ಮಾಸ್ಕೋ:  ಫಿಫಾ ಫುಟ್ಬಾಲ್ ವಿಶ್ವಕಪ್ ನ ಲೀಗ್  ಪಂದ್ಯಾವಳಿಯಲ್ಲಿ ಅರ್ಜೇಂಟಿನಾದ ಆಟಗಾರ ಲಿಯೋನಲ್ ಗೆ ಮೆಸ್ಸಿ ಸಿಕ್ಕ ಪೆನಾಲ್ಟಿ ಅವಕಾಶ ಮಿಸ್ ಮಾಡಿಕೊಂಡಿದ್ದರಿಂದ ಐಸ್‍ಲ್ಯಾಂಡ್ ವಿರುದ್ದದ ಪಂದ್ಯ ನೀರಸ ಡ್ರಾನಲ್ಲಿ ಅಂತ್ಯವಾಯಿತು. 


COMMERCIAL BREAK
SCROLL TO CONTINUE READING

ಮಾಸ್ಕೋದಲ್ಲಿ ನಡೆದ ಡಿ ಗ್ರೂಪ್ ಮ್ಯಾಚ್ ನಲ್ಲಿ ಬಲಿಷ್ಠ ಅರ್ಜೇಂಟಿನಾ ಮತ್ತು ಐಸ್‍ಲ್ಯಾಂಡ್ ತಂಡಗಳು 1-1 ಗೋಲುಗಳಿಂದ ಪಂದ್ಯವನ್ನು ಡ್ರಾ ಮಾಡಿಕೊಂಡಿವೆ. 
 
ಈವರೆಗೂ ಎರಡು ಬಾರಿ ವಿಶ್ವಕಪ್ ಗೆದ್ದಿರುವ ಅರ್ಜೆಂಟಿನಾ ತಂಡವು ಈ ಬಾರಿ ಪ್ರಶಸ್ತಿ ಗೆಲ್ಲುವ ನೆಚ್ಚಿನ ತಂಡಗಳಲ್ಲಿ ಒಂದು. ಆದರೆ ಲೀಗ್ ಪಂಧ್ಯದಲ್ಲಿ  ಐಸ್ಲ್ಯಾಂಡ್ ವಿರುದ್ದ ಗೆಲ್ಲುವು ಸಾಧ್ಯತೆ ಇದ್ದ ಪಂಧ್ಯವನ್ನು ನಿರಸವಾಗಿ ಡ್ರಾ ದಲ್ಲಿ ಅಂತ್ಯಗೊಂಡಿತು. ಲಿಯೋನಲ್ ಮೆಸ್ಸಿಯವರು ತಮ್ಮಗೆ ಸಿಕ್ಕ ಪೆನಾಲ್ಟಿ ಅವಕಾಶವನ್ನು ಸರಿಯಾಗಿ ಬಳಸಿಕೊಳ್ಳದೆ ಇರುವ ಕಾರಣ ಅರ್ಜೆಂಟಿನಾ ಡ್ರಾಗೆ ತೃಪ್ತಿಪಟ್ಟುಕೊಂಡಿತು.