ಅಕ್ಟೋಬರ್ 5 ರಂದು ನಡೆಯಲಿರುವ ಲೆಜೆಂಡ್ಸ್ ಲೀಗ್ ಕ್ರಿಕೆಟ್ (LLC) ನ ಅಂತಿಮ ಪಂದ್ಯಕ್ಕೆ ಕಟಕ್‌ನ ಬಾರಾಬತಿ ಕ್ರೀಡಾಂಗಣವನ್ನು ಅಧಿಕೃತ ಸ್ಥಳವೆಂದು ಘೋಷಿಸಲಾಗಿದೆ.


COMMERCIAL BREAK
SCROLL TO CONTINUE READING

ಇಂದು ಸಂಜೆ ಲೆಜೆಂಡ್ಸ್ ಲೀಗ್ ಕ್ರಿಕೆಟ್ 2022ರ ಆರನೇ ಪಂದ್ಯ ಗೌತಮ್ ಗಂಭೀರ್ ಅವರ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಇರ್ಫಾನ್ ಪಠಾಣ್ ಅವರ ಭಿಲ್ವಾರಾ ಕಿಂಗ್ಸ್ ನಡುವೆ ನಡೆಯಲಿದೆ.


ಇದನ್ನೂ ಓದಿ: ʼಇವನಿಗೆ ಮದುವೆ ಆದ್ರೂ ಮಾಡ್ರೋ ಸುಧಾರಿಸ್ತಾನೆʼ : ಧವನ್‌ ಕಾಟಕ್ಕೆ ಸುಸ್ತಾದ ಜಡೇಜಾ..!


ಈ ಲೀಗ್ ನಲ್ಲಿ ನಾಲ್ಕು ತಂಡಗಳಿದ್ದು, ಅವುಗಳಿಗೆ ಗುಜರಾತ್ ಜೈಂಟ್ಸ್, ಇಂಡಿಯಾ ಕ್ಯಾಪಿಟಲ್ಸ್, ಭಿಲ್ವಾರ ಕಿಂಗ್ಸ್, ಮಣಿಪಾಲ್ ಟೈಗರ್ಸ್ ಎಂದು ಹೆಸರಿಸಲಾಗಿದೆ. ಈಗಾಗಲೇ ಗುಜರಾತ್ ಜೈಂಟ್ಸ್ ತಂಡವು ಮೂರು ಪಂದ್ಯಗಳನ್ನು ಆಡಿದ್ದು, ಒಂದರಲ್ಲಿ ಡ್ರಾ ಆಗಿದೆ, ಇನ್ನೆರಡು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ. ಈ ಮೂಲಕ ಅಂಕಪಟ್ಟಿಯಲ್ಲಿ ಮೊದಲ ಸ್ಥಾನವನ್ನು ಪಡೆದುಕೊಂಡಿದೆ.


ಇದನ್ನೂ ಓದಿ: ಆರ್‌ಸಿಬಿ...ಆರ್‌ಸಿಬಿ... ಎಂದು ಕೂಗಿದ ಫ್ಯಾನ್ಸ್‌ ಮೇಲೆ ಕಿಂಗ್‌ ಕೊಹ್ಲಿ ಗರಂ..!


ಇನ್ನೊಂದೆಡೆ ಮಣಿಪಾಲ್ ಟೈಗರ್ಸ್ ತಂಡವು ಮೊದಲ ಪಂದ್ಯದಲ್ಲಿ ಡ್ರಾ ಕಂಡುಕೊಂಡಿದ್ದು, ಇನ್ನುಳಿದ ಎರಡೂ ಪಂದ್ಯಗಳಲ್ಲಿ ಸೋಲು ಅನುಭವಿಸಿದೆ. ಈ ಮೂಲಕ ಕೊನೆಯ ಸ್ಥಾನದಲ್ಲಿದೆ. ಸದ್ಯ ಇಂಡಿಯಾ ಕ್ಯಾಪಿಟಲ್ಸ್ ಮತ್ತು ಭಿಲ್ವಾರ ಕಿಂಗ್ಸ್ ನಡುವೆ ಪಂದ್ಯ ನಡೆಯಲಿದ್ದು, ಯಾರು ಗೆಲುವಿನ ಹಾದಿ ಹಿಡಿಯಲಿದ್ದಾರೆ ಎಂದು ಕಾದುನೋಡಬೇಕಿದೆ.


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.