2 ಇನ್ನಿಂಗ್ಸ್, 10 ವಿಕೆಟ್ ಉಡೀಸ್… 26ರ ಹರೆಯದ ಈ ಸ್ಟಾರ್ ಸ್ಪಿನ್ ಬೌಲರ್ ಮೋಡಿಗೆ ಇತಿಹಾಸವೇ ಸೃಷ್ಟಿ
Ranji Trophy, Shams Mulani 10 Wickets: ಈ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ 10 ವಿಕೆಟ್ ಕಬಳಿಸುವ ಮೂಲಕ ಸೋಮವಾರ ನಡೆದ ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ಮುಂಬೈ ತಂಡ ಆಂಧ್ರವನ್ನು 10 ವಿಕೆಟ್’ಗಳಿಂದ ಸೋಲಿಸಿತು. ಇದರೊಂದಿಗೆ ಮುಂಬೈ ತಂಡ ಬೋನಸ್ ಅಂಕದೊಂದಿಗೆ ಸತತ ಎರಡನೇ ಜಯ ದಾಖಲಿಸಿತು.
Ranji Trophy, Shams Mulani 10 Wickets: ಮುಂಬೈ ತಂಡದ ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ ಆಂಧ್ರ ವಿರುದ್ಧದ ರಣಜಿ ಟ್ರೋಫಿ ಪಂದ್ಯದಲ್ಲಿ ದಿಟ್ಟ ಪ್ರದರ್ಶನ ನೀಡಿ ಎರಡೂ ಇನಿಂಗ್ಸ್’ಗಳಲ್ಲಿ ಒಟ್ಟು 10 ವಿಕೆಟ್ ಕಬಳಿಸಿದ್ದಾರೆ. ಮುಂಬೈ ಈ ದೇಶೀಯ ಕ್ರಿಕೆಟ್ ಟೂರ್ನಿಯಲ್ಲಿ ಬೋನಸ್ ಅಂಕದೊಂದಿಗೆ ಸತತ ಎರಡನೇ ಗೆಲುವು ದಾಖಲಿಸಿದೆ.
ಇದನ್ನೂ ಓದಿ: Rashi Bhavishya: ಇಂದು ಪರಿಧ ಯೋಗ: ಈ ರಾಶಿಯ ಜನರಿಗೆ ದೊರೆಯಲಿದೆ ಅದೃಷ್ಟದ ವಿಶೇಷ ಬೆಂಬಲ
ಈ ಪಂದ್ಯದಲ್ಲಿ ಎಡಗೈ ಸ್ಪಿನ್ನರ್ ಶಮ್ಸ್ ಮುಲಾನಿ 10 ವಿಕೆಟ್ ಕಬಳಿಸುವ ಮೂಲಕ ಸೋಮವಾರ ನಡೆದ ರಣಜಿ ಟ್ರೋಫಿಯ ಬಿ ಗುಂಪಿನ ಪಂದ್ಯದಲ್ಲಿ ಮುಂಬೈ ತಂಡ ಆಂಧ್ರವನ್ನು 10 ವಿಕೆಟ್’ಗಳಿಂದ ಸೋಲಿಸಿತು. ಇದರೊಂದಿಗೆ ಮುಂಬೈ ತಂಡ ಬೋನಸ್ ಅಂಕದೊಂದಿಗೆ ಸತತ ಎರಡನೇ ಜಯ ದಾಖಲಿಸಿತು. ಶೇಖ್ ರಶೀದ್ (66) ಮತ್ತು ಹನುಮ ವಿಹಾರಿ (46) ಅವರ ಉಪಯುಕ್ತ ಇನ್ನಿಂಗ್ಸ್‌ನ ಹೊರತಾಗಿಯೂ ಫಾಲೋ-ಆನ್ ಆಡುತ್ತಿರುವ ಆಂಧ್ರ ತಂಡವು ಮುಲಾನಿ (96 ರನ್‌ಗಳಿಗೆ 4 ವಿಕೆಟ್) ಅವರ ತೀಕ್ಷ್ಣ ಬೌಲಿಂಗ್’ನ ಮುಂದೆ ಎರಡನೇ ಇನಿಂಗ್ಸ್‌ನಲ್ಲಿ 73.4 ಓವರ್‌ಗಳಲ್ಲಿ 244 ರನ್’ಗಳಿಗೆ ಕುಸಿಯಿತು. . ಮುಂಬೈಗೆ 34 ರನ್’ಗಳ ಗುರಿ ಸಿಕ್ಕಿತು. ಈ ಪಂದ್ಯದಲ್ಲಿ ಮುಲಾನಿ 161 ರನ್’ಗಳಿಗೆ 10 ವಿಕೆಟ್ ಪಡೆದರು. ಪ್ರಥಮ ದರ್ಜೆ ಪಂದ್ಯದಲ್ಲಿ ಆರನೇ ಬಾರಿಗೆ 10 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆಯುವಲ್ಲಿ ಮುಲಾನಿ ಯಶಸ್ವಿಯಾಗಿದ್ದರು.
ಇದನ್ನೂ ಓದಿ: BBK 10: ಫಿನಾಲೆ ಸಮೀಪದಲ್ಲೇ ರಿವೀಲ್ ಆಯ್ತು Bigg Boss ವಿನ್ನರ್ ಹೆಸರು: ಮತ್ತೆ ಪುರುಷ ಸ್ಪರ್ಧಿಯೇ ಟ್ರೋಫಿ ವಿಜೇತ..!!
ಇದಕ್ಕೆ ಉತ್ತರವಾಗಿ ಮುಂಬೈ 8.4 ಓವರ್’ಗಳಲ್ಲಿ ವಿಕೆಟ್ ನಷ್ಟವಿಲ್ಲದೆ ಗುರಿ ತಲುಪಿತು. ಒಂದು ಬೋನಸ್ ಪಾಯಿಂಟ್ ಸೇರಿದಂತೆ 7 ಅಂಕ ಪಡೆದರು. ಈ 41 ಬಾರಿಯ ಚಾಂಪಿಯನ್ ಬಿಹಾರವನ್ನು ಮೊದಲ ಸುತ್ತಿನ ಪಂದ್ಯದಲ್ಲಿ ಇನಿಂಗ್ಸ್ ಮತ್ತು 51 ರನ್‌ಗಳಿಂದ ಸೋಲಿಸಿದ್ದರು. ಎರಡು ಪಂದ್ಯಗಳಲ್ಲಿ ಎರಡು ಗೆಲುವಿನಿಂದ 14 ಅಂಕಗಳೊಂದಿಗೆ ತಂಡವು ಬಿ ಗುಂಪಿನಲ್ಲಿ ಅಗ್ರಸ್ಥಾನದಲ್ಲಿದೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ