿಕೆ ಭಾಗ್ಯ: ಮಹತ್ವಾಕಾಂಕ್ಷೆ ಈಡೇರುವ ಸಮಯ, ಇವರಷ್ಟು ಅದೃಷ್ಟವಂತರು ಮತ್ಯಾರೂ ಇಲ್ಲ


ಭಾರತ ಕ್ರಿಕೆಟ್ ತಂಡ ಭಾನುವಾರ ಇತಿಹಾಸ ಸೃಷ್ಟಿಸಿ ಎಂಟನೇ ಬಾರಿಗೆ ಏಷ್ಯಾ ಕಪ್ ಟ್ರೋಫಿ ಎತ್ತಿಹಿಡಿದಿದೆ. ಇದರೊಂದಿಗೆ, ರೋಹಿತ್ ಮುಂದಾಳತ್ವದ ಬಲಿಷ್ಠ ಭಾರತ, ವಿಶ್ವಕಪ್ 2023 ಕ್ಕೂ ಮೊದಲು ಎಲ್ಲಾ ತಂಡಗಳಿಗೆ ಎಚ್ಚರಿಕೆಯ ಗಂಟೆಗಳನ್ನು ರವಾನಿಸಿದಂತೆ ಭಾಸವಾಗಿದೆ.


ಕೊಲಂಬೊದ ಆರ್ ಪ್ರೇಮದಾಸ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ವೇಗಿ ಮೊಹಮ್ಮದ್ ಸಿರಾಜ್ ಅವರ ಬೆಂಕಿ ಬೌಲಿಂಗ್‌ ದಾಳಿಗೆ ಲಂಕಾ ದಹನವಾಗಿದೆ. ಶ್ರೀಲಂಕಾ ತಂಡ ಕೇವಲ 50 ರನ್‌’ಗಳಿಗೆ ತನ್ನೆಲ್ಲಾ ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಅನುಭವಿಸಿದೆ.


ಕುಲದೀಪ್ ಅಮೋಘ ಆಟ:


ಚೈನಾಮನ್ ಸ್ಪಿನ್ನರ್ ಕುಲ್ದೀಪ್ ಯಾದವ್ ಏಷ್ಯಾ ಕಪ್’ನಲ್ಲಿ ಅದ್ಭುತ ಪ್ರದರ್ಶನ ನೀಡಿದ್ದರು. ಒಟ್ಟು 9 ವಿಕೆಟ್‌’ಗಳನ್ನು ಪಡೆದ ಅವರು, ಸರಣಿ ಶ್ರೇಷ್ಠರಾಗಿ ಆಯ್ಕೆಯಾದರು. ಕೆಲ ಸಮಯದ ಹಿಂದೆ ಕುಲ್ದೀಪ್ ಭಾರತ ತಂಡದಲ್ಲಿ ಸ್ಥಾನ ಪಡೆಯಲು ಸಹಹೆಣಗಾಡಿದ್ದ ಪರಿಸ್ಥಿತಿ ಇತ್ತು. ಆದರೆ ಇದೀಗ ಅವರ ಅಮೋಘ ಆಟದಿಂದಲೇ ಟೀಂ ಇಂಡಿಯಾದಲ್ಲಿ ಭದ್ರಸ್ಥಾನ ಪಡೆದುಕೊಂಡಿದ್ದಾರೆ.


ಇನ್ನು ಕಾನ್ಪುರ ಮೂಲದ ಕುಲ್ದೀಪ್ ಯಾದವ್ ಈ ಟೂರ್ನಿಯಲ್ಲಿ ಅಮೋಘ ಪ್ರದರ್ಶನ ನೀಡಿದ್ದಾರೆ. ಗೆಲುವಿನ ಬಳಿಕ ಮಾತನಾಡಿದ ಅವರು, 'ಕಳೆದ ಒಂದೂವರೆ ವರ್ಷಗಳಿಂದ ನನ್ನ ಲಯದಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ಬೌಲಿಂಗ್ ನನಗೆಯೇ ಇಷ್ಟವಾಗುತ್ತದೆ. ಇದಕ್ಕಾಗಿ ತುಂಬಾ ಶ್ರಮಿಸಿದ್ದಾರೆ. ಇದರ ಶ್ರೇಯಸ್ಸು ರೋಹಿತ್ ಭಾಯ್ ಅವರಿಗೆ ಸಲ್ಲುತ್ತದೆ” ಎಂದಿದ್ದಾರೆ.


ಇದನ್ನೂ ಓದಿ: ಗೃಹಿಣಿಯನ್ನು  ಲಕ್ಷಾಧಿಪತಿಯನ್ನಾಗಿಸುತ್ತದೆ ಸರ್ಕಾರದ ಈ ಸ್ಕೀಮ್ ! ನೀವು ಕೂಡಾ ಪಡೆಯಬಹುದು ಲಾಭ 


ಬಾಗೇಶ್ವರ ಧಾಮದ ಆಶೀರ್ವಾದ!


ಚೈನಾಮನ್ ಸ್ಪಿನ್ನರ್ ಕುಲದೀಪ್ ಯಾದವ್ ಅವರು ಏಷ್ಯಾ ಕಪ್ 2023 ರಲ್ಲಿ ತಮ್ಮ ಪ್ರಬಲ ಪ್ರದರ್ಶನಕ್ಕಾಗಿ ಸರಣಿ ಶ್ರೇಷ್ಠರಾಗಿ ಆಯ್ಕೆಯಾದರು. ಇನ್ನು ಇವರ ಈ ಸಾಧನೆಗೆ ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿ ಆಶೀರ್ವಾದವೇ ಕಾರಣವೆಂದು ಸೋಶೀಯಲ್ ಮೀಡಿಯಾದಲ್ಲಿ ಹೇಳಲಾಗು್ತ್ತದೆ. ಇದಕ್ಕೆ ಪೂರಕ ಎಂಬಂತೆ, ಕಳೆದ ಕೆಲ ದಿನಗಳ ಹಿಂದೆ ಬಾಗೇಶ್ವರ ಧಾಮದ ಧೀರೇಂದ್ರ ಶಾಸ್ತ್ರಿ ಬಳಿ ಕುಲದೀಪ್ ಕೈಮುಗಿದು ಕುಳಿತಿರುವ ದೃಶ್ಯ ವೈರಲ್ ಆಗಿತ್ತು. ಅಷ್ಟೇ ಅಲ್ಲದೆ, ಉಜ್ಜಯಿನಿಯ ಮಹಾಕಾಳೇಶ್ವರ ದೇವಸ್ಥಾನಕ್ಕೂ ತೆರಳಿ ಪೂಜೆ ಸಲ್ಲಿಸಿದ್ದರು.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=uzXzteRDY-k
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.