`ವಿರಾಟ`ನ ದ್ವಿಶತಕಕ್ಕೆ ಮಂಕಾದ ಲಂಕಾ
ನಾಗಪುರ: ಕ್ರಿಕೆಟ್ ನ ಎಲ್ಲಾ ಮಾದರಿಯ ಪಂದ್ಯಗಳಲ್ಲಿ ಭರ್ಜರಿ ಫಾರ್ಮ್ ನಲ್ಲಿರುವ ಭಾರತ ತಂಡದ ನಾಯಕ ಕೊಹ್ಲಿಯ ಇಂದು ಶ್ರೀಲಂಕಾದ ವಿರುದ್ದ ತಮ್ಮ 'ವಿರಾಟ'ದ ದ್ವಿಶತಕಕ್ಕೆ ಲಂಕಾ ನಿಜಕ್ಕೂ ಹೈರಾಣಾಗಿ ಹೋಗಿದೆ.ಇಲ್ಲಿ ನಡೆಯುತ್ತಿರುವ ಎರಡನೆಯ ಟೆಸ್ಟ್ ನ ಮೂರನೆಯ ದಿನದಾಟಕ್ಕೆ ಭಾರತ 176 ಓವರ್ ಗಳಲ್ಲಿ 6 ವಿಕೆಟ್ ನಷ್ಟಕ್ಕೆ 610 ರನ್ನಗಳ ಬೃಹತ್ ಮೊತ್ತವನ್ನು ಗಳಿಸಿ ಡಿಕ್ಲೇರ್ ಮಾಡಿಕೊಂಡಿದೆ,ಆ ಮೂಲಕ 405 ರನ್ನಗಳ ಮುನ್ನಡೆಯನ್ನು ಸಾಧಿಸಿರುವ ಭಾರತ ಈಗ ಸುಸ್ಥಿತಿಯಲ್ಲಿದೆ.
ಆರಂಭದಲ್ಲಿ ಚೇತೆಸ್ವರ ಪೂಜಾರ ಮತ್ತು ಮುರಳಿ ವಿಜಯರವರು ತಮ್ಮ ಶತಕಗಳ ಮೂಲಕ ಮಿಂಚಿದ್ದರು,ಅವರ ನಂತರ ಬಂದಂತಹ ಕೊಹ್ಲಿ ಏಕದಿನ ಮಾದರಿಯ ಪಂದ್ಯದಂತೆ ವೇಗವಾಗಿ ರನ್ ಗಳಿಸಿಸುತ್ತಾ ಲಂಕಾದ ಬೌಲರಗಳ ಎಸೆತಗಳನ್ನು ಮನಬಂದಂತೆ ಚಚ್ಚಿ ಕೇವಲ 267 ಎಸೆತಗಳಲ್ಲಿ 213 ರನ್ ಗಳನ್ನೂ ಗಳಿಸಿದ ಅವರು ಅದರಲ್ಲಿ 17 ಬೌಂಡರಿ ಮತ್ತು ಎರಡು ಸಿಕ್ಸರ್ ಮೂಲಕ ರನ್ಗಳ ಸುರಿಮಳೆಯನ್ನು ಸುರಿಸಿದರು. ಕೊಹ್ಲಿಗೆ ಜೊತೆಯಾದ ರೋಹಿತ್ ಶರ್ಮಾ ಕೂಡಾ ಕೇವಲ 160 ಎಸೆತಗಳಲ್ಲಿ 102 ಗಳನ್ನು ಗಳಿಸಿದರು.ಈ ಬೃಹತ್ ಮೊತ್ತ ನಿಜಕ್ಕೂ ಶ್ರೀಲಂಕಾ ಆಟಗಾರರಿಗೆ ಒಂದು ಸವಾಲಿನ ಸಂಗತಿಯಾಗಿದೆ,
ವಿರಾಟ್ ಕೊಹ್ಲಿ ತಮ್ಮ ಈ ಐದನೆಯ ದ್ವಿಶತಕವನ್ನು ಗಳಿಸುವುದರ ಮೂಲಕ ನಾಯಕನಾಗಿ ಅತಿ ಹೆಚ್ಚು ದ್ವಿಶತಕ ಗಳಿಸಿದ ದಾಖಲೆಯನ್ನು ಹೊಂದಿರುವ ವೆಸ್ಟ್ ಇಂಡಿಸ್ ನ ಬ್ರಿಯಾನ್ ಲಾರಾ ರವರ ದಾಖಲೆಯನ್ನು ಸರಿಗಟ್ಟಿದ್ದಾರೆ.